More

    ರೂಪಾ ಮೌದ್ಗಿಲ್ ಕರೆ ಮಾಡಿ 25 ನಿಮಿಷ ಮಾತಾಡಿದ್ರು: ಆರ್​​ಟಿಐ ಕಾರ್ಯಕರ್ತ ಗಂಗರಾಜು ಸ್ಫೋಟಕ ಹೇಳಿಕೆ

    ಬೆಂಗಳೂರು: ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್ ಅವರು ನನಗೆ ಕರೆ ಮಾಡಿ ಸುಮಾರು 25 ನಿಮಿಷ ನನ್ನ ಜೊತೆಗೆ ಮಾತನಾಡಿ, ಸಾಕಷ್ಟು ಪ್ರಕರಣಗಳ ಬಗ್ಗೆ ಚರ್ಚೆ ಮಾಡಿದರು ಎಂದು ಆರ್​​ಟಿಐ ಕಾರ್ಯಕರ್ತ ಗಂಗರಾಜು ಅವರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

    ದಿಗ್ವಿಜಯ ನ್ಯೂಸ್ ಜೊತೆಗೆ ಮಾತನಾಡಿದ ಅವರು, ರೂಪ ಅವರು ನನಗೆ ಸಾಕಷ್ಟು ಫೋಟೋಗಳನ್ನ ಕಳುಹಿಸಿದ್ದಾರೆ. ಈ ವೇಳೆ ಲ್ಯಾಂಡ್ ವಿಚಾರಗಳ ಬಗ್ಗೆ ನನ್ನ ಜೊತೆ ಚೆರ್ಚೆಮಾಡಿದ್ದಾರೆ. ನನ್ನ ಗಂಡನನ್ನ ಅಲ್ಲಿಂದ ವರ್ಗಾವಣೆ ಮಾಡಿಸುತ್ತೇನೆ ಅಂಥ ನನ್ನ ಬಳಿ ಹೇಳಿದ್ದಾರೆ. ಐಎಎಸ್ ಅಧಿಕಾರಿಯನ್ನ ವರ್ಗಾವಣೆ ಮಾಡಿಸುತ್ತಾರೆಂದರೆ ರೂಪಾ ಅವರು ಎಷ್ಟು ಪ್ರಭಾವಿ ಇರಬಹುದು ಎಂದಿದ್ದಾರೆ.

    ರೂಪಾ ಅವರು ನನಗೆ ಮತ್ತೆ ಕರೆ ಮಾಡಿದ್ದರು. ಎಚ್.ಡಿ ಕೋಟೆಯಲ್ಲಿನ ಪ್ರಾಪರ್ಟಿ ವಿಚಾರವಾಗಿ ಮಾತನಾಡಿದರು. ನಾನು ಸರ್ವೆ ನಂಬರ್ ತಿಳಿಸುವಂತೆ ಹೇಳಿದೆ. ಅವರು ಯಾವುದೇ ಮಾಹಿತಿ ಕೊಡುವುದಿಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ನನಗೆ ಧಮ್ಕಿ ಹಾಕಿದ್ದಾರೆಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಇಂದು BJP ಸೇರಲಿದ್ದಾರೆ ಹಿರಿಯ ನಟ ಅನಂತ್ ನಾಗ್

    ರೂಪಾ ಅವರ ವಿರುದ್ಧ ನಾನು ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇನೆ. ಹಲವು ಬಾರಿ ಮನವಿ ಮಾಡಿದರು ಪೊಲೀಸರು ಪ್ರೊಟೆಕ್ಷನ್ ಕೊಡಲಿಲ್ಲ. ಸಾ.ರಾ ಮಹೇಶ್ ಅವರ ವಿರುದ್ದ ಮಾಡಿದ್ದ ಆರೋಪಕ್ಕೆ ಯಾವುದೇ ದಾಖಲೆ ಸರ್ಕಾರ ಕೊಟ್ಟಿಲ್ಲ. ಸಾ.ರಾ ಮಹೇಶ್, ರೋಹಿಣಿ ಸಿಂಧೂರಿ ಸಂಧಾನದ ಫೋಟೋ ವೈರಲ್ ಮಾಡಿದವರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.

    ಮೌನೀಶ್ ಮುದ್ಗಿಲ್ ಸರ್ಕಾರಿ ಅಧಿಕಾರಿ. ರೂಪಾ ಅವರು ಗಂಡನ ಮೊಬೈಲ್​ನಲ್ಲಿ ಗೌಪ್ಯ ಮಾಹಿತಿ ತೆಗೆಯಲು ಸಾಧ್ಯವಿಲ್ಲ. ಚಾಟ್ಸ್ ಗಳು ಕೊಟ್ಟವರು ಯಾರು ಅಂಥಾ ರೂಪ ಹೇಳಬೇಕು ಎಂದಿದ್ದಾರೆ.

    ಆಯಿಲ್ ಲೀಕ್, ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts