More

    ಮಂಕಾಗುತ್ತಿದೆ ಕುಂಬಾರರ ಮಣ್ಣಿನ ಹಣತೆ ಬೆಳಕು

    ಕೊಡೇಕಲ್: ಕುಂಬಾರು ದಸರಾ, ದೀಪಾವಳಿ ಹಬ್ಬದ ನಿಮಿತ್ತ ವಿವಿಧ ತರಹದ ಮಣ್ಣಿನ ಹಣತೆ ತಯಾರಿಸಿ ಮಾರಾಟ ಮಾಡುತ್ತಾರೆ. ಆದರೆ ಆಧುನಿಕತೆ ಭರಾಟೆಗೆ ಸಿಲುಕಿ ಮಣ್ಣಿನ ಹಣತೆ ಖರೀದಿಸುವರ ಸಂಖ್ಯೆ ಇಳಿಮುಖವಾಗುತ್ತಿದ್ದು, ಬೇರೆಯವರ ಮನೆಗಳಿಗೆ ಬೆಳಕು ನೀಡುವ ಕುಂಬಾರರ ಬದುಕಿನಲ್ಲಿ ಕತ್ತಲೆ ಆವರಿಸಿಕೊಂಡಿದೆ.

    ಗ್ರಾಮದ ಕುಟುಂಬಗಳು ಕಳೆದ ಎರಡು ವಾರಗಳಿಂದ ಹಣತೆ ಮಾಡುವ ಕಾರ್ಯದಲ್ಲಿ ತೊಡಗಿ ನಿತ್ಯ೧೦೦ ರಿಂದ ೨೦೦ ಹಣತೆ ತಯಾರಿಸಿ ಮಾರುಕಟ್ಟೆಗೆ ತಂದರೂ ಗ್ರಾಹಕರು ಈಗ ಬರಬಹುದು ಆಗ ಬರಬಹುದೆಂಬ ನಿರೀಕ್ಷೆಯಲ್ಲಿ ದಾರಿ ನೋಡುವಂತಹ ಸ್ಥಿತಿ ಎದುರಾಗಿದೆ.

    ಹಣತೆಗಳನ್ನು ತಯಾರಿಸಲು ಬೇಕಾಗುವ ಜೇಡಿ ಮಣ್ಣಿನ ಅಭಾವದ ನಡುವೆಯೂ ತಮ್ಮ ಕುಲಕಸಬನ್ನು ಬಿಡಬಾರದೆಂಬ ಏಕೈಕ ಕಾರಣದಿಂದ ದೂರದ ಸ್ಥಳಗಳಿಗೆ ಹೋಗಿ ಹಣ ನೀಡಿ ಜೇಡಿ ಮಣ್ಣು ಖರೀದಿಸಿ ತಂದು ಸಾಕಷ್ಟು ಶ್ರಮ ವಹಿಸಿ ವಾರಗಳ ಕಾಲ ಹಣತೆ ತಯಾರಿಸುವ ಕುಂಬಾರರಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಆಕರ್ಷಕ ಮಾದರಿಯ ಚೀನಿ, ಪಿಂಗಾಣಿ ಹಣತೆಗಳು ಹೊಡೆತ ನೀಡುತ್ತಿವೆ. ಆಕರ್ಷಕ ಬಣ್ಣ, ಚಿತ್ತಾರಗಳಿಗೆ ಮಾರುಹೋಗುತ್ತಿರುವ ಜನರು ಪಿಂಗಾಣಿ ಹಣತೆಗಳನ್ನು ಹೇಳುವ ದರಕ್ಕೆ ಖರೀದಿಸುತ್ತಿರುವುದು ಕುಂಬಾರರಿಗೆ ನಿರಾಶೆಯಾದಂತಾಗಿದೆ.

    ಒAದು ಜತೆ ಪಣತೆಗಳಿಗೆ ೧೦ರಿಂದ ೨೦ ರೂ. ಪಡೆಯುವ ಕುಂಬಾರರು ಇನ್ನೂ ಗ್ರಾಮದ ಪ್ರಮುಖ ಮನೆಗಳಲ್ಲಿ ಅವರು ನೀಡುವ ದವಸ ಧಾನ್ಯಗಳನ್ನು ತೆಗೆದುಕೊಂಡು ಬರುತ್ತಾರೆ.

    ಒಟ್ಟಾರೆ ಮಾರುಕಟ್ಟೆಗೆ ಎಷ್ಟೇ ಚಿತ್ತಾಕರ್ಷಕ ಚೀನಿ ಮಣ್ಣಿನ ಹಣತೆ ಬಂದರೂ ಕೂಡಾ ಸದಾ ಶ್ರೇಷ್ಠತೆಯನ್ನು ಪಡೆದಿರುವ ಮಣ್ಣಿನ ಪಣತೆ ಸರ್ವಕಾಲಕ್ಕೂ ಶ್ರೇಷ್ಠವಾಗಿವೆ ಇಂತಹ ಬೆಳಕು ನೀಡು ಪಣತೆಗಳನ್ನು ತಯಾರಿಸುವ ಕುಂಬಾರರು ಮಾತ್ರ ದೀಪದ ಬುಡದಲ್ಲಿ ಕತ್ತಲು ಎನ್ನುವಂತೆ ಇನ್ನೂ ತೊಂದರೆ ಅನುಭವಿಸುತ್ತಿರುವುದು ಮಾತ್ರ ವಿಪರ್ಯಾಸ.

    ಕರ್ಪೂರ ಮತ್ತು ಚೀನಿ ಮಣ್ಣಿನ ಪಣತೆ ಮಾರುಕಟ್ಟೆಗೆ ಬಂದ ನಂತರ ನಾವು ತಯಾರಿಸುವ ಮಣ್ಣಿನ ಪಣತೆಗಳ ಬೆಲೆ ಕಳೆದುಕೊಂಡಿವೆ. ಆದರೂ ಕೂಡ ತಲೆ ತಲಾಂತರಗಳಿಂದ ಬಂದಿರುವ ನಮ್ಮ ಕುಲಕಸಬನ್ನು ಬಿಡಬಾರದೆಂಬ ಉದ್ದೇಶದಿಂದ ಮುಂದುವರಿಸಿಕೊಂಡು ಬಂದಿದ್ದೇವೆ.
    | ವಿಜಯಲಕ್ಷ್ಮೀ ಕುಂಬಾರ ಕೊಡೇಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts