More

    ‘ಅಂಡರ್‌-40‘ ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಅಂಬಾನಿ ಅವಳಿ ಮಕ್ಕಳು

    ನವದೆಹಲಿ: ಫಾರ್ಚೂನ್ ನಿಯತಕಾಲಿಕೆಯಿಂದ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡುವ ಪ್ರಭಾವಿಗಳ ಪಟ್ಟಿಯಲ್ಲಿ ಈ ಬಾರಿ ನಾಲ್ವರು ಭಾರತೀಯರು ಸ್ಥಾನ ಪಡೆದುಕೊಂಡಿದ್ದಾರೆ.

    40 ವರ್ಷಗಳ ವಯೋಮಾನಕ್ಕಿಂತ ಕಡಿಮೆ ವಯಸ್ಸಿನವರನ್ನು (ಅಂಡರ್‌-40) ಇದರಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ನಾಲ್ವರ ಪೈಕಿ ಜಗತ್ತಿನ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿರುವ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್‌ ಅಂಬಾನಿ ಹಾಗೂ ಅವರ ನೀತಾ ದಂಪತಿಯ ಅವಳಿ ಮಕ್ಕಳಾದ ಇಶಾ ಹಾಗೂ ಆಕಾಶ್‌ ಅವಳಿ ಮಕ್ಕಳು ಸ್ಥಾನ ಪಡೆದುಕೊಂಡಿದ್ದಾರೆ.

    ಉಳಿದಂತೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನವಾಲ್ಲಾ ಮತ್ತು ಭಾರತದ ಪ್ರಮುಖ ಶಿಕ್ಷಣ ತಂತ್ರಜ್ಞಾನ ಕಂಪೆನಿ ಬೈಜುವಿನ ಸಹ ಸಂಸ್ಥಾಪಕ ಬೈಜು ರವೀಂದ್ರನ್ ಅವರೂ ಜಗತ್ತಿನ ಪ್ರಭಾವಿ ಅಂಡರ್‌ 40 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

    ಹಣಕಾಸು, ತಂತ್ರಜ್ಞಾನ, ಆರೋಗ್ಯ, ಸರ್ಕಾರ ಹಾಗೂ ರಾಜಕೀಯ ಮತ್ತು ಮಾಧ್ಯಮ ಹಾಗೂ ಮನರಂಜನೆ- ಈ ಐದು ವಿಭಾಗಗಳಲ್ಲಿ ಜಾಗತಿಕ ಮಟ್ಟದ ಪ್ರತಿವರ್ಷ ಪ್ರಭಾವಿಗಳನ್ನು ಆಯ್ಕೆ ಮಾಡಲಾಗುತ್ತದೆ.

    ಇದನ್ನೂ ಓದಿ: ಲಡಾಖ್‌ ಗಡಿಯಲ್ಲಿ ಚೀನಾ ಕಿತಾಪತಿ: ಲೇಹ್‌ಗೆ ಸೇನಾ ಮುಖ್ಯಸ್ಥರ ಭೇಟಿ

    ಇದರಲ್ಲಿ ತಂತ್ರಜ್ಞಾನ ವಿಭಾಗದಿಂದ ಇಶಾ ಹಾಗೂ ಆಕಾಶ್ ಅಂಬಾನಿ ಆಯ್ಕೆಯಾಗಿದ್ದಾರೆ. 28 ವರ್ಷಗಳ ಇಶಾ ಹಾಗೂ ಆಕಾಶ್‌ ರಿಲಯನ್ಸ್‌ ಜಿಯೋ ಬೋರ್ಡ್‌ನ ನಿರ್ದೇಶಕರಾಗಿದ್ದಾರೆ.

    ಆಕಾಶ್ ಕಂಪೆನಿಗೆ ಸೇರಿದ್ದು 2014ರಲ್ಲಿ. ಬ್ರೌನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದ ಪದವಿ ಪಡೆದ ಪಡೆದಿದ್ದಾರೆ. ಯೇಲ್, ಸ್ಟ್ಯಾನ್ ಫೋರ್ಡ್ ಮತ್ತು ಮೆಕ್ ಕಿನ್ಸಿಯಲ್ಲಿ ವ್ಯಾಸಂಗ ಮಾಡಿರುವ ಇಶಾ, 2015ರಲ್ಲಿ ಕಂಪೆನಿ ಸೇರಿದ್ದಾರೆ.

    ಫೇಸ್‌ಬುಕ್‌ನಿಂದ ಜಿಯೋ ಇನ್ಫೋಕಾಮ್‌ನಲ್ಲಿ 9.99% ಷೇರಿನ ಪಾಲನ್ನು 5.7 ಬಿಲಿಯನ್ ಡಾಲರ್‌ ಖರೀದಿ ಮಾಡುವಲ್ಲಿ ಇಶಾ ಹಾಗೂ ಆಕಾಶ್ ಮುಖ್ಯ ಪಾತ್ರ ವಹಿಸಿದ್ದಾರೆ. ಮಾತ್ರವಲ್ಲದೇ ಗೂಗಲ್, ಕ್ವಾಲ್ ಕಾಮ್ ಮತ್ತು ಇಂಟೆಲ್‌ನಿಂದ ಜಿಯೋ ಇನ್ಫೋಕಾಮ್‌ನಲ್ಲಿ ಹೂಡಿಕೆ ಆಗುವಂತೆ ಮಾಡುವಲ್ಲಿಯೂ ಇವರದ್ದು ಅಧಿಕ ಪಾಲು ಇದೆ. ಈ ಹಿನ್ನೆಲೆಯಲ್ಲಿ 65 ಬಿಲಿಯನ್ ಡಾಲರ್‌ ಖಾಸಗಿ ಹೂಡಿಕೆ ಹರಿದುಬಂದಿದೆ.

    ಹಲವು ದಶಕ ನಿರಾತಂಕವಾಗಿದ್ದ ಕುಖ್ಯಾತ ಹವಾಲಾ ಡೀಲರ್ ಅರೆಸ್ಟ್‌: ಆರು ದೇಶಗಳ ಮೋಸ್ಟ್‌ ವಾಂಟೆಡ್‌ ಈತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts