More

    ಎಟಿಎಂ ಯಂತ್ರಕ್ಕೆ ದುಡ್ಡು ಹಾಕಿದ್ರೆ ಇನ್ನು ಸಿಗಲಿದೆ ಅಕ್ಕಿ: ಏನಿದು ಯೋಜನೆ?

    ಬೆಂಗಳೂರು: ಎಟಿಎಂನಲ್ಲಿ ದುಡ್ಡು ಬರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಎಟಿಎಂನಲ್ಲಿ ನೀವೇ ದುಡ್ಡು ಹಾಕಿದ್ರೆ ಅಕ್ಕಿ ಸಿಗುತ್ತೆ ಎಂದು ಗೊತ್ತಾ?

    ಕೆಲವು ದೇಶಗಳಲ್ಲಿ ಜನಪ್ರಿಯವಾಗಿರುವ ಈ ಯೋಜನೆ ಶೀಘ್ರದಲ್ಲಿಯೇ ರಾಜ್ಯಕ್ಕೂ ಕಾಲಿಡಲಿದೆ. ಇದಾಗಲೇ ಯಂತ್ರಕ್ಕೆ ದುಡ್ಡು ಹಾಕಿದರೆ ನೀರು ಬರುವ ಯೋಜನೆ ಕೆಲವು ಕಡೆಗಳಲ್ಲಿ ಅಳವಡಿಸಲಾಗಿದೆ. ಇದಕ್ಕೆ ವಾಟರ್‌ ಎಟಿಎಂ ಎಂದು ಹೆಸರು. ಈಗ ಅದೇ ಮಾದರಿಯಲ್ಲಿ ಅಕ್ಕಿ ಬರುವ ‘ರೈಸ್‌ ಎಟಿಎಂ’ ಯೋಜನೆ ಜಾರಿಗೆ ತರಲಾಗುತ್ತಿದೆ.

    ಪಡಿತರ ಚೀಟಿ ಹೊಂದಿರುವವರಿಗೆ ಅನುಕೂಲವಾಗುವಂತೆ ನೀರಿನ ಎಟಿಎಂ ಮಾದರಿಯಲ್ಲಿಯೇ ರೈಸ್ ಎಟಿಎಂ ಅಳವಡಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಚಿಂತನೆ ನಡೆಸಿದೆ.

    ಲಾಕ್‌ಡೌನ್ ಇರುವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಆಹಾರಕ್ಕೆ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ವಿಯೆಟ್ನಾಂ ಹಾಗೂ ಮಲೇಷ್ಯಾದಲ್ಲಿ ರೈಸ್ ಎಟಿಎಂ ಅಳವಡಿಸುವ ಮೂಲಕ ಅಕ್ಕಿ ವಿತರಣೆ ಮಾಡಲಾಗಿತ್ತು. ಈಗ ಅದೇ ಮಾದರಿಯನ್ನು ಇಲ್ಲಿಯೂ ತರಲು ಸಕಲ ಸಿದ್ಧತೆ ನಡೆಸಲಾಗಿದೆ.

    ಏನಿದು ಎಟಿಎಂ: ಎಟಿಎಂ ಇದರ ಫುಲ್‌ಫಾರ್ಮ್‌ ಆಲ್‌ ಟೈಂ ಮನಿ, ಎನಿ ಟೈಂ ಮನಿ ಎಂದೇ ಹಲವರು ತಿಳಿದುಕೊಂಡಿದ್ದಾರೆ. ಈ ಯಂತ್ರದಲ್ಲಿ ದುಡ್ಡು ಬರುವುದು ಮಾತ್ರ ತಿಳಿದಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಅರ್ಥ ಕಲ್ಪಿಸಲಾಗಿದೆ. ಆದರೆ ನಿಜವಾಗಿಯೂ ಎಟಿಎಂ ಫುಲ್‌ಫಾರ್ಮ್‌ Automated teller machine (ಸ್ವಯಂಚಾಲಿತ ವಿತರಣಾ ಯಂತ್ರ).

    ಇದನ್ನೂ ಓದಿ: ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ ರಜೆಗಳು ಎಷ್ಟಿವೆ? ಇಲ್ಲಿದೆ ನೋಡಿ ಮಾಹಿತಿ…

    ಜನರು ಸ್ವಿಚ್ ಪ್ರೆಸ್ ಮಾಡಿದಾಗ ಎಟಿಎಂ ನಿರ್ವಾಹಕರ ಮೊಬೈಲ್‌ಗೆ ಸಂದೇಶ ಹೋಗುತ್ತದೆ. ಆಮೇಲೆ ದೊಡ್ಡ ಡ್ರಂಗಳಲ್ಲಿ ತುಂಬಿರುವ ಅಕ್ಕಿ ಕೊಳವೆ ಮೂಲಕ ಹೊರಬರುತ್ತದೆ. ಜನರು ಕಡ್ಡಾಯವಾಗಿ ಬ್ಯಾಗ್‌ ತೆಗೆದುಕೊಂಡು ಹೋಗಬೇಕು. ಕೊಳವೆಯಲ್ಲಿ ಬರುವ ಅಕ್ಕಿಯನ್ನು ಹಿಡಿದುಕೊಳ್ಳಬೇಕು.

    ದಿನಕ್ಕೆ ಒಬ್ಬರಿಗೆ ಇಷ್ಟೇ ಪ್ರಮಾಣದ ಅಕ್ಕಿ ನೀಡಬೇಕೆಂದು ಮೊದಲೇ ಯಂತ್ರಕ್ಕೆ ನಿಗದಿಪಡಿಸಲಾಗಿರುತ್ತದೆ. ಒಂದು ವೇಳೆ ವ್ಯಕ್ತಿ 2 ಬಾರಿ ಅಕ್ಕಿಗೆ ಬಂದರೆ ಯಂತ್ರದ ಬಳಿ ಇರುವ ಕ್ಯಾಮರಾಗಳು ಆತನ ಚಹರೆಯನ್ನು ಪತ್ತೆಹಚ್ಚುತ್ತವೆ.

    ಈ ಯೋಜನೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವ ಬದಲು ಸುಲಭವಾಗಿ ಅಕ್ಕಿ ಪಡೆಯಲು ಅನುಕೂಲವಾಗುತ್ತದೆ.

    ಎಣ್ಣೆ ಪ್ರಿಯರಿಗೆ ‘ಶುಭ ಮಂಗಳವಾರ’: ಸರ್ಕಾರದಿಂದ ಸಿಕ್ಕಿದೆ ‘ಕಿಕ್‌’ ಏರಿಸುವ ಸುದ್ದಿ

    ಆಂಟಿನೇ ಬೇಕೆಂದು ಐದು ಮದುವೆಯಾದವಳ 6ನೇ ಗಂಡನಾಗಿ ಹೋದ ಚಿಕ್ಕಮಗಳೂರು ಯುವಕ!

    ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ ರಜೆಗಳು ಎಷ್ಟಿವೆ? ಇಲ್ಲಿದೆ ನೋಡಿ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts