More

    ಕರುನಾಡು ಕಬಳಿಕೆದಾರರ ವಿರುದ್ಧ ಹೋರಾಡಬೇಕು

    ಚನ್ನಗಿರಿ: ಕಾವೇರಿಯಿಂದ ಗೋದಾವರಿವರೆಗಿದ್ದ ಕರುನಾಡಿನ ಜಾಗವನ್ನು ನೆರೆ ರಾಜ್ಯದವರು ಕಬಳಿಸುತ್ತಿದ್ದು ಇದನ್ನು ಹೋರಾಟದ ಮೂಲಕ ದಕ್ಕಿಸಿಕೊಳ್ಳುವ ಅಗತ್ಯವಿದೆ ಎಂದು ತಹಸೀಲ್ದಾರ್ ಪಟ್ಟರಾಜಗೌಡ ತಿಳಿಸಿದರು.

    ಸರ್ಕಾರಿ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

    ಕನ್ನಡ ಸಂಪೂರ್ಣ ಬಳಕೆಯ ಭಾಷೆಯಾಗಬೇಕು. ಕಾಲದಿಂದ ಕಾಲಕ್ಕೆ ಶ್ರೀಮಂತಗೊಳ್ಳುತ್ತ ಬಂದಿದ್ದ ಕನ್ನಡವಿಂದು ಸಂಕೀರ್ಣ ಭಾಷೆಯಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆಲ್ಲ ಪರ ಭಾಷೆಯ ಪ್ರಭಾವ, ವ್ಯಾಮೋಹವಲ್ಲದೆ ಬೇರೇನೂ ಕಾರಣವಿಲ್ಲ. ಇದನ್ನು ಬಿಟ್ಟು ಮಾತೃ ಭಾಷೆಗೆ ಆದ್ಯತೆ ನೀಡಬೇಕಿದೆ ಎಂದರು.

    ತಾಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಕಲ್ಲೇಶ್ ಮಾತನಾಡಿ, ಕನ್ನಡ ಶಾಲೆಗಳಲ್ಲಿ ಕಲಿತರೆ ಸರ್ಕಾರಿ ಕೆಲಸ ಸಿಗುವುದಿಲ್ಲ, ಇಂಗ್ಲಿಷ್ ಕಲಿತರೆ ಗೌರವದ ಜತೆಗೆ ಸ್ಥಾನಮಾನವೂ ಲಭ್ಯವೆಂಬ ಮನೋಭಾವ ಸರಿಯಲ್ಲ ಎಂದರು.

    ಪುರಸಭೆ ಸದಸ್ಯರಾದ ಪರಮೇಶ್, ಸವಿತಾ ರಾಘವೇಂದ್ರ, ಚಿಕ್ಕಪ್ಪ, ಜಿಪಂ ಸದಸ್ಯೆ ಮಂಜುಳಾ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ತಿಪ್ಪೇಶ್, ಎಪಿಎಂಸಿ ಅಧ್ಯಕ್ಷ ಜಿ.ಬಿ.ಜಗನ್ನಾಥ್, ಡಿಎಸ್‌ಪಿ ಪ್ರಶಾಂತ್ ಮನ್ನೋಳಿ, ಸಿಪಿಐ ಆರ್.ಆರ್.ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಐಗೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts