More

    ಕೃಷಿ ಭೂಮಿ ಕಬಳಿಕೆದಾರರ ವಿರುದ್ಧ ಹೋರಾಟ, ಆರ್​ಟಿಐ ಕಾರ್ಯಕರ್ತನ ಪ್ರಾಣಕ್ಕೆ ಸಂಚಕಾರ

    ನವದೆಹಲಿ: ತಮ್ಮ ಗ್ರಾಮದಲ್ಲಿನ ಕೃಷಿ ಭೂಮಿಯನ್ನು ಕಬಳಿಸುವವರ ವಿರುದ್ಧ ಕಾನೂನು ಹೋರಾಟ ಸಾರಿದ್ದ ಮಾಹಿತಿಹಕ್ಕು ಕಾಯ್ದೆ ಕಾರ್ಯಕರ್ತ (ಆರ್​ಟಿಐ) ದುಷ್ಕರ್ಮಿಗಳ ದಾಳಿಯಲ್ಲಿ ಮೃತಪಟ್ಟಿದ್ದಾನೆ.

    ದೆಹಲಿಯ ಆಲಿಪುರದ ಹಮೀದ್​ಪುರ್​ ಗ್ರಾಮದ ನಿವಾಸಿ ರಮೇಶ್​ ಮಾನ್ ಹತನಾದ ಆರ್​ಟಿಐ ಕಾರ್ಯಕರ್ತ. ಈತನನ್ನು ಹತ್ಯೆ ಮಾಡಿದ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಕೃಷಿ ಭೂಮಿಯನ್ನು ಕಬಳಿಸುವ ವಿಷಯವಾಗಿ ಮಾನ್​ ಮತ್ತು ಹಮೀದ್​ಪುರ ಗ್ರಾಮದ ಮತ್ತೊಬ್ಬ ಭೂಒಡೆಯನ ನಡುವೆ ವಿವಾದ ಏರ್ಪಟ್ಟಿತ್ತು. ಅಲ್ಲದೆ, ಮಾನ್​ ಹಾಗೂ ಆ ವ್ಯಕ್ತಿ ಇಬ್ಬರೂ ಅಪರಾಧ ಹಿನ್ನೆಲೆಯುಳ್ಳವರು. ಹಣಸುಲಿಗೆ, ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳು ಇಬ್ಬರ ವಿರುದ್ಧವೂ ದಾಖಲಾಗಿದ್ದವು ಎನ್ನಲಾಗಿದೆ. ಆದರೆ, ಮಾನ್​ ಕೆಲವರ್ಷಗಳಿಂದ ಆರ್​ಟಿಐ ಕಾರ್ಯಕರ್ತನಾಗಿ ಬದಲಾಗಿದ್ದು, ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ಪೊಲೀಸರ ಹತ್ಯೆಗೈದ ನನ್ನ ಮಗನನ್ನು ಹೊಡೆದುರುಳಿಸಿ- ಗ್ಯಾಂಗ್​ಸ್ಟರ್ ದುಬೆಯ ಅಮ್ಮ

    ಭೂಕಬಳಿಕೆಯ ವಿರುದ್ಧ ಮಾನ್​ ದಾಖಲಿಸಿದ್ದ ಪ್ರಕರಣದ ಬಗ್ಗೆ ದೆಹಲಿ ಹೈಕೋರ್ಟ್​ ವಿಚಾರಣೆ ನಡೆಸುತ್ತಿತ್ತು. ಬಹುಶಃ ಈ ವಿಚಾರವಾಗಿ ಸಿಟ್ಟಿಗೆದ್ದ ಹಮೀದ್​ಪುರದ ಮತ್ತೊಬ್ಬ ಭೂಒಡೆಯ ತನ್ನ ಸಹಚರರ ಜತೆಗೂಡಿ ದಾಳಿ ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ತನ್ಮ ಮನೆಯ ಹೊರಗಿನ ಕಟ್ಟೆಯ ಮೇಲೆ ಮಾನ್​ ಕುಳಿತಿದ್ದಾಗ ಎಸ್​ಯುವಿಯಲ್ಲಿ ಬಂದ ಒಂದಷ್ಟು ಜನರು ಈತನ ವಿರುದ್ಧ ಅವಾಚ್ಯವಾಗಿ ನಿಂದಿಸಲಾರಂಭಿಸಿದರು. ಮೊದಮೊದಲು ನಿರ್ಲಕ್ಷಿಸಿದ ಮಾನ್​ ಬಳಿಕ ಅವರ ಬಳಿ ಹೋಗಿ ಹಾಗೆ ಮಾಡದಂತೆ ಸೂಚಿಸಿದ. ಆಗ ಮಾತಿಗೆ ಮಾತು ಬೆಳೆದು, ಕೈಕೈ ಮಿಲಾಯಿಸುವ ಹಂತಕ್ಕ ಹೋಯಿತು.

    ಎಸ್​ಯುವಿಯಲ್ಲಿ ಬಂದಿದ್ದವರು ದೊಣ್ಣೆ ಮತ್ತು ಕಬ್ಬಿಣ ರಾಡ್​ನಿಂದ ಮಾನ್​ ಮೇಲೆ ಮನಸೋಇಚ್ಛೆ ದಾಳಿ ಮಾಡಿದರು. ನೆರೆಹೊರೆಯವರು ಎಸ್​ಯುವಿಯಲ್ಲಿ ಇದ್ದವರನ್ನು ಓಡಿಸಿದರಾದರೂ ಅಷ್ಟರಲ್ಲಿ ಮಾನ್ನ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.

    3 ತಿಂಗಳಲ್ಲಿ 700 ಮಹಿಳಾ ದೌರ್ಜನ್ಯ ಕೇಸ್: ಶೇ.60 ಕೌಟುಂಬಿಕ ಕಲಹ ವಿಚಾರಣೆಗೆ ಕಾಡುತ್ತಿದೆ ಕರೊನಾ ಗ್ರಹಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts