More

    ಕೊಂಬಾಟ್ ಕ್ಲಬ್ ಕ್ರೀಡಾಪಟುಗಳ ಸಾಧನೆ

    ಕುಶಾಲನಗರ: ಕೇರಳದ ಕೋಜಿಕೋಡ್‌ನಲ್ಲಿ ಗಾಮಾ ಮತ್ತು ಐಎಂಎಂಎಎಫ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್‌ನಲ್ಲಿ ಕೊಡಗಿನ ಕೊಂಬಾಟ್ ಕ್ಲಬ್ನ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ.

    ಸಮೀಪದ ಮುಳ್ಳುಸೋಗೆಯ ಎಂ.ಸಿ.ವರುಣ್ ಕಂಚಿನ ಪದಕ ಗೆದ್ದರೆ, ಕೊಪ್ಪ ಗ್ರಾಮದ ವೇಣುವರ್ಧನ್ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತವನ್ನು ವೇಣುವರ್ಧನ್ ಪ್ರತಿನಿಧಿಸಲಿದ್ದಾರೆ.

    ಕ್ರೀಡಾಪಟುಗಳ ಶ್ರಮ ಹಾಗೂ ನಿಷ್ಠೆಗೆ ಜಯ ಸಿಕ್ಕಿದೆ. ಎಲ್ಲರೂ ಉತ್ತಮ ತರಬೇತಿಯನ್ನು ಪಡೆಯುತ್ತಿದ್ದು, ಈ ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡುವ ಸಂಕಲ್ಪ ಮಾಡಿದ್ದಾರೆ. ಜಿಲ್ಲೆಯ ನಾಗರಿಕರು ಇಂತಹ ಸಮರಕಲೆಯ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಬೆಂಬಲಿಸಿ ಬೆಳಕಿಗೆ ತರಬೇಕೆಂದು ಸಿ3ಎಂಎಂಎ ಕೋಚ್ ಅಮಿತ್‌ವಿಶ್ವನಾಥ್ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts