More

    ‘ನಾನು ಆ ಕ್ಷಣ ನಿರ್ಧಾರ ತೆಗೆದುಕೊಳ್ಳದಿದ್ದರೆ ಲಕ್ಷಾಂತರ ಹೆಣಗಳು ಉರುಳುತ್ತಿದ್ದವು, ರಕ್ತದ ಹೊಳೆ ಹರಿಯುತ್ತಿತ್ತು’

    ಕಾಬುಲ್: ತಾಲಿಬಾನಿಗಳು ಇಡೀ ಅಫ್ಘನಿಸ್ತಾನವನ್ನು ಆಕ್ರಮಿಸಿಕೊಂಡು, ರಾಜಧಾನಿ ಕಾಬುಲ್‌ ಪ್ರವೇಶಿಸುತ್ತಿದ್ದಂತೆಯೇ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಹೋಗಿದ್ದಾರೆ. ತಾಲಿಬಾನಿಗಳು ರಾಷ್ಟ್ರಪತಿ ಭವನವನ್ನು ಸುತ್ತುವರೆದ ನಂತರ ಅವರಿಗೆ ಶರಣಾಗಿ ದೇಶವನ್ನು ತೊರೆದ ಘನಿಯವರು ಇದೀಗ ತಮ್ಮ ದೇಶದ ಪ್ರಜೆಗಳಿಗೆ ಸಂದೇಶ ರವಾನಿಸಿದ್ದು, ತಾವ್ಯಾಕೆ ದೇಶ ಬಿಟ್ಟು ಬಂದೆ ಎಂದು ಹೇಳಿದ್ದಾರೆ.

    ನನ್ನ ಪ್ರೀತಿಯ ದೇಶವಾಸಿಗಳೇ,
    ನಾನ್ಯಾಕೆ ತಾಲಿಬಾನಿಗಳಿಗೆ ಶರಣಾದೆ, ದೇಶ ತೊರೆದೆ ಎಂದು ನೀವು ಕೇಳಬಹುದು. ಅದರೆ ನನಗೆ ಇದು ಅನಿವಾರ್ಯವಾಗಿತ್ತು. ಏಕೆಂದರೆ ತಾಲಿಬಾನಿಗಳು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದು ಕೊನೆಗೆ ಕಾಬುಲ್‌ ಮತ್ತು ರಾಷ್ಟ್ರಪತಿ ಭವನವನ್ನು ಸುತ್ತುವರೆದಾಗ ಅವರ ಡಿಮಾಂಡ್‌ ಇದದ್ದು ಒಂದೇ. ಅದೇನೆಂದರೆ ರಕ್ತಪಾತ ಆಗಬಾರದು ಎಂದರೆ ನಾನು ದೇಶ ಬಿಟ್ಟು ಹೋಗಬೇಕು ಎನ್ನುವುದು.

    ನಾನು ಅವರ ರಸ್ತೆಗೆ ಅಡ್ಡವಾಗಿದ್ದೆ. ನನ್ನನ್ನು ತೆಗೆದುಹಾಕಲು ತಾಲಿಬಾಲಿನಿಗಳು ನಿರ್ಧರಿಸಿದ್ದರು. ಇದಕ್ಕಾಗಿ ಕಾಬೂಲ್ ಮತ್ತು ಕಾಬೂಲ್ ಜನತೆಯ ಮೇಲೆ ದಾಳಿಯ ಕುರಿತು ಯೋಜನೆ ರೂಪಿಸಿದ್ದರು.

    60 ಲಕ್ಷ ಜನಸಂಖ್ಯೆ ಇರುವ ಕಾಬುಲ್‌ನ ಜನರ ಪ್ರಾಣ-ಮಾನ ಎಲ್ಲವೂ ಆ ಕ್ಷಣದಲ್ಲಿ ನನ್ನ ಒಂದೇ ಒಂದು ನಿರ್ಧಾರದ ಮೇಲೆ ಇತ್ತು. ಕಳೆದ 20 ವರ್ಷಗಳಿಂದ ದೇಶದ ಜನರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇನೆ. ಒಂದು ವೇಳೆ ಆ ಕ್ಷಣದಲ್ಲಿ ನಾನೇನಾದರೂ ಅವರ ಮೇಲೆ ಯುದ್ಧ ಸಾರಲು ಹೋಗಿದ್ದರೆ ಸಾವಿರಾರು ಪೊಲೀಸರು ಹುತಾತ್ಮರಾಗುತ್ತಿದ್ದರು. ರಕ್ತದ ಹೊಳೆಯೇ ಹರಿಯುತ್ತಿತ್ತು. ಲಕ್ಷಾಂತರ ಮಂದಿ ಜೀವ ಕಳೆದುಕೊಳ್ಳುವ ಸಾಧ್ಯತೆ ಇತ್ತು. 60 ಲಕ್ಷ ಜನಸಂಖ್ಯೆ ಇರುವ ಈ ನಗರದ ಬೀದಿಬೀದಿಗಳಲ್ಲಿ ರಕ್ತದ ಹೊಳೆ ಹರಿದು ದೊಡ್ಡ ದುರಂತಕ್ಕೆ ಸಾಕ್ಷಿಯಾಗುತ್ತಿತ್ತು. ಆದ್ದರಿಂದ ಈ ನಿರ್ಧಾರಕ್ಕೆ ಬಂದೆ’ ಎಂದಿದ್ದಾರೆ.

    ಬಂದೂಕು, ಬಾಂಬ್‌ಗಳಿಂದ ತಾಲಿಬಾನಿಗಳು ಯುದ್ಧ ಗೆದ್ದಿರಬಹುದು. ಈಗ ದೇಶ ಮತ್ತು ಅಲ್ಲಿಯ ಜನತೆಯ ಮಾನ ಹಾಗೂ ಪ್ರಾಣವನ್ನು ರಕ್ಷಿಸುವ ಜವಾಬ್ದಾರಿ ಅವರ ಮೇಲಿದೆ.
    ಈ ನಡುವೆಯೇ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷ ಅಥವಾ ರಾಷ್ಟ್ರಪತಿ ಬಗ್ಗೆ ಚರ್ಚೆ ಶುರುವಾಗಿದೆ. ಸದ್ಯ ಕತಾರ್‌ನಲ್ಲಿರುವ ಮುಲ್ಲಾ ಬರಾದರ್ ಹೆಸರು ಕೇಳಿ ಬರುತ್ತಿದೆ. ಇದೇ ಲಿಸ್ಟ್‌ನಲ್ಲಿ ತಾಲಿಬಾನಿಗಳಾದ ಹೆಬತುಲ್ಲಾಹ ಅಖುಂದಜಾದ್, ಸಿರಾಜುದ್ದೀನ್ ಹಕ್ಕನಿ ಮತ್ತು ಮುಲ್ಲಾ ಯಾಕೂಬ್ ಹೆಸರೂ ಲಿಸ್ಟ್‌ನಲ್ಲಿ ಇವೆ.

    VIDEO: ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವ ಅಫ್ಘಾನ್‌ ಪ್ರಜೆಗಳು- ವಿಮಾನ ಏರಲು ನೂಕು ನುಗ್ಗಲು!

    ಅಕ್ಷರಶಃ ನಲುಗಿದ ಅಫ್ಘಾನ: ಅತ್ಯಾಚಾರಿಗಳ ಕಪಿಮುಷ್ಠಿಯಲ್ಲಿ ಹೆಣ್ಣುಮಕ್ಕಳು! ಹೊರಹೋಗದಂತೆ ನಾಲ್ಕೂ ಕಡೆ ದಿಗ್ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts