More

    ಪೊಲೀಸರ ಹತ್ಯೆಗೈದ ನನ್ನ ಮಗನನ್ನು ಹೊಡೆದುರುಳಿಸಿ- ಗ್ಯಾಂಗ್​ಸ್ಟರ್ ದುಬೆಯ ಅಮ್ಮ

    ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಗುರುವಾರ ನಸುಕಿನ ವೇಳೆ 8 ಪೊಲೀಸರನ್ನು ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿ ಕುಖ್ಯಾತ ಗ್ಯಾಂಗ್​ಸ್ಟರ್ ವಿಕಾಸ್​ ದುಬೆ ಶರಣಾಗಿಲ್ಲ ಎಂದಾದರೆ ಕೊಂದು ಬಿಡಿ!- ಹೀಗೆಂದು ವೇದನೆಯಿಂದ ನುಡಿದಿದ್ದಾರೆ ದುಬೆಯ ತಾಯಿ ಸರಳಾದೇವಿ.

    ಪೊಲೀಸರನ್ನು ಕೊಂದು ಭಾರಿ ದೊಡ್ಡ ತಪ್ಪು ಮಾಡಿದ್ದಾನೆ ದುಬೆ. ಆತ ಪೊಲೀಸರಿಗೆ ಶರಣಾಗಬೇಕು. ಒಂದೊಮ್ಮೆ ಆತ ಶರಣಾಗದೇ ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ ಪೊಲೀಸರು ಆತನ್ನನ್ನು ಎನ್​ಕೌಂಟರ್​ನಲ್ಲಿ ಕೊಂದುಬಿಡಲಿ. ಅಷ್ಟೇ ಒಂದೊಮ್ಮೆ ಪೊಲೀಸರಾದ ನಿಮಗೆ ಆತನನ್ನು ಬಂಧಿಸುವುದಕ್ಕೆ ಸಾಧ್ಯವಾಗಿಲ್ಲ ಅಥವಾ ಸಾಧ್ಯವಾಗುತ್ತಿಲ್ಲ ಎಂದಾದರೆ ಆತನನ್ನು ಕೊಂದು ಬಿಡಿ. ಆತ ಬಹಳ ದೊಡ್ಡ ತಪ್ಪು ಮಾಡುತ್ತಿದ್ದಾನೆ. ಬಿಡಬೇಡಿ ಅವನನ್ನು ಎಂದು ಸರಳಾದೇವಿ ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ.

    ಇದನ್ನೂ ಓದಿ: ಪ್ರೇಯಸಿ ಜತೆಗಿದ್ದ ಖಾಸಗಿ ವಿಡಿಯೋ ಪತಿಗೆ ರವಾನೆ

    ದುಬೆ ತಲೆಗೆ 50,000 ರೂಪಾಯಿ
    ಇದೇ ವೇಳೆ, ಪೊಲೀಸರ ಹತ್ಯೆ ಪ್ರಕರಣದ ನಂತರವೂ ತಲೆಮರೆಸಿಕೊಂಡಿರುವ ವಿಕಾಸ್ ದುಬೆ ತಲೆಗೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ 50,000 ರೂಪಾಯಿ ಇನಾಮು ಘೋಷಿಸಿದೆ. ಆತನ ಇರುವಿಕೆ ಕುರಿತು ಮಾಹಿತಿ ನೀಡಿ ಬಂಧಿಸಲು ನೆರವಾದವರಿಗೆ ಈ ಹಣವನ್ನು ಪೊಲೀಸ್ ಇಲಾಖೆ ನೀಡಲಿದೆ.

    ಪೊಲೀಸರನ್ನು ಹತ್ಯೆಗೈಯುವ ಮೂಲಕ ಆತ ದೊಡ್ಡ ತಪ್ಪೆಸಗಿದ್ದಾನೆ. ಎನ್​ಕೌಂಟರ್ ಕುರಿತ ಸುದ್ದಿಯನ್ನು ನಾನು ಟಿವಿಯಲ್ಲಿ ನೋಡಿದೆ. ಆತ ತಲೆಮರೆಸಿಕೊಳ್ಳುವ ಬದಲು ಹೊರಗೆ ಬಂದು ಪೊಲೀಸರೆದರು ಶರಣಾಗಬೇಕು ಎಂದು ನಾನು ಬಯಸುತ್ತೇನೆ. ಆತ ಹಾಗೆ ಮಾಡದೇ ಹೋದರೆ, ಪೊಲೀಸರು ಹೇಗಾದರೂ ಆತನನ್ನು ಪತ್ತೆ ಹಚ್ಚುತ್ತಾರೆ. ನಾನು ಹೇಳುವುದಿಷ್ಟೇ- ಮೊದಲು ಆತನನ್ನು ಹಿಡಿಯಿರಿ, ನಂತರ ಎನ್​ಕೌಂಟರ್​ನಲ್ಲಿ ಕೊಂದುಬಿಡಿ. ಅವನಿಗೆ ಶಿಕ್ಷೆ ಆಗಲೇ ಬೇಕು ಎಂದು ಸರಳಾದೇವಿ ಒತ್ತಿ ಹೇಳಿದ್ದಾರೆ.

    ರಾಜಕಾರಣಿಗಳ ಜತೆಗೆ ಸೇರಿ ಆತ ಹಾಳಾದ. ಅಪರಾಧ ಪ್ರಪಂಚಕ್ಕೆ ಕಾಲಿಡುವುದಕ್ಕೆ ರಾಜಕಾರಣವೇ ಕಾರಣವಾಯಿತು. ಸಮಾಜದಲ್ಲಿ ನಾವು ಗೌರವದಿಂದ ಬದುಕದಂತೆ ಮಾಡಿಬಿಟ್ಟ. ಎಂಎಲ್​ಎ ಚುನಾವಣೆ ಗೆಲ್ಲಬೇಕು ಎಂದು ಬಯಸಿದ್ದ ವಿಕಾಸ್ ದುಬೆ. ಅದಕ್ಕಾಗಿಯೇ ಸಂತೋಷ್ ಶುಕ್ಲಾನನ್ನು ಹತ್ಯೆ ಮಾಡಿದ. ಕಳೆದ ನಾಲ್ಕು ತಿಂಗಳಿಂದ ನಾನು ವಿಕಾಸ್​ನನ್ನು ಭೇಟಿ ಮಾಡಿಲ್ಲ. ನನ್ನ ಸಣ್ಣ ಮಗನ ಜತೆಗೆ ವಾಸವಾಗಿದ್ದೇನೆ. ಆತನಿಂದಾಗಿ ನಾವೆಲ್ಲ ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಸರಳಾದೇವಿ ಕಣ್ಣೀರಾದರು. (ಏಜೆನ್ಸೀಸ್)

    8 ಪೊಲೀಸರ ಹತ್ಯೆಗೈದ ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಯಾರು?

    ಗಣ್ಯರ ಹತ್ಯೆಗೂ ಸ್ಕೆಚ್ ಹಾಕಿದ್ದ ದುಬೆ!

    ಕಾನ್ಪುರದಲ್ಲಿ ಡಿವೈಎಸ್​ಪಿ ಸೇರಿ 8 ಪೊಲೀಸರು ಹುತಾತ್ಮ

    ಕರೊನಾ ಕುರಿತು ಚೀನಾ ಮಾಹಿತಿ ನೀಡಿಲ್ಲ – ಬದಲಾಯಿತು ಡಬ್ಲ್ಯುಎಚ್​ಒ ವರಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts