More

    ನಲಿಯುತಾ ಕಲಿಯುವ ಕನ್ನಡ…

    ಬಾಲ್ಯದಲ್ಲಿ ಕಲಿತದ್ದೇ ಬದುಕಿನಲ್ಲಿ ಉಳಿಯುವುದರಿಂದ ಮಕ್ಕಳಿಗೆ ಕನ್ನಡ ಸಂಸ್ಕಾರ ಕಲಿಸಬೇಕು ಎಂಬ ಚನ್ನವೀರ ಕಣವಿಯವರ ಒಂದು ಮಾತಿದೆ. ಕನ್ನಡ ಸಂಸ್ಕಾರ ಕಲಿಸುವಲ್ಲಿ ಕನ್ನಡವನ್ನು ತಪ್ಪಿಲ್ಲದೆ ಸ್ಪಷ್ಟವಾಗಿ ಬಳಸುವುದೂ ಬಹಳ ಮುಖ್ಯವಾಗಿದೆ. ಎಳೆಯ ಮಕ್ಕಳು ಭಾಷಾ ಕಲಿಕೆಯಲ್ಲಿ ಮತ್ತು ಬಳಕೆಯಲ್ಲಿ ತಮಗರಿವಿಲ್ಲದಂತೆಯೇ ಕೆಲವು ತಪ್ಪುಗಳನ್ನು ಸಹಜವಾಗಿ ಮಾಡುತ್ತಿರುತ್ತಾರೆ. ಉಚ್ಛಾರ ದೋಷ, ತೊದಲುವಿಕೆ, ಪದ ಸಂಪತ್ತಿನ ಕೊರತೆಯಿಂದ ಮಾತಿನಲ್ಲಿ ನಿರರ್ಗಳತೆ ಇಲ್ಲದಿರುವುದು ಇವೆಲ್ಲ ಎಡರು ತೊಡರುಗಳು ಮಕ್ಕಳಲ್ಲಿ ಸಾಮಾನ್ಯವಾಗಿರುತ್ತವೆ.ಕನ್ನಡ ಕಲಿಕೆಯು ಮೋಜಿನಿಂದ ಕೂಡಿದ್ದರೆ ಮಕ್ಕಳು ಆಸಕ್ತಿಯಿಂದ ಕಲಿತು ಭಾಷಾ ಪರಿಪಕ್ವತೆಯನ್ನು ಹೊಂದುತ್ತಾರೆ. ಭಾಷೆಯಲ್ಲಿ ಆಲಿಸುವಿಕೆ, ಮಾತನಾಡುವುದು, ಓದುವುದು, ಬರೆಯುವುದು ಈ ಎಲ್ಲ ಕೌಶಲಗಳು ಬಾಲ್ಯದಲ್ಲಿಯೇ ಸಮರ್ಪಕವಾಗಿ ಅಭ್ಯಾಸವಾಗಬೇಕು. ಮೋಜಿನ ಕನ್ನಡ ಕಲಿಕೆಯಲ್ಲಿ ಭಾಷಾ ಆಟಗಳು ಪ್ರಮುಖ ಪಾತ್ರ ವಹಿಸುತ್ತವೆ.

    | ಭಾರತಿ ಎ. ಕೊಪ್ಪ

    ತಿರುಗು-ಮುರುಗು ಓದು

    ಕನ್ನಡ ಭಾಷೆಯ ವಿಶೇಷತೆಯಲ್ಲಿ ತಿರುಗು-ಮುರುಗು ಓದು ಬಹಳ ಸೊಗಸಾದದ್ದಾಗಿದೆ. ಅರ್ಥಪೂರ್ಣವಾದ ತಿರುಗು-ಮುರುಗು ಓದಿನ ಪದಗಳನ್ನು ಮಕ್ಕಳು ಹೆಚ್ಚು ಸಂತಸದಿಂದ ಓದುತ್ತಾರೆ.ಅಂತಹ ಅನೇಕ ಸರಳ ಪದಗಳು ಕನ್ನಡ ಭಾಷೆಯಲ್ಲಿವೆ. ಪುಟ್ಟ ಮಕ್ಕಳಿಗೆ ಓದು ಕಲಿಯುವ ಪ್ರಾರಂಭಿಕ ಹಂತದಲ್ಲಿ ಇವು ಅತ್ಯಂತ ಸಹಕಾರಿಯಾಗುತ್ತವೆ. ಕನಕ, ಸರಸ, ನಮನ, ಗದಗ, ಚಮಚ, ಸಮಾಸ, ಸಮೋಸ ಈ ರೀತಿಯ ಪದಗಳನ್ನು ಓದುವಾಗ ಮತ್ತು ಉಚ್ಚರಿಸುವಾಗ ಭಾಷಾ ಕಲಿಕೆ ಸರಳವೆನಿಸುತ್ತದೆ.

    ನಾಲಗೆ ಸುರುಳಿಗಳು

    ಎಳವೆಯಲ್ಲಿ ಮಕ್ಕಳು ಸಾಮಾನ್ಯವಾಗಿ ಕೆಲವು ಅಕ್ಷರಗಳನ್ನು ಉಚ್ಚರಿಸುವಾಗ ತೊದಲುವುದು,ಉಚ್ಚಾರ ದೋಷ ಮಾಡುವುದು ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ಮಕ್ಕಳು ತಾವು ತಪ್ಪು ಉಚ್ಚಾರಣೆ ಮಾಡುತ್ತೇವೆಂಬ ಕೀಳರಿಮೆಯಿಂದ ತರಗತಿಯಲ್ಲಿ, ಸ್ನೇಹಿತರ ಜೊತೆಗೆ ಮಾತನಾಡಲು ಹಿಂದೇಟು ಹಾಕುವುದೂ ಇದೆ.ಮಕ್ಕಳ ಉಚ್ಚಾರ ಸ್ಪಷ್ಟತೆಗೆ ನಾಲಗೆ ಸುರುಳಿಗಳು ( ಖಟ್ಞಜ್ಠಛಿ ಠಿಡಿಜಿಠಠಿಛ್ಟಿಠ) ಸಹಾಯಕವಾಗುತ್ತವೆ.ಅಲ್ಲದೆ ಇವು ಸಂತಸದಾಯಕ ಕಲಿಕೆಗೂ ಸಹಾಯಕವಾಗುತ್ತವೆ.ಕಾಗೆ ಪುಕ್ಕ ಗುಬ್ಬಿ ಪುಕ್ಕ, ಕಪ್ಪು ಕುಂಕುಮ ಕೆಂಪು ಕುಂಕುಮ, ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ, ಸಂಪಂಗಪ್ಪನ ಮಗ ಮರಿ ಸಂಪಗಪ್ಪ, ಗಿಡತಳಿರೊಡೆದೆರಡೆಲೆಯಾಯ್ತು, ಬಸಮ್ಮನ ಮನೆಯಲ್ಲಿ ಬಿಸಿಬಿಸಿ ಗಸಗಸೆ ಪಾಯಸ, ಪಂಕಜಳ ಮನೆ ಪಕ್ಕ ಅಂಬುಜಳ ಮನೆ ಈ ರೀತಿಯ ಪುನರಾವರ್ತಿತ ಅಕ್ಷರಗಳನ್ನೊಳಗೊಂಡ ನಾಲಗೆ ಸುರುಳಿಗಳಿಂದ ಮಕ್ಕಳಿಗೆ ಉಚ್ಚಾರ ಸ್ಪಷ್ಟತೆ ಮೂಡುತ್ತದೆ.ಆಟದೊಂದಿಗೆ ಪಾಠದ ಅನುಭವ ದೊರೆಯುತ್ತದೆ.

    ಪದಬಂಧ

    ಮಕ್ಕಳ ಪದ ಸಂಪತ್ತನ್ನು ಒರೆಹಚ್ಚಲು, ವಾಕ್ಯಗಳನ್ನು ಅರ್ಥೈಸಿಕೊಂಡು ಪದಗಳನ್ನು ನಿರ್ದಿಷ್ಟವಾಗಿ ಬಳಸಲು ಪದಬಂಧಗಳು ಸಹಾಯಕವಾಗುತ್ತವೆ. ಮಕ್ಕಳಿಗಾಗಿಯೇ ಇರುವ ನಿಯತಕಾಲಿಕೆ ಪತ್ರಿಕೆಗಳಲ್ಲಿ ಸರಳ ಪದಬಂಧಗಳು, ಮಾಯಾ ಚೌಕಗಳು ಇರುತ್ತವೆ. ಮಕ್ಕಳ ನಿಯತಕಾಲಿಕೆಗಳು ಮತ್ತು ಕನ್ನಡದ ಪ್ರಮುಖ ದಿನಪತ್ರಿಕೆಗಳ ಮಕ್ಕಳ ಪುರವಣಿಗಳಲ್ಲಿ ಬರುವ ಪದಬಂಧಗಳನ್ನು ಮಕ್ಕಳಿಗೆ ಮಾಡಿಸಬಹುದಾಗಿದೆ. ಅದಲ್ಲದೇ ಶಿಕ್ಷಕರು ಅಥವಾ ಪಾಲಕರು ತಾವೇ ಪದಬಂಧಗಳನ್ನು ನೀಡಿ ಮಕ್ಕಳು ಅವುಗಳನ್ನು ಪದಗಳಿಂದ ಪೂರ್ಣಗೊಳಿಸಲು ಪ್ರೇರೇಪಿಸಬಹುದಾಗಿದೆ. ಮೇಲಿನಿಂದ ಕೆಳಕ್ಕೆ, ಎಡದಿಂದ ಬಲಕ್ಕೆ ಹೀಗೆ ಪದಗಳ ಹೊಂದಾಣಿಕೆ ಮಾಡುವಾಗ ಮಕ್ಕಳಲ್ಲಿ ಕುತೂಹಲ ಮತ್ತು ಆಸಕ್ತಿ ಹೆಚ್ಚಾಗುತ್ತದೆ. ಭಾಷಾ ಕಲಿಕೆ ಸುಗಮವಾಗುತ್ತದೆ.

    ಇದನ್ನೂ ಓದಿ: ಗಂಡ ಶಾಪಿಂಗ್​ಗೆ ಹಣ ಕೊಟ್ಟಿಲ್ಲ ಅಂತ ಲವರ್​ನ ಕರೆಸಿ ಹೊಡೆಸಿದ ಹೆಂಡತಿ!

    ಆಶುಭಾಷಣ

    ಒಂದು ವಿಷಯವನ್ನು ಆಯ್ದುಕೊಂಡು ತಕ್ಷಣವೇ ತಮ್ಮ ಯೋಚನಾ ಲಹರಿಯಲ್ಲಿ ಬಂದ ವಿಚಾರಗಳನ್ನು ನಿರರ್ಗಳವಾಗಿ ಭಾಷಣದ ರೂಪದಲ್ಲಿ ಹೇಳುವುದೇ ಆಶು ಭಾಷಣದ ವಿಶೇಷತೆ. ಯಾವುದೇ ಪೂರ್ವ ತಯಾರಿ ಇಲ್ಲದೆ ಮಕ್ಕಳು ಮಾತನಾಡಬೇಕಾದರೆ ಭಾಷೆ ಕರಗತವಾಗಿರಬೇಕು, ವಿಷಯ ಜ್ಞಾನ ಇರಬೇಕು, ಉಚ್ಛಾರ ಸ್ಪಷ್ಟತೆ ಇರಬೇಕು.ಆಶು ಭಾಷಣದಂತಹ ಚಟುವಟಿಕೆಗಳನ್ನು ಆಗಾಗ್ಗೆ ತರಗತಿಗಳಲ್ಲಿ ನಡೆಸುವುದರಿಂದ ವಿದ್ಯಾರ್ಥಿಗಳ ಭಾಷಾ ಅಭಿವ್ಯಕ್ತಿ ಉತ್ತಮಗೊಳ್ಳುತ್ತದೆ. ಜೊತೆಗೆ ಸಭಾ ಕಂಪನವೂ ದೂರವಾಗುತ್ತದೆ.

    ಶಿಶು ಪ್ರಾಸಗಳು

    ಝುಣ ಝುಣ ಝುಣ

    ಜೇಬು ತುಂಬ ಹಣ

    ಮೇಲಕೆತ್ತಿ ಬಿಡಲು ಸದ್ದು

    ಟಣ್ ಟಣಾ ಟಣಾ

    ಈ ರೀತಿಯ ಶಿಶು ಪ್ರಾಸವನ್ನು ನಾವೆಲ್ಲರೂ ಬಾಲ್ಯದಲ್ಲಿ ಗುನುಗಿಕೊಂಡೇ ಬೆಳೆದವರು. ಶಿಶು ಪ್ರಾಸವನ್ನು ಮಕ್ಕಳ ಬಾಯಲ್ಲಿ ಸದಾ ಉಲಿಯುವಂತೆ ಮಾಡುವುದರಿಂದ ನಿರರ್ಗಳವಾಗಿ ವಾಕ್ಯಗಳನ್ನು ಉಚ್ಚರಿಸುವಂತೆ ಮಾಡಬಹುದು. ಅದಲ್ಲದೆ ಭಾಷೆಯ ಸೌಂದರ್ಯವನ್ನು ಸವಿಯಲು ಇವು ಸಹಕರಿಸುತ್ತವೆ.

    ಪ್ರಾಸ ಪದಗಳು

    ಪ್ರಾಸವಿಲ್ಲದ ಪದವ ತಾಸು ಹಾಡಿದರೇನು

    ಸಾಸಿವೆ ಎಣ್ಣೆ ಹದ ಮಾಡಿ ಕಣ್ಣಿಂಗೆ

    ಪೂಸಿಕೊಂಡಂತೆ ಸರ್ವಜ್ಞ || ಎಂಬ ಸರ್ವಜ್ಞನ ವಚನದ ಸಾಲುಗಳಂತೆ, ಶಿಶು ಗೀತೆಗಳಲ್ಲಿ, ಪದ್ಯಗಳಲ್ಲಿ ಪ್ರಾಸ ಇದ್ದರೆ ಬಲು ಸೊಗಸು. ಪದ್ಯದ ಸಾಲಿನ ಕೊನೆಯಲ್ಲಿ ಬರುವ ಒಂದೇ ರೀತಿಯ ಉಚ್ಚಾರವನ್ನು ಧ್ವನಿಸುವ ಪ್ರಾಸ ಪದಗಳನ್ನು ಮಕ್ಕಳಿಗೆ ಪಟ್ಟಿ ಮಾಡಿಸುವುದು, ಹೇಳಿಸುವುದರಿಂದ ಮಕ್ಕಳಿಗೆ ಕಲಿಕೆ ಆಸಕ್ತಿಯುತವಾಗುತ್ತದೆ. ಪ್ರಾಸ ಪದಗಳನ್ನು ಆಟದ ರೂಪದಲ್ಲಿ ಒಬ್ಬರು ಒಂದು ಪದ ಹೇಳಿದಾಗ, ಇನ್ನೊಬ್ಬರು ಅದಕ್ಕೆ ಜೋಡಣೆಯಾಗುವ ಪ್ರಾಸ ಪದ ಹೇಳುವುದು ಈ ರೀತಿಯಲ್ಲಿ ಕೂಡ ಹೇಳಿಸಬಹುದು.

    ಇದನ್ನೂ ಓದಿ: ಕಲ್ಯಾಣ ಮಂಟಪದಲ್ಲೇ ಕುಸಿದು ಬಿದ್ದ ವರ; ಆಸ್ಪತ್ರೆಯ ಮಾರ್ಗಮಧ್ಯೆ ಸಾವು

    ಕಥೆಗಳು

    ತೊಟ್ಟಿಲು ಕಂದನಿಂದ ಮೊದಲುಗೊಂಡು ಪ್ರೌಢಶಾಲಾ ಹಂತದವರೆಗೂ ಮಕ್ಕಳು ಕಥೆಗಳನ್ನು ಇಷ್ಟಪಡುತ್ತಾರೆ. ಹಿರಿಯರು, ಶಿಕ್ಷಕರು ಪ್ರತಿದಿನವೂ ಮಕ್ಕಳಿಗೆ ಕುತೂಹಲ ಮೂಡಿಸುವ ಕಥೆಗಳನ್ನು ಹೇಳಬಹುದು. ಮಕ್ಕಳು ಕಥೆಗಳನ್ನು ಆಲಿಸುತ್ತಾ ಹೋದಂತೆ ಅವರ ಕಲ್ಪನಾ ಶಕ್ತಿ ವಿಸ್ತಾರಗೊಳ್ಳುತ್ತದೆ. ತಾವೂ ಕೂಡ ಕಥೆಗಳನ್ನು ಓದುವ, ಹೇಳುವ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ತರಗತಿಯಲ್ಲಿ ಒಂದೊಂದು ವಾಕ್ಯವನ್ನು ಒಬ್ಬೊಬ್ಬರು ಹೇಳುತ್ತಾ ಸರಣಿ ರೂಪದಲ್ಲಿ ತಮ್ಮದೇ ಆದ ಕಥೆ ಹೆಣೆಯುವ ಚಟುವಟಿಕೆ ಕೂಡ ನಡೆಸಬಹುದು. ನಿರರ್ಗಳವಾಗಿ ಕಥೆ ಹೇಳುವ ಅಭ್ಯಾಸ ರೂಢಿಯಾದಾಗ ಭಾಷಾ ಸ್ಪಷ್ಟತೆ, ವಾಕ್ಯಗಳ ಸರಿಯಾದ ಜೋಡಣೆ ಎಲ್ಲವನ್ನೂ ಸುಲಭವಾಗಿ ಕರಗತ ಮಾಡಿಕೊಳ್ಳಬಹುದು. ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಎಂಬಂತೆ ಮಕ್ಕಳು ಮನೆಯಲ್ಲೇ ಒಂದಿಷ್ಟು ಕನ್ನಡ ಬಳಕೆಯ ಅಭ್ಯಾಸ ಮಾಡಿಕೊಂಡಿದ್ದರೂ, ಶಾಲಾ ಹಂತದಲ್ಲಿ ನಾಡುನುಡಿಯಾದ ಕನ್ನಡವನ್ನು ಸರಳವಾಗಿ, ಮೋಜಿನ ಕಲಿಕೆಯಾಗುವಂತೆ ವ್ಯವಸ್ಥಿತವಾಗಿ ಕಲಿಸಬೇಕಿದೆ. ಕರ್ನಾಟಕದ ಸರ್ಕಾರಿ ಶಾಲೆಗಳ ನಲಿ ಕಲಿ ಶಿಕ್ಷಣ ಪದ್ಧತಿ ಮತ್ತು ಪ್ರಸ್ತುತ ವರ್ಷ ಅನುಷ್ಠಾನದಲ್ಲಿರುವ ಕಲಿಕಾ ಚೇತರಿಕೆಯ ಕನ್ನಡ ಭಾಷಾ ಕಲಿಕಾ ಪುಸ್ತಕಗಳಲ್ಲಿ ಮೋಜಿನಿಂದ ಆಡುವ ಭಾಷಾ ಆಟಗಳು ಮತ್ತು ಸಂತಸದಾಯಕ ಕಲಿಕೆಗೆ ಬಹಳಷ್ಟು ಅವಕಾಶಗಳಿವೆ. ಮನೆಯಲ್ಲಿ ಕನ್ನಡ ಹೊರತುಪಡಿಸಿ ಅನ್ಯ ಭಾಷೆ ಮಾತನಾಡುವ ಮಕ್ಕಳಿಗಂತೂ ಶಾಲಾ ಶಿಕ್ಷಣದಲ್ಲಿ ತಪ್ಪಿಲ್ಲದ ಒಪ್ಪವಾದ ಕನ್ನಡ ಭಾಷಾ ಕಲಿಕೆಗೆ ಶಾಲಾ ಶಿಕ್ಷಣದಲ್ಲಿ ಅವಕಾಶ ಮಾಡಿಕೊಡಬೇಕಿದೆ.

    ಟ್ರಾಫಿಕ್ ಫೈನ್, ಮತ್ತೆ 50% ಆಫರ್​​: ಎಷ್ಟು ದಿನಗಳವರೆಗೆ ಅವಕಾಶ?

    ಸ್ಮಾರ್ಟ್​ ಟ್ರ್ಯಾಪ್​: ಪ್ರಶಾಂತ್ ಮಾಡಾಳ್​ಗೆ ದೂರುದಾರ ಬಲೆ ಹೆಣೆದಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts