More

    ಇಂದು ರಾಜಸ್ಥಾನ-ಸನ್‌ರೈಸರ್ಸ್‌ ‘ಸೆಮಿಫೈನಲ್’: ಗೆದ್ದವರಿಗೆ ಒಲಿಯಲಿದೆ ಫೈನಲ್ ಟಿಕೆಟ್

    ಚೆನ್ನೈ: ಟೂರ್ನಿಯ ಚೊಚ್ಚಲ ಚಾಂಪಿಯನ್ಸ್ ರಾಜಸ್ಥಾನ ರಾಯಲ್ಸ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದು, ಐಪಿಎಲ್-17ರಲ್ಲಿ ಶುಕ್ರವಾರ ನಡೆಯಲಿರುವ ‘ಸೆಮಿೈನಲ್’ ಮಾದರಿಯ ಎರಡನೇ ಕ್ವಾಲಿೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಎದುರು ಪ್ರಶಸ್ತಿ ಸುತ್ತಿಗೇರಲು ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಭಾನುವಾರ ಕೋಲ್ಕತ ನೈಟ್ ರೈಡರ್ಸ್‌ ಎದುರು ೈನಲ್ ಪಂದ್ಯದಲ್ಲಿ ಆಡುವ ಅರ್ಹತೆ ಪಡೆಯಲಿದೆ. ಎರಡೂ ತಂಡಗಳ ಪೈಕಿ ಯಾರೇ ಗೆದ್ದರೂ 2ನೇ ಬಾರಿ ಪ್ರಶಸ್ತಿ ಒಲಿಸಿಕೊಳ್ಳುವ ಸನಿಹ ತಲುಪಲಿದ್ದು, ಸೋತ ತಂಡ ಟೂರ್ನಿಯ 3ನೇ ಸ್ಥಾನಕ್ಕೆ ತೃಪ್ತಿಪಡಲಿದೆ.

    ಚೆಪಾಕ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ನರ್‌ಗಳು ಹಾಗೂ ಸನ್‌ರೈಸರ್ಸ್‌ನ ಬಿಗ್ ಹಿಟ್ಟರ್‌ಗಳ ನಡುವೆ ಪೈಪೋಟಿ ನಡೆಯಲಿದ್ದು, ಉಭಯ ತಂಡಗಳು ಆತಿಥೇಯ ಆಟಗಾರರ ಬಲ ಹೊಂದಿವೆ. ಆದರೆ ಆರ್.ಅಶ್ವಿನ್ ಅನುಭವ ರಾಜಸ್ಥಾನಕ್ಕೆ ಅನುಕೂಲ ಎನಿಸಿದ್ದು, ಸನ್‌ರೈಸರ್ಸ್‌ನಲ್ಲಿ ಟಿ.ನಟರಾಜನ್ ಮತ್ತೋರ್ವ ತಮಿಳುನಾಡಿನ ಆಟಗಾರ ಎನಿಸಿದ್ದಾರೆ. ಲೀಗ್ ಹಂತದ ಏಕೈಕ ಮುಖಾಮುಖಿಯಲ್ಲಿ ಸನ್‌ರೈಸರ್ಸ್‌ 1 ರನ್‌ಗಳ ರೋಚಕ ಗೆಲುವು ದಾಖಲಿಸಿದ್ದು, ಈ ಸೋಲಿಗೆ ಸಂಜು ಸ್ಯಾಮ್ಸನ್ ಪಡೆ ಮುಯ್ಯಿ ತೀರಿಸುವ ಹಂಬಲದಲ್ಲಿದೆ.

    ಸನ್‌ರೈಸರ್ಸ್‌ಗೆ ಸೆಕೆಂಡ್ ಚಾನ್ಸ್: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್‌ ಎದುರು ಸೋತಿರುವ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಇದು ೈನಲ್‌ಗೇರಲು 2ನೇ ಅವಕಾಶವಾಗಿದೆ. ಮೊದಲ ಕ್ವಾಲಿೈಯರ್‌ನಲ್ಲಿ ಬ್ಯಾಟರ್‌ಗಳ ವೈಲ್ಯದಿಂದ ನಿರಾಸೆ ಅನುಭವಿಸಿದ್ದ ಸನ್‌ರೈಸರ್ಸ್‌, 2018ರ ಬಳಿಕ ಮೊದಲ ಬಾರಿಗೆ ೈನಲ್ ಪ್ರವೇಶಿಸುವ ಅವಕಾಶ ಹೊಂದಿದೆ. ಟೂರ್ನಿಯಲ್ಲಿ ನಿಧಾನವಾಗಿ ಲಯ ಕಂಡುಕೊಂಡರೂ ರನ್ ಮಳೆ ಹರಿಸಿದೆ. ಲೀಗ್ ಹಂತದ 14 ಪಂದ್ಯಗಳಲ್ಲಿ 8ರಲ್ಲಿ ಗೆದ್ದು ಬಲಿಷ್ಠ ನಿರ್ವಹಣೆ ತೋರಿದ್ದ ಸನ್‌ರೈಸರ್ಸ್‌, ಮೊದಲ ಬ್ಯಾಟಿಂಗ್ ಮಾಡುವ ಮೂಲಕ ಎದುರಾಳಿಗಳಿಗೆ ಕಠಿಣ ಗುರಿ ನೀಡುವ ತನ್ನ ಕಾರ್ಯತಂತ್ರ ಕೆಕೆಆರ್ ಎದುರು ಕೈ ಕೊಟ್ಟಿತ್ತು. ಈಗ ತಪ್ಪನ್ನು ಸರಿಪಡಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಚೇಸಿಂಗ್‌ನಲ್ಲೂ ಪ್ಯಾಟ್ ಕಮ್ಮಿನ್ಸ್ ಬಳಗ ಉತ್ತಮ ದಾಖಲೆ ಹೊಂದಿಲ್ಲ.

    ಮುಖಾಮುಖಿ: 19
    ಸನ್‌ರೈಸರ್ಸ್‌: 10
    ರಾಜಸ್ಥಾನ: 9
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts