More

    ಮಿತಭಾಷಿ ನಿರ್ಮಲಾ: ಬಜೆಟ್​ ಮಂಡನೆಯಲ್ಲಿ ಕ್ರಮೇಣ ಕಡಿಮೆಯಾದ ಮಾತು; ಯಾವಾಗ ಎಷ್ಟು ಮಾತು?

    ನವದೆಹಲಿ: ಸತತ ಐದನೇ ಸಲ ಕೇಂದ್ರ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್​ ಬಹುಶಃ ‘ಮಾತು ಕಡಿಮೆ, ಕೆಲಸ ಜಾಸ್ತಿ’ ಎಂಬ ಸೂತ್ರವನ್ನು ಪಾಲಿಸಿಕೊಂಡು ಬಂದಂತಿದೆ. ಪ್ರತಿ ಬಜೆಟ್​ನಲ್ಲೂ ಮಾತು ಕಡಿಮೆ ಆಡುತ್ತ ಬಂದಿರುವ ಅವರು ಈ ಸಲ ಅತ್ಯಂತ ಕಡಿಮೆ ಮಾತಿನಲ್ಲೇ ಬಜೆಟ್ ಮಂಡಿಸಿ, ಮಿತಭಾಷಿ ನಿರ್ಮಲಾ ಎಂದೆನಿಸಿಕೊಂಡಿದ್ದಾರೆ.

    ವಿತ್ತ ಸಚಿವೆಯಾಗಿ 2019-20ರಲ್ಲಿ ಪ್ರಥಮ ಸಲ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್​, 2 ಗಂಟೆ 17 ನಿಮಿಷಗಳ ಕಾಲ ಮಾತನಾಡಿದ್ದರು. 2020-21ರಲ್ಲಿ ಎಂದಿಗಿಂತ ಹೆಚ್ಚೇ ಅಂದರೆ 2 ಗಂಟೆ 42 ನಿಮಿಷಗಳ ಕಾಲ ಮಾತನಾಡಿದ್ದರು. ಆ ಮೂಲಕ ಇದು ಅವರು ಮಂಡಿಸಿದ್ದ ಬಜೆಟ್​ಗಳಲ್ಲೇ ಅತ್ಯಂತ ದೀರ್ಘ ಎನಿಸಿಕೊಂಡಿತ್ತು.

    2021-22ರಲ್ಲಿ 1 ಗಂಟೆ 50 ನಿಮಿಷಗಳ ಕಾಲ ಮಾತನಾಡಿದ್ದ ನಿರ್ಮಲಾ ಸೀತಾರಾಮನ್​, 2022-23ರ ಬಜೆಟ್ ಸಂದರ್ಭದಲ್ಲಿ ನೂರು ನಿಮಿಷಗಳ ಒಳಗೇ ಮಾತು ಮುಗಿಸಿದ್ದರು. ಅಂದರೆ ಆಗ ಅವರು 1 ಗಂಟೆ 32 ನಿಮಿಷಗಳಲ್ಲಿ ಬಜೆಟ್ ಮಂಡಿಸಿದ್ದರು. ಆದರೆ ಈ ಸಲ ಅದಕ್ಕೂ ಕಡಿಮೆ ಅಂದರೆ 2023-24ರ ಬಜೆಟನ್ನು ಅವರು 1 ಗಂಟೆ 27 ನಿಮಿಷಗಳಲ್ಲೇ ಮಂಡಿಸಿದ್ದಾರೆ. ಆ ಮೂಲಕ ಅವರು ಮಂಡಿಸಿದ ಐದು ಬಜೆಟ್​ಗಳಲ್ಲಿ ಇದು ಅತ್ಯಂತ ಕಡಿಮೆ ಅವಧಿಯಲ್ಲಿ ಮಂಡಿಸಿದ ಬಜೆಟ್ ಎನಿಸಿಕೊಂಡಿದೆ.

    ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?

    ರಾಜ್ಯಕ್ಕೆ ಎದುರಾಗಿದೆ ಒಂದು ಹೊಸ ಆತಂಕ; ಸರ್ಕಾರದ ಮೊರೆ ಹೋದ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts