More

    ವಿದ್ಯಾರ್ಥಿಗಳ ಜತೆ ಕೃಷಿ ಅನುಭವ ಹಂಚಿಕೊಳ್ಳಿ

    ಮಳವಳ್ಳಿ: ರೈತರು ತಮ್ಮ ಕೃಷಿ ಕ್ಷೇತ್ರದ ಅನುಭವವನ್ನು ಮಕ್ಕಳ ಜತೆ ಹಂಚಿಕೊಳ್ಳುವ ಮೂಲಕ ವ್ಯವಸಾಯದ ಬಗ್ಗೆ ಅವರಲ್ಲಿ ಜ್ಞಾನಾರ್ಜನೆ ಉಂಟುಮಾಡಬೇಕು ಎಂದು ಕೃಷಿ ವಿಸ್ತರಣಾ ವಿಭಾಗದ ಮುಖ್ಯ ಪ್ರಾಧ್ಯಾಪಕ ಡಾ.ಡಿ. ರಂಗನಾಥ್ ಹೇಳಿದರು.

    ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಡ್ಯ ಕೃಷಿ ಮಹಾವಿದ್ಯಾಲಯದ ವಿಸಿ ಫಾರ್ಮ್‌ನ ಅಂತಿಮ ವರ್ಷದ ಬಿಎಸ್ಸಿ (ಕೃಷಿ) ವಿದ್ಯಾರ್ಥಿಗಳಿಗೆ ತಾಲೂಕಿನ ಅಂಚೆದೊಡ್ಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಅನುಸರಿಸುವ ಕೃಷಿ ಪದ್ಧತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸಲು ಈ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.

    ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಗ್ರಾಮಗಳಲ್ಲಿ ವಾಸ್ತವ್ಯವಿದ್ದು, ಕೃಷಿ ಚಟುವಟಿಕೆ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ಇದಕ್ಕೆ ರೈತರು ಸಹಕರಿಸಬೇಕು. ತಮ್ಮ ಕೃಷಿ ಅನುಭವವನ್ನು ವಿದ್ಯಾರ್ಥಿಗಳ ಜತೆ ಹಂಚಿಕೊಳ್ಳುವ ಮೂಲಕ ಅವರ ಶಿಕ್ಷಣಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.

    ಸಹಾಯಕ ಪ್ರಾಧ್ಯಾಪಕ ಡಾ.ಕೆ.ಆರ್. ಅಶೋಕ, ಕೃಷಿ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅನಿಲ್ ದಾಂಡೇಕರ, ಸಸ್ಯರೋಗದ ಸಹ ಪ್ರಾಧ್ಯಾಪಕಿ ಡಾ.ಹರ್ಷಿತಾ, ಡಾ.ಪ್ರವೀಣ್, ಗ್ರಾಮದ ಮುಖಂಡರು, ರೈತರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts