More

    ಮಧ್ಯರಾತ್ರಿ ನಡುಗಿದ ಅರುಣಾಚಲ ಪ್ರದೇಶದ ಚಾಂಗ್ಲಾಂಗ್: ಭೂಮಿಯ ಕಂಪನಕ್ಕೆ ಜನರು ತತ್ತರ

    ಚಾಂಗ್ಲಾಂಗ್ : ಸವಿನಿದ್ದೆಯಲ್ಲಿದ್ದ ಅರುಣಾಚಲ ಪ್ರದೇಶದ ಚಾಂಗ್ಲಾಂಗ್​ನ ಜನರು ಮಧ್ಯರಾತ್ರಿ ವೇಳೆ ಭೂಮಿ ನಡುಗಿದ ಶಬ್ದವಾಗಿ ಕಂಗಾಲಾಗಿ ಹೋಗಿದ್ದಾರೆ.

    ಮಧ್ಯರಾತ್ರಿ ಸುಮಾರು 1.25ರ ಹೊತ್ತಿಗೆ ಭೂಮಿ ಕಂಪಿಸಿ, ಮನೆಯಲ್ಲಿರುವ ಸಾಮಗ್ರಿಗಳೆಲ್ಲ ನೆಲಕ್ಕುರುಳಿವೆ. ಇದರಿಂದ ಜನರು ದಿಕ್ಕಾಪಾಲಾಗಿ ಓಡಿಬಂದಿರುವ ಘಟನೆ ನಡೆದಿದೆ.

    4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮೂಲಗಳು ಹೇಳಿವೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(ಎನ್‌ಸಿಎಸ್) ನೀಡಿರುವ ಮಾಹಿತಿಯ ಬುಧವಾರ ಮುಂಜಾನೆ 1.25ಕ್ಕೆ ಚಾಂಗ್ಲಾಂಗ್‌ನಲ್ಲಿ ಭೂಕಂಪ ಸಂಭವಿಸಿದೆ.

    ಇದನ್ನೂ ಓದಿ:  ಚಾಮರಾಜನಗರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ

    ಸದ್ಯ ಯಾವುದೇ ಸಾವು-ನೋವಾದ ಕುರಿತು ವರದಿಯಾಗಿಲ್ಲ. ಆದರೆ ಹೆಚ್ಚಿನ ಮಾಹಿತಿ ಇನ್ನೂ ಬರಬೇಕಿದೆಯಷ್ಟೇ. ಅರುಣಾಚಲ ಪ್ರದೇಶ ಮಾತ್ರವಲ್ಲದೇ ದೇಶದ ಹಲವೆಡೆ ಕಳೆದ ಕೆಲ ದಿನಗಳಿಂದ ಭೂಕಂಪನದ ಅನುಭವ ಆಗುತ್ತಲೇ ಇದ್ದು, ಕಡಿಮೆ ತೀವ್ರತೆಯ ಹಿನ್ನೆಲೆಯಲ್ಲಿ ಅಷ್ಟಾಗಿ ಜನರಿಗೆ ತಿಳಿದುಬರುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಪೇಷಂಟಾಗಿ ಹೋದ ನಾಲ್ಕು ಮಕ್ಕಳ ತಾಯಿ ವಿವಾಹಿತ ವೈದ್ಯನನ್ನು ಪ್ರೀತಿಸಿ ಹೆಣವಾದ್ಳು!

    ಥೂ ಕರೆಂಟ್​ ಇಲ್ಲ… ಏನ್​ ಮಾಡಿದ್ತಾರೆ ಎಲ್ಲಾ… ಅನ್ನೋ ಮುನ್ನ ಇದನ್ನೊಮ್ಮೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts