More

    14 ವರ್ಷದ ಬಾಲಕಿಯನ್ನು ಮದುವೆಯಾದ 50 ವರ್ಷದ ಸಂಸದ: ದಾಖಲಾಯ್ತು ಕೇಸ್​

    ಚಿತ್ರಾಲ್: ಸುಮಾರು 50 ವರ್ಷ ವಯಸ್ಸಿನ ಸಂಸದನೊಬ್ಬ 14 ವರ್ಷದ ಬಾಲಕಿಯನ್ನು ಮದುವೆಯಾಗಿರುವ ಗಟನೆ ಬಲೂಚಿಸ್ತಾನ್​ದಲ್ಲಿ ನಡೆದಿದೆ.
    ಅಸೆಂಬ್ಲಿಯ ಸದಸ್ಯ ಮತ್ತು ಉಲೇಮಾ-ಇ- ಇಸ್ಲಾಂ ಮುಖಂಡ ಮೌಲಾನಾ ಸಲಾಹುದ್ದೀನ್ ಅಯುಬಿ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. 14 ವರ್ಷದ ಬಾಲಕಿಯನ್ನು ಮೌಲಾನಾ ಮದುವೆಯಾಗಿದ್ದು, ಈ ಸಂಬಂಧ ದೂರು ದಾಖಲಾಗಿದೆ.

    ಬಲೋಚಿಸ್ತಾನದಿಂದ ಚುನಾಯಿತರಾಗಿರುವ ಮೌಲಾನಾ ಪ್ರೌಢಶಾಲೆ ಕಲಿಯುತ್ತಿರುವ ಬಾಲಕಿಯನ್ನು ಮದುವೆಯಾಗಿದ್ದಾರೆ. ಈ ವಿವಾಹದ ಬಗ್ಗೆ ತಿಳಿಯುತ್ತಲೇ ಮಹಿಳೆಯರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ದೂರು ದಾಖಲು ಮಾಡಿದೆ.

    ಸಂಸ್ಥೆ ನೀಡಿರುವ ದೂರನ್ನು ಆಧರಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಾಲಕಿಯು ಜುಗೂರ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಶಾಲೆಗೆ ಬಾಲಕಿಯ ಪಾಲಕರು ನೀಡಿರುವ ದಾಖಲೆಯನ್ನು ಪರಿಶೀಲನೆ ಮಾಡಲಾಗಿದೆ.

    ಈ ದಾಖಲೆಯಲ್ಲಿ ತಿಳಿದುಬಂದಿರುವ ಅಂಶ ಎಂದರೆ, ಬಾಲಕಿಯ ಜನ್ಮ ದಿನ ಅಕ್ಟೋಬರ್ 28, 2006 ಆಗಿದೆ. ಆಕೆಗೆ ಮದುವೆಯ ವಯಸ್ಸಾಗಿಲ್ಲ ಎಂಬುದನ್ನು ಇದು ತೋರಿಸುತ್ತಿದೆ. ಆದರೆ ಸಂಸದ ಮೌಲಾನಾ ಆಕೆಯನ್ನು ಕಾನೂನುಬಾಹಿರವಾಗಿ ಮದುವೆಯಾಗಿದ್ದಾರೆ. ಅವರ ವಯಸ್ಸು 50ಕ್ಕೂ ಹೆಚ್ಚು ಎಂದು ಪಾಕಿಸ್ತಾನದ ಮಾಧ್ಯಮಗಳಲ್ಲಿ ವರದಿಯಾಗಿದೆ.

    ಸಂಸ್ಥೆ ನೀಡಿರುವ ವರದಿಯನ್ನು ಪರಿಶೀಲನೆ ಮಾಡಿದ ನಂತರ ಬಾಲಕಿಯ ಮನೆಗೆ ಪೊಲೀಸರು ತೆರಳಿದಾಗ, ಆಕೆಯ ತಂದೆ ತನ್ನ ಮಗಳಿಗೆ ಮದುವೆಯಾಗಿಲ್ಲ, ಇದು ಸುಳ್ಳೇ ಸುದ್ದಿ ಎಂದಿದ್ದಾರೆ. ಆದರೆ ಆಕೆಯ ಜತೆ ವಿವಾಹ ಆಗಿರುವ ಬಗ್ಗೆ ಕೆಲವೊಂದು ದಾಖಲೆಗಳು ಸಿಕ್ಕಿವೆ. ಆದರೆ ಇದು ಭಾರಿ ಸುದ್ದಿಯಾಗುತ್ತಿದ್ದಂತೆಯೇ ವಿವಾಹವನ್ನು ನಿರಾಕರಿಸಿರುವ ತಂದೆ ಈ ಸಂಬಂಧ ಪೊಲೀಸರಿಗೆ ಹೆದರಿ ಪ್ರಮಾಣಪತ್ರವನ್ನೂ ನೀಡಿದ್ದಾರೆ.

    ಪಾಕಿಸ್ತಾನದ ಕಾನೂನು ಪ್ರಕಾರ 16 ವರ್ಷಕ್ಕಿಂತ ಕೆಳಗಿನ ಬಾಲಕಿಯರ ವಿವಾಹಕ್ಕೆ ಅವಕಾಶ ಇಲ್ಲ. ಆದರೆ ಬಲವಂತದಿಂದ ಬಾಲಕಿಯ ಮದುವೆ ಮಾಡಲಾಗಿದೆ ಎನ್ನಲಾಗಿದೆ. ಇದರ ಅನ್ವಯ ಆಕೆಯ ಪಾಲಕರಿಗೆ ಶಿಕ್ಷೆ ನೀಡಲಾಗುತ್ತದೆ.ಆದ್ದರಿಂದ ಸ್ವಯಂ ಸೇವಾ ಸಂಸ್ಥೆ ದೂರು ನೀಡಿದೆ.

    ಈ ದೂರಿನ ಅನ್ವಯ ಪೊಲೀಸರು ಬಾಲಕಿ ಮನೆಗೆ ತೆರಳಿ, ವಿಚಾರಣೆ ನಡೆಸಿದ್ದಾರೆ. ಆದರೆ, ಆಕೆಯ ತಂದೆ ಮದುವೆ ಆಗಿಲ್ಲ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಪ್ರಮಾಣ ಪತ್ರವನ್ನೂ ನೀಡಿದ್ದಾರೆ ಎಂದು ಚಿತ್ರಾಲ್ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಸಜ್ಜಾದ್ ಅಹ್ಮದ್ ಹೇಳಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​​ ಮಾಡಿ

     

     

    ಅಯ್ಯೋ ಅವ್ನ ಮದ್ವೆಯಾಗಿದೆ ಅಂತ ಗೊತ್ತಿದ್ರೆ ಅವ್ನ ಜತೆ ಹೀಗೆಲ್ಲಾ ಮಾಡ್ತಾನೇ ಇರ್ಲಿಲ್ಲ: ಕಣ್ಣೀರಿಟ್ಟ ರಾಖಿ ಸಾವಂತ್​

    ಪತ್ನಿಯ ಮೊಬೈಲ್​ನಲ್ಲಿ ಪ್ರಿಯಕರನ ಮೆಸೇಜ್​ ನೋಡಿ ಅಸಹ್ಯ ಹುಟ್ಟಿದೆ- ಅವಳಿಗೆ ವಿಚ್ಛೇದನ ನೀಡಬಹುದೆ?

    ಹುಟ್ಟುಹಬ್ಬಕ್ಕೆ ತಾಯಿ ಕೊಟ್ಟ ಸರ್​ಪ್ರೈಸ್​ ಗಿಫ್ಟ್​ ನೋಡಿ ಮಗ ಶಾಕ್​, ಅಮ್ಮ ರಾಕ್​…

    ಪತಿಗೆ ಗೊತ್ತಿಲ್ಲದಂತೆ ಆಗಾಗ್ಗೆ ನನ್ನನ್ನು ಸೇರಲು ಒಪ್ಪಿದ್ದಾಳೆ- ಇದು ತಪ್ಪೋ, ಸರಿಯೊ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts