More

    ಭಾರತಕ್ಕೆ ಬಲ ಬಂತು; ಚೀನಾದ ಶಕ್ತಿ ಕುಂದಿತು; ಡ್ರ್ಯಾಗನ್​ಗೆ ಶಾಕ್​ ನೀಡಿದ್ಯಾರು?

    ಮಾಸ್ಕೋ: ಇತ್ತ ಭಾರತಕ್ಕೆ ಬಲಾಢ್ಯ ಯುದ್ಧ ವಿಮಾನ ರಫೇಲ್​ ಬಂದಿಳಿದರೆ, ಅತ್ತ ಚೀನಾಗೆ ಎಸ್​-400 ಕ್ಷಿಪಣಿಗಳನ್ನು ನೀಡಲ್ಲ ಎಂದು ರಷ್ಯಾ ಹೇಳಿದೆ. ಇದು ಚೀನಾ ಬೇಹುಗಾರಿಕೆಗೆ ತೆತ್ತ ಫಲವಾಗಿದೆ ಎಂದೇ ವಿಶ್ಲೇಷಿಸಲಾಗಿದೆ.

    ಜಾಗತಿಕವಾಗಿ ಬಲಾಢ್ಯರೆಲ್ಲ ಚೀನಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಷ್ಯಾದಲ್ಲಿ ಬೇಹುಗಾರಿಕೆ ನಡೆಸಿದ ಆರೋಪವೀಗ ಚೀನಾಗೆ ದುಬಾರಿಯಾಗಿ ಪರಿಣಮಿಸಿದೆ. ಇದೇ ಕಾರಣಕ್ಕಾಗಿಯೇ ನೆಲದಿಂದ ಆಗಸಕ್ಕೆ ಗುರಿಯಾಗಿಸುವ ಕ್ಷಿಪಣಿ ಹಸ್ತಾಂತರವನ್ನು ರಷ್ಯಾ ಅನಿರ್ದಿಷ್ಟ ಅವಧಿಗೆ ಮುಂದೂಡಿದೆ.

    ಇದನ್ನೂ ಓದಿ; 65 ಸಾವಿರ ರೂ.ಗೆ ಏರಲಿದೆ 10 ಗ್ರಾಂ ಚಿನ್ನದ ಬೆಲೆ; ಬಂಗಾರದಲ್ಲಿ ಹೂಡಿಕೆಗೆ ಸಕಾಲ….! 

    ಆದರೆ, ಚೀನಾ ಹೇಳುತ್ತಿರೋದೇ ಬೇರೆ. ಕ್ಷಿಪಣಿಗಳನ್ನು ಪೂರೈಸುವುದೆಂದರೆ ಗನ್​ ನೀಡಿ ರಸೀದಿಗೆ ಸಹಿ ಹಾಕಿಸಿಕೊಂಡಂತಲ್ಲ. ಇದಕ್ಕಾಗಿ ತರಬೇತಿ ಪಡೆಯಲೆಂದೇ ಚೀನಾ ತನ್ನ ಯೋಧರನ್ನು ರಷ್ಯಾಗೆ ಕಳುಹಿಸಬೇಕಿದೆ. ಜತೆಗೆ, ರಷ್ಯಾ ತಾಂತ್ರಿಕ ತಜ್ಞರು ಚೀನಾಗೆ ಬಂದು ಕ್ಷಿಪಣಿಯನ್ನು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇರಿಸಬೇಕಾಗುತ್ತದೆ. ಆದರೆ, ಸದ್ಯ ಕರೊನಾ ಸಂಕಷ್ಟದ ಸಮಯದಲ್ಲಿ ಚೀನಾ ಯೋಧರಿಗೆ ಈ ತೊಂದರೆ ನೀಡಬಾರದು ಎಂಬ ಕಾರಣಕ್ಕೆ ಹಸ್ತಾಂತರ ಕಾರ್ಯವನ್ನು ಮುಂದೂಡಿದೆ ಎಂದು ಹೇಳಿಕೊಂಡಿದೆ.

    2018ರಲ್ಲಿ ಚೀನಾ ಎಸ್​-400 ಕ್ಷಿಪಣಿಯ ಮೊದಲ ಕಂತನ್ನು ಸ್ವೀಕರಿಸಿದೆ. ಈ ಅತ್ಯಾಧುನಿಕ ಕ್ಷಿಪಣಿ ನೆಲದಿಂದ 30 ಕಿ.ಮೀ. ಎತ್ತರಕ್ಕೆ ಹಾರಿ 400 ಕಿ.ಮೀ. ದೂರದಲ್ಲಿರುವ ಗುರಿಯನ್ನು ಭೇದಿಸುವ ಸಾಮರ್ಥ್ಯ ಹೊಂದಿದೆ.

    ಇದನ್ನೂ ಓದಿ; ಅಮೆರಿಕದಲ್ಲಿದ್ದೇ ಬಲಾಢ್ಯ ರಾಷ್ಟ್ರಗಳ ಕಂಪ್ಯೂಟರ್​ ಜಾಲ ಹ್ಯಾಕ್​ ಮಾಡಿದ ಚೀನಿಯರು..! ಕರೊನಾ ಲಸಿಕೆ ಮಾಹಿತಿಯೇ ಗುರಿ 

    ಎರಡೂ ದೇಶಗಳ ನಡುವೆ ಕೆಲ ವರ್ಷಗಳಿಂದ ಉತ್ತಮ ಬಾಂಧವ್ಯವಿದೆ. ಆದರೆ, ಚೀನಾ ವಿರುದ್ಧ ಬೇಹುಗಾರಿಕೆ ಆರೋಪ ಹೊರಿಸಿದ ಬೆನ್ನಲ್ಲೇ ಕ್ಷಿಪಣಿ ಹಸ್ತಾಂತರ ಸ್ಥಗಿತಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಇದಕ್ಕೆ ಪೂರಕವಾಗಿ ಸೇಂಟ್​ ಪಿಟರ್ಸ್​ಬರ್ಗ್​ ಸೋಷಿಯಲ್ ಸೈನ್ಸ್​ ಅಕಾಡೆಮಿ ಅಧ್ಯಕ್ಷ ವೇಲೆರಿ ಮಿಟ್ಕೋ ಚೀನಾಗೆ ಹಲವು ಗೌಪ್ಯ ಮಾಹಿತಿಯನ್ನು ಮಾರಾಟ ಮಾಡಿದ ಆರೋಪವು ಸಾಬೀತಾಗಿದೆ ಎಂದು ರಷ್ಯಾ ಸುದ್ದಿ ಸಂಸ್ಥೆ ತಾಸ್​ ವರದಿ ಮಾಡಿದೆ.

    ಶಾಂಘೈಗೆ 100 ಕಿ.ಮೀ ಗಿಂತಲೂ ಹತ್ತಿರದಲ್ಲಿ ಅಮೆರಿಕ ಯುದ್ಧ ವಿಮಾನ ಹಾರಾಟ; ಅಚ್ಚರಿ ಮೂಡಿಸಿದ ದೊಡ್ಡಣ್ಣನ ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts