More

    ಬಾಜಿ ಕಟ್ಟಿ ನೋಡಾ ಬಾರ ಮೀಸೆ ಮಾವ… ಅರ್ಧ ಮೀಸೆ- ತಲೆ ಬೋಳಿಸಿಕೊಂಡದ್ದು ಯಾಕೆ?

    ನವದೆಹಲಿ: ಬಾಜಿ ಕಟ್ಟಿ ನೋಡಾ ಬಾರ ಮೀಸೆ ಮಾವ… ಇದು ಸಿಪಾಯಿ ರಾಮು ಚಿತ್ರದಲ್ಲಿನ ಜನಪ್ರಿಯ ಗೀತೆ. ಆದರೆ, ಈಗಷ್ಟೇ ವಿಧಾನಸಭೆ ಚುನಾವಣೆ ಜರುಗಿದ ಛತ್ತೀಸಗಢದಲ್ಲಿ ನಗು ಉಕ್ಕಿಸುವಂತಹ ಅಪರೂಪದ ಘಟನೆಯೊಂದು ನಡೆದಿದೆ. ಇಲ್ಲಿ ಬಾಜಿ ಕಟ್ಟಿದ ವ್ಯಕ್ತಿ ಮೀಸೆಯನ್ನೇ ಕಳೆದುಕೊಂಡಿದ್ದಾನೆ!

    ಛತ್ತೀಸ್‌ಗಢ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಸೋಲಿಸಿ ಅಧಿಕಾರಕ್ಕೆ ಮರಳಿದ್ದರೂ ಛತ್ತೀಸ್‌ಗಢದ ಕಲ್ಲಾರಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅಲ್ಕಾ ಚಂದ್ರಾಕರ್ ಸೋತಿದ್ದಾರೆ. ಆದರೆ, ಈ ಸೋಲಿಗೆ ತಲೆಕೊಟ್ಟಿದ್ದು ಎಲೆಕ್ಟ್ರಿಷಿಯನ್‌ ದೇರ್ಹಾ ರಾಮ್ ಯಾದವ್.

    ಈ ಎಲೆಕ್ಟ್ರಿಷಿಯನ್‌ ತಮ್ಮ ಸ್ನೇಹಿತರ ಜತೆಗೆ ಬಾಜಿ ಕಟ್ಟಿದ್ದಕ್ಕಾಗಿ ತಮ್ಮ ಕೂದಲು ಮತ್ತು ಮೀಸೆಯನ್ನು ಭಾಗಶಃ ಬೋಳಿಸಿಕೊಂಡಿದ್ದಾರೆ.

    ಛತ್ತೀಸ್‌ಗಢದ ಮಹಾಸಮುಂಡ್ ಜಿಲ್ಲೆಯ ಕಲ್ಲರಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅಲ್ಕಾ ಚಂದ್ರಾಕರ್ ಸೋತರೆ, ತಮ್ಮ ತಲೆ ಮತ್ತು ಮೀಸೆಯನ್ನು ಅರ್ಧ ಬೊಳಿಸಿಕೊಳ್ಳುವುದಾಗಿ ದೇರ್ಹಾ ರಾಮ್ ಯಾದವ್ ಅವರು ತಮ್ಮ ಸ್ನೇಹಿತರೊಂದಿಗೆ ವಿಚಿತ್ರ ಬೆಟ್ ಕಟ್ಟಿದ್ದರು.

    ಭಾನುವಾರ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗ ಚಂದ್ರಾಕರ್ ಅವರು ಕಾಂಗ್ರೆಸ್‌ನ ದ್ವಾರಕಾಧೀಶ ಯಾದವ್ ವಿರುದ್ಧ ಸೋಲನುಭವಿಸಿದ್ದರು.

    ತಾವು ಬೆಟ್​ ಕಟ್ಟಿದ ಅನುಸಾರವಾಗಿ ದೇರ್ಹಾ ರಾಮ್ ಯಾದವ್ ಅವರು ಕ್ಷೌರಿಕನ ಅಂಗಡಿಗೆ ಹೋಗಿ ತಮ್ಮ ಕೂದಲು ಮತ್ತು ಮೀಸೆಯನ್ನು ಭಾಗಶಃ ಬೋಳಿಸಿಕೊಂಡಿದ್ಧಾರೆ.

    ಛತ್ತೀಸ್‌ಗಢದಲ್ಲಿ 90 ವಿಧಾನಸಭೆ ಸ್ಥಾನಗಳಲ್ಲಿ 54 ಸ್ಥಾನಗಳನ್ನು ಗೆದ್ದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್ ಕೇವಲ 35 ಕ್ಷೇತ್ರಗಳಲ್ಲಿ ಮಾತ್ರ ಗೆದ್ದು ಹಿನ್ನಡೆ ಕಂಡಿದೆ. ಆದರೆ, ಈಗ ಚುನಾವಣೆ ಫಲಿತಾಂಶಕ್ಕಿಂತ ಹೆಚ್ಚು ಗಮನಸೆಳೆಯುತ್ತಿರುವುದು ದೇರ್ಹಾ ರಾಮ್ ಯಾದವ್ ಅವರ ಅರ್ಧ ಮೀಸೆ, ಅರ್ಧ ತಲೆಗೂದಲಿನ ವಿಚಿತ್ರ ಫ್ಯಾಶನ್​.

    ಪಿಒಕೆ ಕಳೆದುಕೊಳ್ಳಲು ನೆಹರೂ ಮಾಡಿದ 2 ಪ್ರಮಾದಗಳೇ ಕಾರಣ: ಲೋಕಸಭೆಯಲ್ಲಿ ಅಮಿತ್​ ಶಾ ವಾಗ್ದಾಳಿ

    ಹೊರದೇಶದಲ್ಲಿದ್ದುಕೊಂಡೇ ಆರ್ಥಿಕ ವಂಚನೆ: 100 ವೆಬ್​ಸೈಟ್​ ನಿರ್ಬಂಧಿಸಿದ ಕೇಂದ್ರ ಗೃಹ ಸಚಿವಾಲಯ

    ರಾಹುಲ್​ ಗಾಂಧಿ- ಪ್ರಣವ್​ ಮುಖರ್ಜಿ ನಡುವಿನ ಅಸಮಾಧಾನ: ಮಗಳು ಬರೆದ ಪುಸ್ತಕದಲ್ಲಿವೆ ಕುತೂಹಲಕಾರಿ ಸಂಗತಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts