More

    ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಿಪಿಇ ಗೌನ್ ತೊಟ್ಟಿದ್ದ ನರ್ಸ್​ಗೆ ಒಲಿಯಿತು ಅದೃಷ್ಟ!

    ಮಾಸ್ಕೋ: ಕೆಲ ದಿನಗಳ ಹಿಂದೆ ರಷ್ಯಾ ರಾಜಧಾನಿ ಮಾಸ್ಕೋದ ಆಸ್ಪತ್ರೆಯೊಂದರ ಪುರುಷರ ವಾರ್ಡ್​ನಲ್ಲಿ ನರ್ಸ್​ ಒಬ್ಬಳು ಒಳ ಉಡುಪು ಕಾಣುವಂತೆ ಪಾರದರ್ಶಕ ಪಿಪಿಇ ರಕ್ಷಣಾ ಗೌನ್ ಧರಿಸಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿತ್ತು. ಪರ-ವಿರೋಧದ ಚರ್ಚೆಯು ನಡೆದಿತ್ತು. ಇದೀಗ ಅದೇ ನರ್ಸ್​ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಟಿವಿ ಮಾಧ್ಯಮದ ಹವಾಮಾನ ನಿರೂಪಕಿಯಾಗಿ ಕಾಣಿಸಿಕೊಂಡಿದ್ದು, ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

    ಇದನ್ನೂ ಓದಿ: VIDEO: ಹೊತ್ತಿ ಉರಿಯುತ್ತಿದ್ದ ಅಪಾರ್ಟ್​ಮೆಂಟ್​ನ ಕಿಟಕಿಯಿಂದ ಹಾರಿದ ಇಬ್ಬರು ಮಕ್ಕಳು; ಮುಂದೇನಾಯ್ತು ನೋಡಿ

    ನರ್ಸ್​ ನಾದಿಯಾ ಜುಕೋವಾ (23) ನಡೆಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಅವಳ ವಿರುದ್ಧ ಕೇಳಿಬಂದಿದ್ದ ಶಿಸ್ತಕ್ರಮವನ್ನು ರದ್ದುಗೊಳಿಸಲು ಆಸ್ಪತ್ರೆಯ ಮುಖ್ಯಸ್ಥರಿಗೆ ತುಂಬಾ ಒತ್ತಾಯಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ನಾದಿಯಾ, ಪಿಪಿಇ ಗೌನ್​​ ಜತೆ ನರ್ಸ್​ ಯೂನಿಫಾರ್ಮ್​ ಧರಿಸುವುದರಿಂದ ತುಂಬಾ ಸೆಕೆಯಾಗುತ್ತದೆ ಎಂದು ಹೇಳಿಕೊಂಡಿದ್ದಳು.

    ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವಳ ವಿರುದ್ಧ ಕೇಳಿಬಂದ ಶಿಸ್ತುಕ್ರಮವನ್ನು ಹಿಂಪಡೆಯಲಾಗಿತ್ತು. ಇದೀಗ ನಾದಿಯಾ ಅವರು ದಕ್ಷಿಣ ಮಾಸ್ಕೋದ ತುಳಾದಲ್ಲಿರುವ ಸ್ಥಳೀಯ ಮಾಧ್ಯಮವೊಂದರಲ್ಲಿ ಹವಾಮಾನ ನಿರೂಪಕಿಯಾಗಿದ್ದಾರೆ. ಅಲ್ಲದೆ, ನರ್ಸ್​ ಆಗಿಯೂ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ. ಇದರೊಂದಿಗೆ ಡಾಕ್ಟರ್​ ಆಗಬೇಕೆಂಬ ಕನಸು ನನಸು ಮಾಡಿಕೊಳ್ಳಲು ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ.

    ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಿಪಿಇ ಗೌನ್ ತೊಟ್ಟಿದ್ದ ನರ್ಸ್​ಗೆ ಒಲಿಯಿತು ಅದೃಷ್ಟ!

    ಇದಕ್ಕೂ ಮುನ್ನ ನಾದಿಯಾ ಅವರ ನಡೆಗೆ ಮನಸೋತಿದ್ದ “ಮಿಸ್​ ಎಕ್ಷ್​ ಲಿಂಗೇರಿ ಬ್ರ್ಯಾಂಡ್​”ನ ಮುಖ್ಯಸ್ಥರಾದ ಅನಸ್ತಾಸಿಯಾ ಯಕುಶೇವಾ ಅವರು, ನಮ್ಮ ಒಳ ಉಡುಪಿನ ಬ್ರ್ಯಾಂಡ್​ಗೆ ತುಳಾ ಆಸ್ಪತ್ರೆಯ ನರ್ಸ್​ ಅನ್ನು ಮಾಡೆಲ್​ ಆಗಿ ಮಾಡಲು ಬಯಸುತ್ತೇವೆ ಎಂದು ಆಫರ್​ ನೀಡಿದ್ದರು. ಆದರೆ, ವೈದ್ಯಕೀಯ ವೃತ್ತಿ ಜೀವನವನ್ನು ಮುಂದುವರಿಸುವ ಇಚ್ಛೆಯಲ್ಲಿದ್ದ ನಾದಿಯಾ ಅದನ್ನು ತಿರಸ್ಕರಿಸಿದ್ದರು.

    ಅಂದಹಾಗೆ ನಾದಿಯಾ ಒಳ ಉಡುಪಿನ ಮೇಲೆ ಪಿಪಿಇ ರಕ್ಷಣಾ ಗೌನ್​ ಅನ್ನು ಧರಿಸಿದ್ದ ಫೋಟೋವನ್ನು ದಕ್ಷಿಣ ಮಾಸ್ಕೋದಿಂದ 100 ಮೈಲಿ ದೂರದಲ್ಲಿರುವ ತುಳಾ ಆಸ್ಪತ್ರೆಯ ಪುರುಷರ ವಾರ್ಡ್​ನಲ್ಲಿದ್ದ ಕರೊನಾ ರೋಗಿಗಳು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

    ಇದನ್ನೂ ಓದಿ: ಹಣಕಾಸು ಸಂಸ್ಥೆಗಳ ಧೋರಣೆಗೆ ಚಾಲಕರ ಕಿಡಿ ; ಕಂತು ಪಾವತಿಸದ ಆಟೋ ವಶಕ್ಕೆ ಪಡೆಯುತ್ತಿರುವುದಕ್ಕೆ ಖಂಡನೆ

    ಆದರೆ, ಸಾಮಾಜಿಕ ಜಾಲತಾಣದಲ್ಲಿ ನರ್ಸ್​ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅನೇಕರು ಆಕೆಯ ಬೆಂಬಲಕ್ಕೂ ನಿಂತಿದ್ದರು. ನರ್ಸ್ ಹಾಸ್ಯಪ್ರಜ್ಞೆ ಮೆಚ್ಚುವಂಥದ್ದು ಎಂದು ಸ್ಥಳೀಯ ಪತ್ರಕರ್ತರೊಬ್ಬರು ಹೊಗಳಿದ್ದರು. ಮತ್ತೊಬ್ಬರು ಎಲ್ಲರೂ ಆಕೆಯ ವಿರುದ್ಧ ಧ್ವನಿ ಏರಿಸುತ್ತಿದ್ದಾರೆ. ಆದರೆ, ಅದರಿಂದಾಗುವ ಸೆಕೆ ಎಷ್ಟೆಂಬುದರ ಬಗ್ಗೆ ಗಮನ ಹರಿಸಿದ್ದೀರಾ? ಎಂದು ಪ್ರಶ್ನಿಸಿದ್ದರು. ಇನ್ನೊಬ್ಬರು ನರ್ಸ್​ಗೆ ಶಿಕ್ಷಿಸುವ ಬದಲು ಬಹುಮಾನ ನೀಡಿ. ಆಕೆಯ ದೈಹಿಕ ಸೌಂದರ್ಯ ನೋಡಿ ಯಾರೊಬ್ಬರು ಸಾಯಲು ಇಚ್ಛಿಸುವುದಿಲ್ಲ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾರೆ ಎಂದಿದ್ದರು. (ಏಜೆನ್ಸೀಸ್​)

    ಒಳ ಉಡುಪು ಕಾಣುವಂತೆ ಪಿಪಿಇ ಗೌನ್ ತೊಟ್ಟಿದ್ದ ನರ್ಸ್​ಗೆ ಬಂಪರ್​ ಆಫರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts