More

    ಲಸಿಕೆ ಬೇಡ ಎಂದಿದ್ದು ಅದಕ್ಕಲ್ಲ… ಇದಕ್ಕೆ… ವರಸೆ ಬದಲಿಸಿದ ಅಖಿಲೇಶ್​ ಯಾದವ್​

    ಲಖನೌ: ಕರೊನಾ ಲಸಿಕೆ ಭಾರತಕ್ಕೆ ಎಂಟ್ರಿಕೊಡಲಿದೆ ಎಂಬ ಸುದ್ದಿಯಾಗುತ್ತಿದ್ದಂತೆಯೇ, ಅದರ ವಿರುದ್ಧ ಮಾತನಾಡಿದ ಕೆಲವರಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಕೂಡ ಒಬ್ಬರು. ನಾನು ಇದನ್ನು ವಿರೋಧಿಸುತ್ತೇನೆ ಎಂದು ಹೇಳುತ್ತಲೇ ಬಂದಿದ್ದ ಅವರು ಈಗ ತಾನು ಹೇಳಿರುವುದು ಆ ರೀತಿಯಲ್ಲಿ ಈ ರೀತಿ ಎಂದು ಸ್ಪಷ್ಟನೆ ನೀಡಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ ನಾನು ಲಸಿಕೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಬಿಜೆಪಿಯವರ ಮೇಲೆ ನನಗೆ ಭರವಸೆ ಇಲ್ಲ. ಇದು ಬಿಜೆಪಿಯ ಲಸಿಕೆ ಆಗಿದ್ದು, ನಾವು ಹೇಗೆ ಪಡೆದುಕೊಳ್ಳುವುದು ಎಂದಿದ್ದರು.

    ಇದೀಗ ತಮ್ಮ ವರಸೆ ಬದಲಿರುವ ಅಖಿಲೇಶ್​, ನಾನು ಕೋವಿಡ್​ ಲಸಿಕೆಯನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ನನಗೆ ಅದರ ಮೇಲೆ ತುಂಬಾ ಭರವಸೆ ಇದೆ. ವೈದ್ಯರ ಮೇಲೆ ಸಂಪೂರ್ಣ ಭರವಸೆ ಇದೆ. ಅವರು ಈ ಕೆಲಸವನ್ನು ಚೆನ್ನಾಗಿಯೇ ನಿರ್ವಹಿಸುತ್ತಾರೆ. ಆದರೆ ನನಗೆ ಸಂದೇಹ ಇರುವುದು ಬಿಜೆಪಿಯ ಮೇಲೆ ಎಂದಿದ್ದಾರೆ.

    ತಮ್ಮ ಈ ವಾದವನ್ನು ಸಮರ್ಥನೆ ಮಾಡಿಕೊಂಡಿರುವ ಅಖಿಲೇಶ್​, ಬಿಜೆಪಿಯವರು ಚಿಕ್ಕಪುಟ್ಟ ಘಟನೆಯನ್ನೂ ದೊಡ್ಡದಾಗಿ ಮಾಡುತ್ತಾರೆ. ಆದ್ದರಿಂದ ಈ ಕೋವಿಡ್​ ವಿಷಯದಲ್ಲಿಯೇ ಹಾಗೆಯೇ ಮಾಡಿರಬಹುದು ಎಂಬ ಸಂದೇಹ. ಇದೇ ಕಾರಣಕ್ಕೆ ಮೊದಲು ಬಿಜೆಪಿ ನಾಯಕರು ಲಸಿಕೆ ಪಡೆಯಲಿ, ಆಮೇಲೆ ಉಳಿದವರು ನೋಡುತ್ತೇವೆ ಎಂದಿದ್ದಾರೆ.

    ಬರುವ ವರ್ಷ ಸಮಾಜವಾದ ಪಕ್ಷ ಅಧಿಕಾರಕ್ಕೆ ಬರಲಿದೆ. ಆಗ ನಾವು ಎಲ್ಲರಿಗೂ ಉಚಿತ ಲಸಿಕೆ ನೀಡುತ್ತೇವೆ. ಆದ್ದರಿಂದ ಅವುಗಳು ಸರಿಯಾಗಿ ಪೂರೈಕೆ ಆಗುತ್ತಿದೆಯೆ? ಇದಕ್ಕೆ ಸರಿಯಾದ ವ್ಯವಸ್ಥೆ ಇದೆಯೇ ಎಂಬುದನ್ನು ಮೊದಲು ತಿಳಿಯಬೇಕಿದೆ. ವ್ಯವಸ್ಥೆಯೇ ಸರಿ ಆಗದಿದ್ದರೆ, ಎಲ್ಲರಿಗೂ ಉಚಿತ ಲಸಿಕೆ ನೀಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

    ಭಾರತದಲ್ಲಿ ಇಂದು ಕೋವಿಡ್​ ಲಸಿಕೆ ಮೊದಲು ಪಡೆದವರು ಯಾರು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ…

    ಎಚ್‍ಎಎಲ್ ಶಿಕ್ಷಣ ಸಂಸ್ಥೆಯಲ್ಲಿ ಬೋಧಕ- ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

    ‘ಚೆನ್ನಾಗ್​ ಹೇಳಿದ್ರಿ…’ ಡೈಲಾಗ್​ ಖ್ಯಾತಿಯ ಹಿರಿಯ ನಟಿ ಸರ್ವಮಂಗಳ ವಿಧಿವಶ

    ತಲ್ವಾರ್​ನಿಂದ ಕೇಕ್​ ಕತ್ತರಿಸಿ ಛೀಮಾರಿ ಹಾಕಿಸಿಕೊಂಡ ಸ್ಟಾರ್​ ನಟ- ತಪ್ಪಿನ ಅರಿವಾಗಿ ಕ್ಷಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts