More

    ಸುರಕ್ಷಿತ ಹೆರಿಗೆ ಅರಿವು ಮೂಡಿಸಿ

    ಸಂಡೂರು: ಎಚ್‌ಐವಿ, ಹೆಪಟೈಟಿಸ್-ಬಿ ಮತ್ತು ಸಿಫಿಲಿಸ್ ರೋಗಮುಕ್ತ ಮಗು ಜನನವಾಗಲು ಗರ್ಭಿಣಿಯರಿಗೆ ಸೂಕ್ತ ಸಮಯಕ್ಕೆ ತಪಾಸಣೆ ನಡೆಸಬೇಕು ಎಂದು ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಹೇಳಿದರು.

    ತೋರಣಗಲ್ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಬಳ್ಳಾರಿ ಮತ್ತು ಸಮುದಾಯ ಆರೋಗ್ಯ ಕೇಂದ್ರ ಶುಶ್ರೂಷಕರು, ತಂತ್ರಜ್ಞರು, ಆಶಾ ಕಾರ್ಯಕರ್ತೆಯರಿಗೆ ಶುಕ್ರವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

    ಪಾಸಿಟಿವ್ ಎಂದು ತಿಳಿದ ನಂತರ ಹೆರಿಗೆಯಾಗುವವರೆಗಿನ ಎಲ್ಲ ಹಂತಗಳಲ್ಲೂ ಜಾಗ್ರತೆ ವಹಿಸಬೇಕು. ಗರ್ಭಿಣಿ ಎಂದು ತಿಳಿದ ತಕ್ಷಣದಿಂದ ತಾಯಿ ಮತ್ತು ಶಿಶುವಿನ ರಕ್ಷಣೆ ಬಗ್ಗೆ ಗಮನವಿರಬೇಕು. ಸುರಕ್ಷಿತ ಹೆರಿಗೆಯಿಂದ ಎಚ್‌ಐವಿ, ಹೆಪಟೈಟಿಸ್-ಬಿ ಮತ್ತು ಸಿಫಿಲಿಸ್ ರೋಗಗಳಿಂದ ಮಗುವನ್ನು ರಕ್ಷಿಸಬಹುದು. ಈ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.

    ಸ್ತ್ರಿರೋಗ ತಜ್ಞೆ ಡಾ.ಸಾದಿಯಾ, ಐಸಿಟಿಸಿ ಸಮಾಲೋಚಕ ಶ್ರೀರಾಮುಲು ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಲ್ಯಾಬ್ ತಂತ್ರಜ್ಞ ಅಧಿಕಾರಿ ವೆಂಕಟೇಶ್, ಪ್ರಶಾಂತ್ ಕುಮಾರ್, ಶುಶ್ರೂಷಕ ಅಧಿಕಾರಿ ಲಕ್ಷ್ಮೀ, ಆಶಾ ಕಾರ್ಯಕರ್ತೆ ಬಸಮ್ಮ, ಈರಮ್ಮ, ಶಹಿರಾಬಾನು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts