More

    13 ನಿಮಿಷಗಳಲ್ಲಿ 111 ಬಾಣ ಬಿಡುವ ಐದರ ಬಾಲೆಯಿಂದ ವಿಶ್ವದಾಖಲೆ

    ಚೆನ್ನೈ: ಕೇವಲ 13 ನಿಮಿಷಗಳಲ್ಲಿ 111 ಬಾಣಗಳನ್ನು ಬಿಡುಗ ಮೂಲಕ ಚೆನ್ನೈನ ಐದು ವರ್ಷದ ಬಾಲಕಿ ಪಿ. ಸಂಜನಾ ವಿಶ್ವದಾಖಲೆ ನಿರ್ಮಿಸಿದ್ದಾಳೆ.

    ಇಷ್ಟೇ ಅಲ್ಲದೇ, ಈಕೆ ತಲೆಕೆಳಗಾಗಿ ನಿಲ್ಲುವ ಮೂಲಕ ಸರಿಯಾಗಿ ಗುರಿಯಿಟ್ಟು, ಬುಲ್ಸ್‌ ಐ ಮೇಲೆ ಹೊಡೆಯುವಲ್ಲಿಯೂ ನಿಸ್ಸೀಮಳು. ಎಲ್​​ಕೆಜಿ ವಿದ್ಯಾರ್ಥಿನಿಯಾಗಿರುವ ಸಂಜನಾ 8 ಮೀಟರ್​​​​​ ದೂರದಲ್ಲಿನ ಗುರಿಗೆ ನೇರವಾಗ ಬಾಣ ಪ್ರಯೋಗಿಸಬಲ್ಲಳು.

    ವಿಶ್ವದಾಖಲೆಯ ನಿಯಮದಂತೆ ಈಕೆ ಗಂಟೆಗೆ 5 ನಿಮಿಷ ಬ್ರೇಕ್ ತೆಗೆದುಕೊಂಡು, ಮೂರು ಗಂಟೆ ಮೂವತ್ತು ನಿಮಿಷದ ಅವಧಿಯಲ್ಲಿ 1,111 ಬಾಣಗಳನ್ನು ಪ್ರಯೋಗಿಸಿ ಜಯ ಸಾಧಿಸಿದ್ದಾಳೆ.

    ಇದನ್ನೂ ಓದಿ: ದೇವರಜೀವನಹಳ್ಳಿ ಗಲಭೆಗೂ ಕಾಂಗ್ರೆಸ್​ಗೂ ಸಂಬಂಧ ಇಲ್ವಂತೆ…

    ದಿನಕ್ಕೆ ನಾಲ್ಕು ಗಂಟೆಗಳಿಗೂ ಅಧಿಕ ಸಮಯ ಸಂಜನಾ ಅಭ್ಯಾಸ ಮಾಡುತ್ತಿದ್ದು, ಆಕೆಗೆ ಬಿಲ್ಲುವಿನಲ್ಲಿ ಅಪಾರ ಆಸಕ್ತಿ ಇದೆ.

    ಬಾಲಕಿಯ ತಂದೆ ಪ್ರೇಮನಾಥ್ ಅವರು, ಮಗಳಿಗೆ ಎರಡನೇ ವರ್ಷ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಿಲ್ಲು ಬಾಣ ನೀಡಿದ್ದರು. ಅಲ್ಲಿಂದ ಆಕೆ ಅದರಲ್ಲೇ ಆಡತೊಡಗಿ ಆಸಕ್ತಿ ಮೂಡಿದೆ.

    ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಇಂಥ ಬಾಣಗಳ ಪ್ರಯೋಗ ಮಾಡಿರುವಲ್ಲಿ ವಿಶ್ವದಲ್ಲಿಯೇ ಮೊದಲಿಗಳು ಎಂದಿರುವ ಆಕೆಯ ಕೋಚ್‌ ಶಿಹಾನ್ ಹುಸೇನೀ, ಈ ದಾಖಲೆಯನ್ನು ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಳಿಸಲು ಕಳುಹಿಸುವುದಾಗಿ ತಿಳಿಸಿದ್ದಾರೆ.

    ಸೇತುವೆ ಸ್ಫೋಟಕ್ಕೆ ಉಗ್ರರ ಭಾರಿ ಸಂಚು: ಯೋಧರು ತಪ್ಪಿಸಿದ ಅನಾಹುತ

    ವಿಮಾನವಲ್ಲ… ಹದ್ದುಗಳ ಮೈನವಿರೇಳಿಸುವ ಕಸರತ್ತು- ವಿಡಿಯೋ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts