More

    ಸದನದಲ್ಲಿ ಗಲಾಟೆ: ಮಾಜಿ ಸಿಎಂ ಚಂದ್ರಬಾಬು ನಾಯ್ಡು, 12 ಶಾಸಕರು ಅಮಾನತು

    ವಿಜಯವಾಡ (ಆಂಧ್ರಪ್ರದೇಶ): ವಿಧಾನಸಭೆಯ ಚಳಿಗಾಲ ಅಧಿವೇಶನದ ಮೊದಲ ದಿನವೇ ಕಲಾಪಕ್ಕೆ ಅಡ್ಡಿಪಡಿಸಿ ಗಲಾಟೆ ಮಾಡಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಅವರನ್ನು ಸದನದಿಂದ ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ.

    ಇಂದಿನಿಂದ ವಿಧಾನಸಭೆಯ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಸದನದ ಬಾವಿಗೆ ನುಗ್ಗಿ ಕೋಲಾಹಲ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ನಾಯ್ಡು ಸೇರಿದಂತೆ 12 ಟಿಡಿಪಿ ಶಾಸಕರನ್ನು ಒಂದು ದಿನ ಅಮಾನತುಗೊಳಿಸಲಾಗಿದೆ.

    ನಿವಾರ್​ ಚಂಡಮಾರುತದ ಕುರಿತಂತೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಇವರೆಲ್ಲರೂ ಗಲಾಟೆ ಮಾಡಿದ್ದಾರೆ. ಟಿಡಿಪಿ ಸದಸ್ಯೆ ನಿಮ್ಮಲಾ ರಮಾನೈದು ಅವರು ನಿವಾರ್ ಚಂಡಮಾರುತದಿಂದ ಉಂಟಾದ ಹಾನಿ ಮತ್ತು ಪರಿಹಾರ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು, ನಷ್ಟದ ಕುರಿತು ಡಿಸೆಂಬರ್ 15 ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಸಬ್ಸಿಡಿ ರೂಪದಲ್ಲಿ ಡಿಸೆಂಬರ್ 31 ರೊಳಗೆ ಪರಿಹಾರವನ್ನು ಪಾವತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

    ಆಗ ತಮಗೆ ಮಾತನಾಡಲು ಮೈಕ್ ನೀಡುವಂತೆ ಸ್ಪೀಕರ್​ ಅವರಿಗೆ ನಾಯ್ಡು ಒತ್ತಾಯಿಸಿದರು. ಆದರೆ ರಮಾನೈದು ಮಾತನಾಡುತ್ತಿರುವುದರಿಂದ ಇದನ್ನು ನಿರಾಕರಿಸಲಾಯಿತು. ಇದರಿಂದಾಗಿ ಟಿಡಿಪಿ ಸದಸ್ಯರು ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಇದರಿಂದ ಕೋಪಗೊಂಡ ಚಂದ್ರಬಾಬು ನಾಯ್ಡು ಅವರು ಸ್ಪೀಕರ್ ಕುರ್ಚಿಯ ಮುಂದೆ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

    ಪ್ರತಿಭಟನೆ ಕೈಬಿಟ್ಟು ವಾಪಸ್ ಹೋಗಿ ಕುಳಿತುಕೊಳ್ಳಿ ಎಂದು ಸ್ಪೀಕರ್ ಪದೇಪದೆ ಮನವಿ ಮಾಡಿದರೂ ಅವರು ಕೇಳಲಿಲ್ಲ. ಕೋವಿಡ್​ ಸಂಕಷ್ಟದ ನಡುವೆಯೂ ಆಂಧ್ರಪ್ರದೇಶದಲ್ಲಿ ನಾವು ಚಳಿಗಾಲದ ಅಧಿವೇಶನವನ್ನು ನಡೆಸುತ್ತಿದ್ದೇವೆ. ಏಕೆಂದರೆ ಹಲವಾರು ಪ್ರಮುಖ ಮಸೂದೆಗಳನ್ನು ಅಂಗೀಕರಿಸಬೇಕಾಗಿದೆ ಮತ್ತು ಇದು ಕಾರ್ಯವಿಧಾನದ ಪ್ರಕಾರ ಅವಶ್ಯಕತೆಯಾಗಿದೆ. ನಾವೂ ವಿರೋಧ ಪಕ್ಷದಲ್ಲಿದ್ದೆವು, ಆದರೂ ವಿಚಾರಣೆಯನ್ನು ಅಡ್ಡಿಪಡಿಸುವ ರೀತಿಯಲ್ಲಿ ಎಂದಿಗೂ ವರ್ತಿಸಲಿಲ್ಲ ಎಂದು ಸ್ಪೀಕರ್​ ಹೇಳಿದರೂ ಇವರು ಕೇಳಲಿಲ್ಲ.

    ಇದರಿಂದ ಸಿಟ್ಟುಕೊಂಡ ಸ್ಪೀಕರ್​, ಪ್ರವಾಹದಿಂದ ತತ್ತರಿಸಿದ ಜನ ಈ ಕುರಿತು ಸರ್ಕಾರ ಏನು ಹೇಳುತ್ತದೆ ಎಂದು ಕೇಳಲು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆದರೆ, ಪ್ರತಿಪಕ್ಷಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ. ಇಂತಹ ವರ್ತನೆಗಳು ಸದನಕ್ಕೆ ಅಗೌರವ ತಂದಿದೆ” ಎಂದು ಅಭಿಪ್ರಾಯಪಟ್ಟರು.

    ಮಾರ್ಷಲ್​ಗಳ ಮೂಲಕ ಪ್ರತಿಭಟನಾ ನಿರತ ನಾಯಕರನ್ನು ಸದನದಿಂದ ಹೊರಹಾಕಿಸಿ ಚಂದ್ರಬಾಬು ನಾಯ್ಡು ಸೇರಿದಂತೆ ಎಲ್ಲಾ 13 ಜನ ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿದ್ದಾರೆ.

    ‘ವಾರ್​ ಆ್ಯಂಡ್​ ಪೀಸ್’​ ಪೋಸ್ಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಶವವಾದ ಯಂಗ್​ ಗ್ಲೋಬಲ್​ ಲೀಡರ್​ ಡಾ.ಶೀತಲ್​ ಆಮ್ಟೆ!


    ಚೀನಾದಿಂದ ಇದೀಗ ಅಣೆಕಟ್ಟು ವಾರ್​ ಶುರು! ಭಾರತ, ಬಂಗ್ಲಾಕ್ಕೆ ಅಪಾಯ…

    ಕಾಲೇಜ್​ವರೆಗೂ ಹುಡುಗಿಯಾಗೇ ಇದ್ದೆ… ಆದ್ರೆ… ರಹಸ್ಯ ಬಿಚ್ಚಿಟ್ಟ ಗಾಯಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts