More

    ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?

    ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?ಪ್ರಶ್ನೆ: ನನಗೆ ಮದುವೆ ಆಗಿ 3 ವರ್ಷ ಆಗಿದೆ. ಒಂದು ಹೆಣ್ಣು ಮಗು ಇದೆ. ಪುನಃ ನಾನು 2 ಬಾರಿ ಗರ್ಭ ಧರಿಸಿದೆ. ಈಗಲೇ ಮಗು ಬೇಡವೆಂದು 2 ಸಲ ಮಾತ್ರೆ ತಗೆದುಕೊಂಡೆ. 2ನೇ ಸಲ ತೆಗೆದುಕೊಂಡಾಗಿನಿಂದ ನನಗೆ ಬಿಳಿ ಸೆರಗು ಹೋಗುತ್ತಿದೆ. ಇದಕ್ಕೆ ಪರಿಹಾರ ತಿಳಿಸಿ.

    ಉತ್ತರ: ನಿಮಗೆ ಸ್ವಲ್ಪ ಮಟ್ಟಿನ ಬಿಳುಪು ಹೋಗುತ್ತಿದ್ದಲ್ಲಿ ಅದರ ಬಗ್ಗೆ ಚಿಂತೆ ಬೇಡ. ಬಿಳುಪು ಅತಿಯಾಗಿ ಸ್ರವಿಸುತ್ತಿದ್ದಲ್ಲಿ ಹಳದಿ ಬಣ್ಣದಿಂದ ಕೂಡಿದ್ದಲ್ಲಿ, ನವೆ ಯಾಗುತ್ತಿದ್ದಲ್ಲಿ ಸೋಂಕು ತಗುಲಿರುವ ಸಾಧ್ಯತೆಯಿರುತ್ತದೆ.

    ನೀವು ಧರಿಸುವ ಒಳ ಉಡುಪನ್ನು ಬಿಸಿ ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ. ಒಳ ಉಡುಪುಗಳು ಹಳೆಯದಾಗಿದ್ದು 3 ತಿಂಗಳಿಗೂ ಮೇಲ್ಪಟ್ಟು ಅವುಗಳನ್ನು ಬಳಸುವುದು ಬೇಡ. ಒಂದು ಲೀಟರ್ ನೀರಿಗೆ 2 ಚಮಚ ಅರಿಶಿಣ ಪುಡಿ ಹಾಕಿ ಕುದಿಸಿ ಆರಿಸಿ ನಂತರ ಆ ಕಷಾಯದಿಂದ ಜನನಾಂಗವನ್ನು ತೊಳೆದುಕೊಳ್ಳಿ. ಮಿಲನದ ನಂತರ ಪ್ರತಿ ಬಾರಿಯೂ ಸ್ವಚ್ಛಗೊಳಿಸುತ್ತಿರಿ.

    ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…

    ಮೆನೋಪಾಸ್ ನಂತರ ಲೈಂಗಿಕಕ್ರಿಯೆಯಲ್ಲಿ ತೊಂದರೆಯಾದರೆ ಆಯುರ್ವೇದದಲ್ಲಿದೆ ಪರಿಹಾರ…

    ಮಾಸಿಕ ಋತುಸ್ರಾವದ ಸಮಸ್ಯೆಯಿದ್ದು, ತುಂಬಾ ದಪ್ಪಗಿದ್ದೇನೆ- ಪರಿಹಾರವಿದೆಯೆ?

    ಎದೆಯ ಮೇಲೆ ಪುರುಷರಂತೆ ಕೂದಲುಬೆಳೆಯುತ್ತಿದೆ- ಮದುವೆಯಾಗಲು ಭಯವಾಗುತ್ತಿದೆ; ಪರಿಹಾರವೇನು?

    ಗುಪ್ತಾಂಗದಲ್ಲಿ ತುರಿಕೆ, ಮೂತ್ರ ವಿಸರ್ಜನೆಯಲ್ಲಿ ಉರಿ- ಸಮಸ್ಯೆಯಾದರೆ ಹೀಗೆ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts