More

    ಸೊಳ್ಳೆ ನಿಯಂತ್ರಣದಿಂದ ಮಾತ್ರ ಮಲೇರಿಯಾ ರೋಗ ದೂರ

    ಗುಳೇದಗುಡ್ಡ: ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳಬೇಕಲ್ಲದೆ, ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ಮಲೇರಿಯಾ ರೋಗ ನಿಯಂತ್ರಣ ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಬಿ. ಪಾಟೀಲ ಹೇಳಿದರು.

    ಸಮೀಪದ ಪಾದನಕಟ್ಟಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಇಲಾಖೆ ಹಾಗೂ ತೋಗುಣಶಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಥಳೀಯ ಗ್ರಾಪಂಗಳ ಸಂಯುಕ್ತಾಶ್ರಯದಲ್ಲಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಮಲೇರಿಯಾ ಪ್ಲಾಸೋಡಿಯಾ ಎಂಬ ಸೂಕ್ಷ್ಮಾಣು ಪರವಲಂಬಿ ಜೀವಿಯಿಂದ ಬರುತ್ತದೆ. ಹೆಣ್ಣು ಅನಾಫಿಲಿಸ್ ಸೊಳ್ಳೆಗಳು ಮಲೇರಿಯಾ ಸೋಂಕಿತ ವ್ಯಕ್ತಿಯನ್ನು ಕಚ್ಚಿದ ಬಳಿಕ ಆರೋಗ್ಯವಂತ ವ್ಯಕ್ತಿಗೆ ಕಚ್ಚಿದರೆ ಮಲೇರಿಯಾ ಹರಡುತ್ತದೆ ಎಂದರು.

    ತೋಗಣಶಿಯ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಸನ್ನಲಿ ಮಾತನಾಡಿ, ವಿಪರೀತ ಜ್ವರ, ವಾಂತಿ, ತಲೆ ನೋವು ಮಲೇರಿಯಾ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಸಮೀಪದ ಪ್ರಾಥಮಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

    ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಎಸ್.ವೈ. ನೀಲನ್ನವರ, ತಾಲೂಕು ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಪಿ.ಎಚ್. ಮಹಾಲಿಂಗಪುರ, ಜಿಲ್ಲಾ ಕೀಟಶಾಸ ತಜ್ಞ ಎಂ.ಎಲ್. ಹಸರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಶೋಕ ಬಡಿಗೇರ, ಕೆ.ಪಿ. ಹಂಪಿಹೊಳೆ, ಜಂಪಣ್ಣ ಕಟಗೇರಿ ಶಾಲಾ ಮುಖ್ಯಶಿಕ್ಷಕ ವೈ. ಎಸ್. ಮಜ್ಜಗಿ, ಎಲ್.ಆರ್. ನಾಗರಾಳ, ನೀಲಪ್ಪ ಕಂಬಾರ, ಶಂಕರ ಹುಲ್ಯಾಳ ಹಾಗೂ ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts