More

    ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

    ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ? ಪ್ರಶ್ನೆ: ನನ್ನ ವಯಸ್ಸು 28, ಹುಡುಗಿಯ ವಯಸ್ಸು 26. ಒಂದುದಿನ ಪರಸ್ಪರ ಒಪ್ಪಿಗೆ ಮೇರೆಗೆ ಅವಳೊಡನೆ ಲೈಂಗಿಕ ಸಂಪರ್ಕ ಮಾಡಿದೆ. ಅದು ನನಗೆ ಮೊದಲ ಅನುಭವ. ಆದರೂ ಸ್ನೇಹಿತರಿಂದ, ಇಂಟರ್​ನೆಟ್​ ನೋಡಿ ಅದರ ಮಾಹಿತಿ ಇತ್ತು. ಆ ಅನುಭವದಿಂದ ಅವಳು ಈ ಮೊದಲು ಅನೇಕಬಾರಿ ಲೈಂಗಿಕ ಸಂಪರ್ಕ ಮಾಡಿದ್ದಾಳೆ ಎಂಬ ಸಂದೇಹ ನನ್ನನ್ನು ಕಾಡುತ್ತಿದೆ.

    ಅವಳನ್ನು ಕೇಳಿದರೆ, ನಾನು ಇಲ್ಲಿಯವರೆಗೂ ಯಾವುದೇ ಗಂಡಸಿನ ಸಂಪರ್ಕ ಮಾಡಿಲ್ಲ ಎಂದು ಹೇಳುತ್ತಾಳೆ. ಅದನ್ನೂ ತುಂಬ ದುಃಖದಿಂದಲೇ ಹೇಳಿದಳು. ಈಗ ಮತ್ತೆ ಕೂಡಲು ಅವಳು ಸಹಕರಿಸುತ್ತಿಲ್ಲ. ಮೊದಲು ಬೆನ್ನುನೋವು ಎಂದು ಹೇಳುತ್ತಿದ್ದಳು.
    ಈಗ ಪ್ರತಿ ಶುಕ್ರವಾರ ಉಪವಾಸ ಮಾಡುತ್ತೇನೆ ಅದಕ್ಕಾಗಿ ಎಂದು ಸಮಜಾಯಿಷಿ ನೀಡುತ್ತಾಳೆ. ನನಗೆ ಅವಳ ಜತೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ಎರಡು ಸೆಕೆಂಡ್ ಸಂಪರ್ಕ ಮಾಡಿದಾಗ ಯಾವುದೇ ಖುಷಿಯ ಅನುಭವ ಆಗಿಲ್ಲ. ಮುಂದೆ ಅವಳನ್ನು ಮದುವೆಯಾದರೆ ನನಗೆ ಲೈಂಗಿಕ ತೃಪ್ತಿ ಸಿಗಬಹುದೇ? ಅಥವಾ ಅವಳ ಜತೆ ಮದುವೆ ಮುರಿದು ಬಿಡಲೇ?

    ಉತ್ತರ: ನೀವು ಆ ಹುಡುಗಿಯ ಚರಿತ್ರೆ ಬಗ್ಗೆಯೇ ಚಿಂತಿಸುತ್ತಿದ್ದೀರಲ್ಲ, ನೀವು ಮಾಡುತ್ತಿರುವುದು ಸರಿಯಿದೆಯೇ? ಹುಡುಗಿ ಎಲ್ಲ ರೀತಿಯ ಪರಿಶುದ್ಧತೆಯಿಂದ ಇರಬೇಕು ಎಂದು ಯೋಚಿಸುವ ನಿಮ್ಮಂತೆಯೇ ಪ್ರತಿ ಹುಡುಗಿಯೂ ತಾನು ಪ್ರೀತಿಸುವ, ವಿವಾಹವಾಗುವ ಹುಡುಗನು ಶೀಲವಂತನಾಗಿರಬೇಕೆಂದು ಬಯಸುವುದೂ ಸಹಜ. ನಿಮ್ಮಲ್ಲಿರುವ ಧೂರ್ತ ಆಲೋಚನೆಯ ಬಗ್ಗೆ ಅರಿವಿರದೇ ನಿಮ್ಮ ಗೆಳತಿ ನಿಮ್ಮೊಂದಿಗೆ ಲೈಂಗಿಕ ಸಂಪರ್ಕಕ್ಕೆ ಒಪ್ಪಿ ತಪ್ಪು ಮಾಡಿದ್ದಾಳೆ.

    ಭಯ, ಆತಂಕ, ಪ್ರೀತಿಯಿಂದ ಆಕೆ ಒಪ್ಪಿರಬಹುದು. ಆದರೆ ನಿಮ್ಮಿಂದ ಇಂತಹ ಅನಾಗರಿಕ ವರ್ತನೆಯನ್ನು ನಿರೀಕ್ಷಿಸದೇ ಇದ್ದ ಹುಡುಗಿಗೆ ನಿಜಕ್ಕೂ ಶಾಕ್ ಆಗಿರಬಹುದು. ಲೈಂಗಿಕತೆ ಬಗ್ಗೆ ನಿಮಗೆ ತಪ್ಪು ಕಲ್ಪನೆಗಳಿವೆ ಎನಿಸುತ್ತದೆ.

    ಬ್ಲೂಫಿಲ್ಮ್ಂಗಳು ಉತ್ಪ್ರೇಕ್ಷೆಯಿಂದ ಕೂಡಿರುತ್ತವೆ. ಅದೆಲ್ಲವೂ ಸತ್ಯವಲ್ಲ. ದೇಹ, ಮನಸ್ಸುಗಳ ಮಿಲನವಾದಾಗ ಮಿದುಳಿನಲ್ಲಿ ಅಡ್ರಿನಾಲಿನ್ ಸ್ರಾವ ಹೆಚ್ಚಾಗಿ ಸಂತೋಷ ಆವರಿಸಿ ಲೈಂಗಿಕ ತೃಪ್ತಿ ಉಂಟಾಗುತ್ತದೆ. ಮದುವೆಯ ನಂತರ ನಿಮ್ಮದೇ ಏಕಾಂತದ ಸಮಯ ದೊರೆಯುವುದರಿಂದ ಸಂಪೂರ್ಣ ತೃಪ್ತಿ ಸಿಗುತ್ತದೆ. ಆ ಹುಡುಗಿಯ ಬಗ್ಗೆ ಯಾವುದೇ ಸಂಶಯ ಬೇಡ. ನೀವು ಕೇಳುವ ಪ್ರಶ್ನೆಯಿಂದ ತನಗೆ ನೋವಾಗಿದೆ ಎಂದು ಆಕೆ ನಿಮ್ಮನ್ನು ಬೈಯದೇ ದುಃಖಪಟ್ಟಿದ್ದಾಳೆ. ನಿಮ್ಮನ್ನು ಕ್ಷಮಿಸಿದ್ದಾಳೆ.

    ಆದರೆ ಆ ಹುಡುಗಿಯ ಒಳ್ಳೆಯತನ ನಿಮಗೆ ಅರ್ಥವಾಗದೇ ಮದುವೆ ಮುರಿಯುವ ಬಗ್ಗೆ ಮಾತನಾಡುತ್ತಿದ್ದೀರಲ್ಲ? ನೀವೇನೋ ಇನ್ನೊಂದು ಹುಡುಗಿಯನ್ನು ಮದುವೆಯಾಗಬಹುದು. ಆದರೆ ಆ ಹುಡುಗಿಯನ್ನು ಯಾರು ಮದುವೆಯಾಗುತ್ತಾರೆ? ಒಂದು ಬಾರಿ ನಿಮ್ಮೊಂದಿಗೆ ಲೈಂಗಿಕ ಸಂಪರ್ಕ ಮಾಡಿದ ತಪ್ಪಿಗೆ ಜೀವನಪೂರ್ತಿ ನೋವು ಅನುಭವಿಸಬೇಕೆ? ಇಂತಹ ಅಸಂಬದಟಛಿ ಯೋಚನೆಗಳನ್ನೆಲ್ಲ ಬಿಟ್ಟು ಅವಳನ್ನು ಮದುವೆಯಾಗಿ ಸಂತೃಪ್ತಿ, ನೆಮ್ಮದಿಯ ಜೀವನ ನಡೆಸಿ. ಹುಡುಗಿಯೆಂದರೆ ಆಟದ ವಸ್ತುವಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ.

    ಡಾ.ವಸುಂಧರಾ ಭೂಪತಿಯವರ ಇನ್ನೂ ಹೆಚ್ಚಿನ ಸಲಹೆಗೆ http://vijayavani.net ಆರೋಗ್ಯ ಅಂಕಣ ನೋಡಿ

    ಪತ್ನಿ ದೈಹಿಕವಾಗಿ ಸಹಕರಿಸುತ್ತಿಲ್ಲವೆಂದು ನಾನೇ ‘ಟೂ ಪೀಸ್’​ ಧರಿಸುತ್ತಿದ್ದೇನೆ- ಇದು ತಪ್ಪಾ?

    ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?

    ತುಟಿ ಸದಾ ಒಣಗಿ ಕಪ್ಪು ಕಲೆಯಾಗುತ್ತದೆ- ಮನೆಮದ್ದು ಏನಾದರೂ ಇದೆಯೆ?

    ಋತುಸ್ರಾವ ನಿಂತ ಮೇಲೂ ಮತ್ತೆ ಆಗಿ ಹಿಂಸೆಯಾಗುತ್ತಿದೆ- ಪರಿಹಾರ ತಿಳಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts