More

    ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ ರಜೆಗಳು ಎಷ್ಟಿವೆ? ಇಲ್ಲಿದೆ ನೋಡಿ ಮಾಹಿತಿ…

    ನವದೆಹಲಿ: ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಹೆಚ್ಚಿನ ಹಬ್ಬಗಳು ಇಲ್ಲ. ಈ ಹಿನ್ನೆಲೆಯಲ್ಲಿ ಹಲವು ದಿನಗಳು ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಲಿದೆ.
    ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಸೆಪ್ಟೆಂಬರ್‌ ತಿಂಗಳಿನಲ್ಲಿ ಯಾವ್ಯಾವಾಗ ರಜೆಗಳು ಇರಲಿವೆ ಎಂಬ ಬಗ್ಗೆ ಮಾಹಿತಿ ನೀಡಿದೆ.

    2 ಮತ್ತು 4 ನೇ ಶನಿವಾರ ಮತ್ತು ಎಲ್ಲಾ ಭಾನುವಾರ ಬ್ಯಾಂಕ್‌ಗಳು ಯಾವಾಗಲೂ ಕಾರ್ಯ ನಿರ್ವಹಿಸುವುದಿಲ್ಲ. ಇವುಗಳನ್ನು ಹೊರತುಪಡಿಸಿ ರಾಜ್ಯದಿಂದ ರಾಜ್ಯಕ್ಕೆ ಕೆಲವೊಂದು ರಜಾದಿನಗಳಲ್ಲಿ ವ್ಯತ್ಯಾಸವಿರುತ್ತದೆ.

    ಇದನ್ನೂ ಓದಿ: ಇಂದಿನಿಂದ ಬಾರ್, ಕ್ಲಬ್ ಅನ್​ಲಾಕ್; 21ರ ಬಳಿಕ ಶಾಲೆಗಳಿಗೆ ಸಣ್ಣ ವಿನಾಯ್ತಿ; ಶುಭಸಮಾರಂಭಕ್ಕೆ ಕೊಂಚ ರಿಯಾಯ್ತಿ

    ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ತಿಂಗಳ 30 ದಿನಗಳಲ್ಲಿ 23 ದಿನ ಬ್ಯಾಂಕ್‌ಗಳು ತೆರೆದಿರಲಿವೆ. ಈ ತಿಂಗಳಿಗೆ ಇಎಂಐ ಮೊರಟೋರಿಯಂ ಅಂತ್ಯವಾಗಲಿದ್ದು, ಸಾಲ ಪಾವತಿಯ ಅವಧಿ ಪರಿಷ್ಕರಣೆಗೆ ಅವಕಾಶವಿದೆ. ಬ್ಯಾಂಕ್‌ಗೆ ತೆರಳಿ ಸಾಲ ಪಡೆದವರು ಈ ಆಯ್ಕೆಯನ್ನು ಆಯ್ದುಕೊಳ್ಳಬಹುದಾಗಿದೆ. ಕೆಲವು ಬ್ಯಾಂಕ್‌ಗಳು ಫೋನ್‌ ಮೂಲಕವೂ ಈ ಸೇವೆ ನೀಡುತ್ತವೆ.

    ಶನಿವಾರ, ಭಾನುವಾರಗಳನ್ನು ಸೇರಿಸಿ ಕರ್ನಾಟಕದಲ್ಲಿ ರಜೆ ಇರುವ ದಿನಗಳು ಇವು:
    ಸೆಪ್ಟೆಂಬರ್‌ 6 ಭಾನುವಾರ
    ಸೆಪ್ಟೆಂಬರ್‌ 12 ಎರಡನೇ ಶನಿವಾರ
    ಸೆಪ್ಟೆಂಬರ್‌ 13 ಭಾನುವಾರ
    ಸೆಪ್ಟೆಂಬರ್‌ 17 ಮಹಾಲಯ ಅಮವಾಸ್ಯೆ (ಗುರುವಾರ)
    ಸೆಪ್ಟೆಂಬರ್‌ 20 ಭಾನುವಾರ
    ಸೆಪ್ಟೆಂಬರ್‌ 26 ನಾಲ್ಕನೇ ಶನಿವಾರ
    ಸೆಪ್ಟೆಂಬರ್‌ 27 ಭಾನುವಾರ

    ಇದನ್ನು ಬಿಟ್ಟು ಬೇರೆ ರಾಜ್ಯಗಳಲ್ಲಿ ಇರುವ ರಜೆಗಳು
    ಸೆಪ್ಟೆಂಬರ್ 1 : ಓಣಂ (ಕೇರಳ)
    ಸೆಪ್ಟೆಂಬರ್ 16 : ವಿಶ್ವಕರ್ಮ ದಿನ )ರಾಜಸ್ಥಾನ, ಹರಿಯಾಣ ಹಾಗೂ ಪಂಜಾಬ್)
    ಸೆಪ್ಟೆಂಬರ್ 21: ಶ್ರೀ ನಾರಾಯಣ ಗುರು ಸಮಾಧಿ (ಕೇರಳ)
    ಸೆಪ್ಟೆಂಬರ್ 23 : ಹುತಾತ್ಮರ ದಿನಾಚರಣೆ (ಹರಿಯಾಣ)
    ಸೆಪ್ಟೆಂಬರ್ 28 : ಭಗತ್ ಸಿಂಗ್ ಜಯಂತಿ (ಪಂಜಾಬ್)

    ಮಧ್ಯಾಹ್ನ ಮಲಗುವ ಅಭ್ಯಾಸವಿದೆಯೆ? ಹಾಗಿದ್ದರೆ ಇದನ್ನೊಮ್ಮೆ ಓದಿ ನೋಡಿ…

    ನಸುಕಿನಲ್ಲಿಯೇ ಹಾಸನದಲ್ಲಿ ಗುಂಡಿನ ಸದ್ದು: ಜೋಡಿಕೊಲೆ ಆರೋಪಿ ಅರೆಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts