More

    ರಷ್ಯಾ ಲಸಿಕೆ ಸುರಕ್ಷಿತ, ಪರಿಣಾಮಕಾರಿ; ‘ಸ್ಪುಟ್ನಿಕ್​-ವಿ’ಗೆ ಸಿಕ್ತು ಜಾಗತಿಕ ಮನ್ನಣೆ

    ನವದೆಹಲಿ: ರಷ್ಯಾದ ಸರ್ಕಾರಿ ಅಧೀನದ ಸಂಸ್ಥೆ ಉತ್ಪಾದಿಸಿರುವ ಕರೊನಾ ನಿಗ್ರಹ ಲಸಿಕೆಗೆ ಜಾಗತಿಕ ಮನ್ನಣೆ ಸಿಕ್ಕಂತಾಗಿದೆ.

    ಪ್ರಮುಖ ವೈದ್ಯಕೀಯ ಸಂಶೋಧನಾ ನಿಯತಕಾಲಿಕ ದಿ ಲಾನ್ಸೆಟ್​ನಲ್ಲಿ ಪ್ರಕಟವಾಗಿರುವ ಆರಂಭಿಕ ಹಂತದ ಫಲಿತಾಂಶದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಕರೊನಾ ಲಸಿಕೆ ಸಣ್ಣ ಪ್ರಮಾಣದ ಮಾನವರ ಗುಂಪಿನ ಮೇಲೆ ನಡೆಸಿದ ಪರೀಕ್ಷೆಯಲ್ಲಿ ಲಸಿಕೆ ಸುರಕ್ಷಿತ ಹಾಗೂ ಪ್ರತಿಕಾಯಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

    ಇದನ್ನೂ ಓದಿ; ಅಕ್ಟೋಬರ್​ ಅಂತ್ಯಕ್ಕೆ ಕರೊನಾ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ; 50 ರಾಜ್ಯಗಳಿಗೆ ಸೂಚನೆ ನೀಡಿದ್ಯಾರು? 

    ಮಾಸ್ಕೋದ ಗಾಮೇಲಿಯಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಇತ್ತೀಚೆಗಷ್ಟೇ ರಷ್ಯಾದಲ್ಲಿ ನೋಂದಣಿ ಮಾಡಲಾಗಿದೆ. ಒಟ್ಟು 76 ಜನರ ಮೇಲೆ ನಡೆಸಿದ ಕ್ಲಿನಿಕಲ್​ ಟ್ರಯಲ್​ನಲ್ಲಿ ಲಸಿಕೆಯ ಎರಡು ಮಾದರಿಗಳು ಸುರಕ್ಷಿತ ಎನಿಸಿವೆ. 42 ದಿನಗಳವರೆಗೆ ನಡೆಸಿದ ಪ್ರಯೋಗದಲ್ಲಿ 21 ದಿನದಲ್ಲಿ ಎಲ್ಲ ಪ್ರಯೋಗಾರ್ಥಿಗಳ ದೇಹದಲ್ಲಿ ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿವೆ ಎಂದು ವರದಿ ತಿಳಿಸಿದೆ.

    ಎರಡನೇ ಹಂತದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಲಸಿಕೆ 28 ದಿನಗಳ ಒಳಗೆಯೇ ಕರೊನಾ ವೈರಸ್​ಗಳನ್ನು ಕೊಲ್ಲುವ ಟಿ-ಸೆಲ್​ಗಳನ್ನು ಉತ್ಪಾದಿಸಿರುವುದು ಕಂಡುಬಂದಿದೆ.
    ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾ ಲಸಿಕೆ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದವು. ಜತೆಗೆ, ದೊಡ್ಡ ಪ್ರಮಾಣದಲ್ಲಿ ಕ್ಲಿನಿಕಲ್ ಟ್ರಯಲ್​ ನಡೆಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು. ಇದೀಗ ಲಾನ್ಸೆಟ್​ನಲ್ಲಿ ಸಂಶೋಧನಾ ವರದಿ ಪ್ರಕಟಗೊಳ್ಳುವ ಮೂಲಕ ಸ್ಪುಟ್ನಿಕ್​-ವಿ ಗೆ ಜಾಗತಿಕ ಮನ್ನಣೆ ಸಿಕ್ಕಂತಾಗಿದೆ.

    ಫ್ಲ್ಯಾಟ್​ನ ಕಿಟಕಿ ಹಾಕದೇ ಊರಿಗೆ ಹೋಗಿದ್ದ; ಐದು ತಿಂಗಳ ಬಳಿಕ ಮನೆ ನೋಡಿದವನಿಗೆ ಕಾದಿತ್ತು ಶಾಕ್​…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts