More

    ಮೂರು ವರ್ಷಗಳಲ್ಲಿ 582 ಪಾಕ್​ ಉಗ್ರರ ಹತ್ಯೆ: ರಾಜ್ಯಸಭೆಗೆ ಮಾಹಿತಿ

    ನವದೆಹಲಿ: ಕಳೆದ ಆರು ತಿಂಗಳಲ್ಲಿ ‌ಚೀನಾ-ಭಾರತ ಗಡಿಯ ಮೂಲಕ ಯಾವುದೇ ನುಸುಳಿಕೆ ಪ್ರಕರಣಗಳು ನಡೆದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಇಂದು ರಾಜ್ಯಸಭೆಗೆ ತಿಳಿಸಿದೆ.

    ಇದೇ ವೇಳೆ, ಭಾರತ ಮತ್ತು ಪಾಕಿಸ್ತಾನದ ಭಾಗದಲ್ಲಿ 47 ಬಾರಿ ಒಳಸುಳುವಿಕೆಯ ಪ್ರಯತ್ನಗಳು ನಡೆದಿವೆ. ಜಮ್ಮು-ಕಾಶ್ಮೀರದ ಗಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 594 ಬಾರಿ ಪಾಕಿಸ್ತಾನ ಸೇನೆ ಭಾರತದ ಗಡಿಯೊಳಕ್ಕೆ ನುಸುಳಲು ಪ್ರಯತ್ನಿಸಿದ್ದು, 312 ಬಾರಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಲಾಗಿದೆ.

    ಭಾರತ, ಚೀನಾ ಮತ್ತು ಪಾಕಿಸ್ತಾನದ ಜತೆಗಿನ ಸಂಘರ್ಷದ ಕುರಿತಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕೃಷ್ಣಾರೆಡ್ಡಿ ಅವರು ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ್ದು, ಅದರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

    ಇದನ್ನೂ ಓದಿ: ಬಾಬ್ರಿ ಕಟ್ಟಡ ಧ್ವಂಸ ತೀರ್ಪು ಸೆ.30ಕ್ಕೆ: ಆಡ್ವಾಣಿ ಸೇರಿ ಎಲ್ಲ ಆರೋಪಿಗಳು ಕೋರ್ಟ್‌ನಲ್ಲಿರಲು ಆದೇಶ

    ಕಳೆದ ಮೂರು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 582 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದು, ಈ ಅವಧಿಯಲ್ಲಿ 46 ಭಯೋತ್ಪಾದಕರನ್ನು ಬಂಧಿಸಲಾಗಿದೆ. 2018ರಿಂದ 2020ರ ಸೆಪ್ಟೆಂಬರ್ 8ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 76 ಸೇನಾ ಯೋಧರು ಹತ್ಯೆಯಾಗಿದ್ದಾರೆ. ಇದೇ ಅವಧಿಯಲ್ಲಿ  ಉಗ್ರರು ನಡೆಸಿರುವ ದಾಳಿಯಿಂದಾಗಿ 76 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಎಂದು ಅವರು ವಿವರಿಸಿದರು.

    18ರಿಂದ ಬದಲಾಗಲಿದೆ ಎಟಿಎಂ ವಿತ್​ಡ್ರಾ ರೂಲ್ಸ್​: ಇಲ್ಲಿದೆ ಮಾಹಿತಿ

    ಗಂಡ-ಮಗನನ್ನು ಬದುಕಿಸಲು ಪ್ರಾಣತೆಗೆದ ಹಾವನ್ನು ತಂದು ಪೂಜಿಸಿದಳು: ಮುಂದೇನಾಯ್ತು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts