More

    ಪ್ರೀತಿಯ ಹೆಂಡತಿಯ ಅಗಲಿಕೆಯ ನೋವು ತಾಳದೇ ಅಂತ್ಯಕ್ರಿಯೆ ವೇಳೆ ಚಿತೆಯೇರಿದ ಪತಿ!

    ಭವಾನಿಪಟ್ನಾ (ಒಡಿಶಾ): ಹಿಂದೆಲ್ಲಾ ಸತಿಸಹಗಮನ ಪದ್ಧತಿ ಜಾರಿಯಲ್ಲಿತ್ತು. ಪತಿ ಮೃತಪಟ್ಟ ತಕ್ಷಣ ಆತನ ಚಿತೆಯನ್ನು ಪತ್ನಿಯಾದವಳು ಏರಬೇಕಿತ್ತು! ಒತ್ತಾಯಪೂರ್ವಕವಾಗಿ ಆಕೆಯನ್ನು ಚಿತೆಯ ಮೇಲೆ ಕುಳ್ಳರಿಸಲಾಗುತ್ತಿತ್ತು. ಈ ಅನಿಷ್ಠ ಪದ್ಧತಿ ತೊಗಲಿ ಹಲವಾರು ದಶಕಗಳು ನಡೆದರೂ ಅಲ್ಲಲ್ಲಿ ಇಂಥ ಘಟನೆಗಳು ಕೇಳಿಬರುತ್ತಲೇ ಇರುತ್ತವೆ.

    ಆದರೆ ಒಡಿಶಾದಲ್ಲಿ ನಡೆದದ್ದು ಮಾತ್ರ ಇದಕ್ಕೆ ವಿರುದ್ಧವಾಗಿರುವ ಘಟನೆ. ಇಲ್ಲಿ ಪತಿಯೇ ಪತ್ನಿಯ ಚಿತೆಯನ್ನು ಏರಿ ಪ್ರಾಣ ಬಿಟ್ಟಿದ್ದಾರೆ. ಪ್ರೀತಿಯ ಪತ್ನಿಯ ಅಗಲಿಕೆಯನ್ನು ಸಹಿಸದ ಅವರು, ಉರಿಯುವ ಚಿತೆಯನ್ನೇರಿದ್ದಾರೆ. ಇಂಥ ಘಟನೆ ನಡೆದಿರುವುದು ಕಾಲಹಂದಿ ಜಿಲ್ಲೆ ಗೋಲಮುಂಡ ತಾಲ್ಲೂಕಿನ ಸಿಯಾಲ್‌ಜೋಡಿ ಗ್ರಾಮದಲ್ಲಿ.

    ನೀಲಮಣಿ ಸಬರ್‌ (65) ಚಿತೆಗೆ ಹಾರಿದ ವ್ಯಕ್ತಿ. ಇವರು ತನ್ನ ಪತ್ನಿ ರಾಯಿಬರಿ (60) ಅವರು ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಮುಗಿಸಿದ ನಂತರ ನಾಲ್ವರು ಪುತ್ರರು ಮತ್ತು ಅಂತ್ಯಕ್ರಿಯೆಗೆ ಹೋದ ಸಂಬಂಧಿಕರು ಸಂಪ್ರದಾಯದಂತೆ ಸ್ನಾನಕ್ಕೆ ಹೋಗಿದ್ದರು. ಆ ಸಮಯದಲ್ಲಿ ಯಾರೂ ಇಲ್ಲದ್ದನ್ನು ನೋಡಿ ಚಿತೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಕುಟುಂಬಸ್ಥರು ಸ್ಥಳಕ್ಕೆ ಬಂದಾಗಲೇ ವಿಷಯ ತಿಳಿದಿದೆ.

    ನೀಲಮಣಿ ಅವರು ಗ್ರಾಮ ಪಂಚಾಯಿತಿ ಸಮಿತಿಯ ಮಾಜಿ ಸದಸ್ಯರಾಗಿದ್ದರು.

    ‘ಹುಲಿ ಎರಡು ಹೆಜ್ಜೆ ಹಿಂದೆ ಹೋದರೆ ಅದು ಬೇಟೆಗಾಗಿ… ತಾಲಿಬಾನಿಗಳ ಜತೆ ಪಾಕಿಗಳಿಗೂ ಬುದ್ಧಿಕಲಿಸುವೆ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts