More

    VIDEO: ಬೆಳ್ಳಂಬೆಳಗ್ಗೆ ಚಿತ್ರದುರ್ಗದಲ್ಲಿ ಭೀಕರ ಸರಣಿ ಅಪಘಾತ: ನಾಲ್ವರ ದಾರುಣ ಸಾವು

    ಚಿತ್ರದುರ್ಗ: ಚಿತ್ರದುರ್ಗದ ಹಿರಿಯೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಸುಕಿನ ಜಾವ ಭಾರಿ ಸರಣಿ ಅಪಘಾತ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ.

    ಈರುಳ್ಳಿ ತುಂಬಿದ ಲಾರಿ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿ ಈ ಅಪಘಾತ ನಡೆದಿದೆ. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಲಾರಿ, ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಎರಡೂ ಲಾರಿಗಳು ಪಲ್ಟಿ ಹೊಡೆದಿವೆ.

    ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಚಿತ್ರದುರ್ಗ ಕಡೆಯಿಂದ ಬೆಂಗಳೂರು ಕಡೆ ಹೋಗುವಾಗ ಈ ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ಹನುಮಪ್ಪ ಕಳಕಪ್ಪ ಹುನಗುಂದಿ (30), ಗುರಪ್ಪಾ ಹುಗರ್ (26), ರಮೇಶ್ (28), ಪ್ರಾಶಂತ್ ಹಟ್ಟಿ (36) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಗದಗ ಜಿಲ್ಲೆಯ ಹುಯಿಗೊಳ ಗ್ರಾಮದವರು.

    ಅಪಘಾತದಲ್ಲಿ ಲಕ್ಷಾಂತರ ಮೌಲ್ಯದ ಈರುಳ್ಳಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ. (ದಿಗ್ವಿಜಯ ನ್ಯೂಸ್‌)

    ಪೊಲೀಸರಿಂದ ಕ್ರೇನ್ ಮೂಲಕ ಲಾರಿಗಳ ತೆರವು ಕಾರ್ಯ ನಡೆದಿದೆ. ಸ್ಥಳಕ್ಕೆ ಹಿರಿಯೂರು ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.   (ದಿಗ್ವಿಜಯ ನ್ಯೂಸ್‌)

    ಅಪಘಾತದ ವಿಡಿಯೋ ಇಲ್ಲಿದೆ ನೋಡಿ:

    ಡೆಂಘೆಗೆ ಬಲಿಯಾದ ಶಾಸಕಿ: ಕಾಂಗ್ರೆಸ್‌ನಲ್ಲಿ ಗೆಲುವು ಸಾಧಿಸಿದ್ದ ಇವರು ಬಿಜೆಪಿಯಲ್ಲಿಯೂ ಜಯಭೇರಿ ಬಾರಿಸಿದ್ದರು

    ಮಕ್ಕಳಿಗಾಗಿ ಜೀವ ಹಿಡಿದುಕೊಂಡಿರುವೆ, ಹಿಂಸೆ ಸಹಿಸಿಕೊಂಡು ಜೀವಂತ ಶವವಾಗಿದ್ದೇನೆ… ನನ್ನ ಕಥೆ ಕೇಳಿ ದಾರಿ ತೋರುವಿರಾ?

    ಕೋಳಿ, ಬಾತುಕೋಳಿಯಲ್ಲಿ ಹಕ್ಕಿಜ್ವರ ದೃಢ: 12 ಸಾವಿರ ಪಕ್ಷಿಗಳ ಮಾರಣಹೋಮ- ಮಾಂಸದಂಗಡಿ ಬ್ಯಾನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts