More

  72 ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ

  ಕಡೂರು: ತಾಲೂಕು ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳಲ್ಲಿ ಕೇವಲ 16 ಜನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಹೊಸದಾಗಿ ಆರು ಯಂತ್ರಗಳನ್ನು ಅಳವಡಿಸಿದ್ದು, ಇದರಿಂದ 72 ಜನರು ಚಿಕಿತ್ಸೆ ಪಡೆಯುವ ಅವಕಾಶ ಲಭ್ಯವಾಗಿದೆ. ವಾರಕ್ಕೆ 30 ಸಾವಿರ ರೂ. ಖರ್ಚು ಮಾಡಬೇಕಾದೆಡೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ದೊರೆಯುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

  ಆಸ್ಪತ್ರೆಯಲ್ಲಿ ಶುಕ್ರವಾರ ಹೊಸ ಡಯಾಲಿಸಿಸ್ ಯಂತ್ರಗಳನ್ನು ಸೇವೆಗೆ ಚಾಲನೆ ನೀಡಿ ಮಾತನಾಡಿ, ಆಸ್ಪತ್ರೆಯಲ್ಲಿ 12 ಲಕ್ಷ ವೆಚ್ಚದಲ್ಲಿ ಹೊಸದಾಗಿ ಲಿವರ್, ಕಿಡ್ನಿ ಮುಂತಾದ ಕಾರ್ಯಕ್ಷಮತೆ ಪರೀಕ್ಷಿಸುವ ಯಂತ್ರ ಕಾರ್ಯಾರಂಭ ಮಾಡಿವೆ. ಇಲ್ಲಿ ಏಕಕಾಲಕ್ಕೆ 32 ಜನರ ರಕ್ತ ಪರೀಕ್ಷೆ ಮಾಡಬಹುದಾಗಿದೆ. ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವಿಲ್ಲ ಎನ್ನುವವರು ಇದನ್ನು ಗಮನಿಸಬೇಕು. ಹಿಂದೆ ಕರೊನಾ ಸಮಯದಲ್ಲಿ ಕೇವಲ ಹಣ ಮಾಡುವ ದಂಧೆ ಮಾಡಿದವರು ಆಸ್ಪತ್ರೆಗಳಿಗೆ ಇಂಥ ಸೌಲಭ್ಯಗಳನ್ನು ನೀಡಲು ಏಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು.
  ರಕ್ತನಿಧಿಯಲ್ಲಿರುವ ಸುಮಾರು 13.50 ಲಕ್ಷ ರೂ.ವನ್ನು ಸಾರ್ವಜನಿಕ ಆಸ್ಪತ್ರೆಗೆ ಅಲ್ಟ್ರಾ ಸೌಂಡ್ ಸ್ಕಾೃನಿಂಗ್ ಯಂತ್ರ ಖರೀದಿಸಲು ಬಳಸಲಾಗುತ್ತದೆ. ಪುರಸಭೆ ಸದಸ್ಯರಾದ ಭಂಡಾರಿ ಶ್ರೀನಿವಾಸ್, ಮೋಹನ್‌ಕುಮಾರ್, ಕಾಂತರಾಜು, ಟಿಎಂಒ ಡಾ. ರವಿಕುಮಾರ್, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಉಮೇಶ್, ಹಿರಿಯ ಲ್ಯಾಬ್ ಟೆಕ್ನಿಷಿಯನ್ ಸುರೇಶ್ ಹಾಗೂ ಸಿಬ್ಬಂದಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts