More

    VIDEO: ನದಿಗೆ ಉರುಳಿದ ಎಪಿಎಸ್‌ಆರ್‌ಟಿಸಿ ಬಸ್‌: ಕನಿಷ್ಠ 9 ಮಂದಿ ಸಾವು- ಹಲವರ ಸ್ಥಿತಿ ಚಿಂತಾಜನಕ

    ಗೋದಾವರಿ (ಆಂಧ್ರಪ್ರದೇಶ) : ಬಸ್‌ವೊಂದು ಸೇತುವೆಯಿಂದ ಉರುಳಿಬಿದ್ದು ಚಾಲಕ ಸೇರಿದಂತೆ ಕನಿಷ್ಠ 9 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಇಲ್ಲಿಯ ಸರ್ಕಾರಿ ಬಸ್‌ ಸೇತುವೆಯಿಂದ 50 ಅಡಿ ಕೆಳಕ್ಕೆ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಜಂಗಾರೆಡ್ಡಿಗುಡೆಂ ವಲಯದ ಜಲ್ಲೇರು ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚು ಸಾಧ್ಯತೆ ಇದೆ. ಬಸ್ ವೇಲೇರುಪಾಡು ಕಡೆಯಿಂದ ಜಂಗಾರೆಡ್ಡಿಗುಡೆಂಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

    ಘಟನೆಯಲ್ಲಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತದೇಹಗಳನ್ನು ನದಿಯಿಂದ ಹೊರಕ್ಕೆ ತೆಗೆಯುವ ಕಾರ್ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

    ಬಸ್​ನಲ್ಲಿ 47 ಮಂದಿ ಪ್ರಯಾಣಿಸುತ್ತಿದ್ದು ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.

    ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಇನ್ನಷ್ಟೇ ವಿಚಾರ ಹೊರಬರಬೇಕಿದೆ.

    ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ ನೋಡಿ:

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts