More

    ತಪ್ಪೇ ಮಾಡದೆ 20 ವರ್ಷ ಪಾಕ್‌ ಜೈಲಿನಲ್ಲಿದ್ದ ಮಾನಸಿಕ ಅಸ್ವಸ್ಥ ತವರಿಗೆ ಮರಳಿದಾಗ…

    ಭುವನೇಶ್ವರ: 25 ವರ್ಷಗಳ ಹಿಂದೆ ಈತ ಮನೆಬಿಟ್ಟು ಹೋದಾಗ ಮಾನಸಿಕ ಅಸ್ವಸ್ಥನಾಗಿದ್ದ. ಗೊತ್ತು ಗುರಿಯಿಲ್ಲದೇ ತಿರುಗಾಡುತ್ತಿದ್ದ ಈತನೀಗ ತವರಿಗೆ ವಾಪಸಾಗಿದ್ದಾನೆ. ಆದರೆ ವಿಚಿತ್ರ ಸಂಗತಿಯೆಂದರೆ ಈತ ಕಳೆದ 20 ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿದ್ದ!

    ಹೌದು. ಇಂಥದ್ದೊಂದು ವಿಷಾದಕರ ಘಟನೆ ನಡೆದಿರುವುದು ಒಡಿಶಾದಲ್ಲಿ. ಈತನ ಹೆಸರು ಬಿರ್ಜು ಕುಲ್ಲು. ಒಡಿಶಾದ ಸುಂದರಗಡ ಜಿಲ್ಲೆಯ ಜಂಗತೇಲಿಯ 50 ವರ್ಷದ ವ್ಯಕ್ತಿಯೀತ. ಇದೀಗ ತನ್ನ ತವರಿಗೆ ವಾಪಸಾಗಿದ್ದಾನೆ. ಅದೂ 20 ವರ್ಷಗಳವರೆಗೆ ಪಾಕಿಸ್ತಾನದ ಜೈಲಿನಲ್ಲಿ ಇದ್ದು!

    ಅಷ್ಟಕ್ಕೂ ಬಿರ್ಜು ಮಾಡಿದ್ದ ತಪ್ಪು ಎಂದರೆ ಗೊತ್ತು ಗುರಿಯಿಲ್ಲದೇ ಅಲೆಯುತ್ತಿದ್ದಾಗ ಅಚಾನಕ್‌ ಆಗಿ ಪಾಕಿಸ್ತಾನದ ಗಡಿಯನ್ನು ಹೊಕ್ಕಿ ಬಿಟ್ಟಿದ್ದು! ಈ ವೇಳೆ ಅನುಮಾನಗೊಂಡ ಪಾಕಿಸ್ತಾನದವರು ಭಾರತದ ಗುಪ್ತಚರ ದಳದವರಿರಬೇಕು ಎಂದು ಬಂಧಿಸಿತ್ತು. ನಂತರ ಬಿರ್ಜು 20 ವರ್ಷ ಪಾಕಿಸ್ತಾನ ಜೈಲಿನಲ್ಲೇ ಕಾಲ ಕಳೆಯಬೇಕಾಯಿತು.

    ಇದೀಗ 20 ವರ್ಷಗಳ ವಿಚಾರಣೆ ನಂತರ ಪಾಕಿಸ್ತಾನ ಈತನನ್ನು ಬಿಡುಗಡೆ ಮಾಡಿದೆ. ಈತನನ್ನು ಕಂಡು ಗ್ರಾಮಸ್ಥರು ಅತೀವ ಸಂತೋಷಗೊಂಡಿದ್ದು, ಹೂವಿನ ಹಾರ ಹಾಕಿ ಭಾರಿ ಸ್ವಾಗತಕೋರಿದ್ದಾರೆ.

    ಇದನ್ನೂ ಓದಿ: ಕೆಟ್ಟುಹೋದ ಮೊಬೈಲ್‌ ಬದಲಿಸಿಕೊಟ್ಟಿಲ್ಲವೆಂದು ನೊಂದು ಬೆಂಕಿಹಚ್ಚಿಕೊಂಡ ವ್ಯಕ್ತಿ!

    ಒಡಿಶಾ ಜಿಲ್ಲಾಧಿಕಾರಿಗಳ ತಂಡ ಪಾಂಜಾಬ್‍ನ ಅಮೃತ್‍ಸರಕ್ಕೆ ಭೇಟಿ ನೀಡಿ ಆತನನ್ನು ಕರೆ ತಂದಿದ್ದು, ಕ್ವಾರಂಟೈನ್‌ನಲ್ಲಿ ಇರಿಸಿ, ಮನೆಗೆ ಒಪ್ಪಿಸಿದೆ.
    ಆದರೆ ಮಗನ ಬಗ್ಗೆ ಸುಳಿವೇ ಇಲ್ಲದೇ, ಆತನ ಯೋಚನೆಯಲ್ಲಿಯೇ ಅಪ್ಪ-ಅಮ್ಮ ಇಬ್ಬರೂ ಮೃತಪಟ್ಟಿದ್ದಾರೆ. ಬಿರ್ಜುವನ್ನು ಕಂಡ ಉಳಿದ ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲ. ಕಣ್ಣೀರಧಾರೆಯನ್ನೇ ಹರಿಸಿದ್ದಾರೆ. ಬಿರ್ಜು ಬದುಕಿದ್ದಾನೆ ಎಂಬ ಬಗ್ಗೆ ನಮಗೆ ಸ್ವಲ್ಪವೂ ಭರವಸೆ ಇರಲಿಲ್ಲ. ನಮಗಾಗಿ ಮರುಜನ್ಮ ಪಡೆದಿದ್ದಾನೆ ಎಂದು ಬಿರ್ಜು ಸಹೋದರಿ ಕಣ್ಣೀರು ಹಾಕಿದರು.

    ಆದರೆ 20 ವರ್ಷ ಪಾಕಿಸ್ತಾನದಲ್ಲಿ ಇದ್ದ ಬಿರ್ಜು ಆತ ಒರಿಯಾ ಭಾಷೆ ಹಾಗೂ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನೂ ಮರೆತಿದ್ದಾನೆ ಎನ್ನಲಾಗಿದೆ. ಹಿಂದಿಯಲ್ಲಿ ಮಾತನಾಡುತ್ತಿದ್ದಾನೆ. ಆದರೆ ಜೈಲಿಗೆ ಯಾವಾಗ ಹೋದ ಎಂಬುದು ಬಿರ್ಜುಗೆ ನೆನಪಾಗುತ್ತಿಲ್ಲವಂತೆ.

    ಸದ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬಿರ್ಜುಗೆ ಎಲ್ಲ ರೀತಿಯ ಸಹಾಯ ಮಾಡುವ, ಆಧಾರ್ ಹಾಗೂ ರೇಷನ್ ಕಾರ್ಡ್‍ಗಳನ್ನು ನೀಡುವ ಭರವಸೆ ನೀಡಿದೆ. ಜತೆಗೆ ಆತನಿಗಾಗಿ ಹೋಮ್ ಲೋನ್ ಸಹ ಕೊಡಿಸಲಾಗುತ್ತಿದೆ ಎಂದು ಬಿಡಿಒ ಮಾನಸ್ ರಂಜನ್ ರೇ ಮಾಹಿತಿ ನೀಡಿದ್ದಾರೆ.

    ಇಲ್ಲೊಂದು ಜಿಂಕೆಮರಿ ಇದೆ… ಹುಡುಕಿದರೆ ನೀವೇ ಗ್ರೇಟ್‌…

    ತಾಳ್ಮೆ ಪರೀಕ್ಷಿಸಿದರೆ ಸುಮ್ಮನಿರಲ್ಲ: ಪಾಕಿಗಳ ಎದೆ ನಡುಗಿಸುವ ತಿರುಗೇಟು ಹೇಗಿದೆ ನೋಡಿ…

    10 ಮದುವೆಯಾದರೂ ಸಿಕ್ಕಿಲ್ಲವಂತೆ ಸುಖ- ಗಂಡನಿಂದ ಈಕೆಗೆ ಬೇಕಾಗಿದ್ದೇನು ಅಂತ ಹೇಳಿದ್ದಾಳೆ ಕೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts