More

    ಅಮಿತ್‌ ಷಾ ಸಂಸತ್ತಿಗೆ ಬಂದು ರೇಪ್‌ ಕುರಿತು ಮಾತಾಡಿದ್ರೆ ನಾನು ತಲೆ ಬೋಳಿಸ್ತೇನೆ ಎಂದ ಸಂಸದ!

    ನವದೆಹಲಿ: ಪಶ್ಚಿಮ ದೆಹಲಿಯಲ್ಲಿ ಧಾರ್ಮಿಕ ಕ್ಷೇತ್ರದಲ್ಲಿದ್ದ ವ್ಯಕ್ತಿ ಹಾಗೂ ಸ್ಮಶಾನದಲ್ಲಿನ ಮೂವರು ಉದ್ಯೋಗಿಗಳು ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಘಟನೆ ಭಾನುವಾರ ನಡೆದಿದ್ದು, ಈ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಮೌನ ತಾಳಿದೆ ಎಂದು ವಿಪಕ್ಷಗಳು ಆರೋಪಿಸಿರುವ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದ ಡೆರೆಕ್ ಒಬ್ರಿಯಾನ್‌ ಹೇಳಿಕೆಯೊಂದನ್ನು ನೀಡಿದ್ದಾರೆ.

    ಗೃಹ ಸಚಿವ ಅಮಿತ್ ಷಾ ನಾಳೆ ಸಂಸತ್ತಿಗೆ ಬಂದು ದೆಹಲಿ ಅತ್ಯಾಚಾರ ಪ್ರಕರಣದ ಬಗ್ಗೆ ಹೇಳಿಕೆ ನೀಡಿದರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ. ಅಮಿತ್‌ ಷಾ ಈ ಕೇಸ್‌ ಕುರಿತು ಮಾತನಾಡುವುದಿಲ್ಲ. ಅಲ್ಲದೇ ಪೆಗಾಸಸ್‌ ಬೇಹುಗಾರಿಕೆ ಪ್ರಕರಣದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಇದೇ ವೇಳೆ ಪ್ರಧಾನಿ ಮೋದಿ ಅವರ ಕೆಲವು ಕಾರ್ಯಗಳನ್ನು ಅವರು ಟೀಕಿಸಿದರು.’ಪ್ರತಿಪಕ್ಷಗಳು ಬಹಳ ಸ್ಪಷ್ಟವಾಗಿವೆ. 15-16 ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಚರ್ಚೆಯನ್ನು ಬಯಸುತ್ತೇವೆ. ನಾವು ಮೂರು ಸಮಸ್ಯೆಗಳನ್ನು ಚರ್ಚಿಸಲು ಬಯಸುತ್ತೇವೆ. ಚರ್ಚೆ ಮಾಡಿ ಮತ್ತು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು. ಆರ್ಥಿಕತೆ, ಉದ್ಯೋಗಗಳು, ಬೆಲೆ ಏರಿಕೆ ಮತ್ತು ಹಣದುಬ್ಬರದ ಬಗ್ಗೆ ಚರ್ಚೆ ಮಾಡಬೇಕು. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮೊದಲು ಪೆಗಾಸಸ್ ಬಗ್ಗೆ ಚರ್ಚಿಸಬೇಕು. ಇದಕ್ಕೆ ಪ್ರಧಾನಿಯವರು ಅನುವು ಮಾಡಿಕೊಡಬೇಕಿದೆ ಎಂದರು.
    2016ರಿಂದ ಸಂಸತ್ತಿನಲ್ಲಿ ಮೋದಿ ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ? ಏನೂ ಇಲ್ಲ. ಸಂಸತ್ತಿಗೆ ಅವರೇ ನಿಯಮಗಳನ್ನು ರೂಪಿಸಲು ಬಯಸುತ್ತಿದ್ದಾರೆ. ವಿರೋಧ ಪಕ್ಷವು ಚರ್ಚೆಯನ್ನು ಬಯಸುತ್ತದೆ ಎಂದು ಅವರು ಹೇಳಿದರು.

    ಅಂಬಾನಿ ಮನೆ ಬಳಿ ನಿಂತಿದ್ದ ಕಾರಿನ ನಿಗೂಢ ರಹಸ್ಯ: ಸಾಕ್ಷಿದಾರನ ಕೊಲೆಗೆ 45 ಲಕ್ಷ ರೂ. ಸುಪಾರಿ!

    ಪ್ರಧಾನಿ ನಿವಾಸ ಬಾಡಿಗೆಗೆ ಇದೆ, ಸಂಪರ್ಕಿಸಿ- ಷರತ್ತು ಅನ್ವಯ: ಇಮ್ರಾನ್‌ ಖಾನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts