More

    ಗಣ್ಯರ ಹತ್ಯೆಗೂ ಸ್ಕೆಚ್ ಹಾಕಿದ್ದ ದುಬೆ!

    ನವದೆಹಲಿ: ಗ್ಯಾಂಗ್​ಸ್ಟರ್ ವಿಕಾಸ್​ ದುಬೆ ಜೈಲಿನಲ್ಲಿದ್ದುಕೊಂಡೇ ಎಲ್ಲ ರೀತಿಯ ಅಪರಾಧ ಕೃತ್ಯಗಳಿಗೂ ಸ್ಕೆಚ್ ಹಾಕುತ್ತಿದ್ದ. ರಾಜಕೀಯವಾಗಿಯೂ ದುಬೆ ಬಹಳ ಪ್ರಭಾವಿ. ಹೀಗಾಗಿ ಅನೇಕ ರಾಜಕೀಯ ಕೊಲೆ ಪ್ರಕರಣಗಳಲ್ಲಿ ಈತ ನೇರವಾಗಿ ಭಾಗಿಯಾಗಿದ್ದ. ಸಮಾಜದ ಅನೇಕ ಗಣ್ಯರ ಹತ್ಯೆಗೆ ಸ್ಕೆಚ್​ ಕೂಡ ಹಾಕಿದ್ದ ಎಂಬುದು ಅನೇಕ ಸಂದರ್ಭಗಳಲ್ಲಿ ಬಹಿರಂಗವಾಗಿದೆ.

    ಉತ್ತರ ಪ್ರದೇಶದಲ್ಲಿ ಮಾಯಾವತಿ ಸರ್ಕಾರ ಇದ್ದಾಗ 2002ರಲ್ಲಿ ವಿಕಾಸ್ ದುಬೆ ಕಾನ್ಪುರದ ಬಿಲ್​ಹಾರ್ಮ್ ಶಿವರಾಜ್​ಪುರ, ಚೌಬೇಪುರ, ರಾಣಿಯಾ ಪ್ರದೇಶಗಳಲ್ಲಿ ಬಹಳ ಮುಕ್ತವಾಗಿ ಓಡಾಡಿಕೊಂಡಿದ್ದ. ಈ ಅವಧಿಯಲ್ಲಿ ಈತ ಅಕ್ರಮವಾಗಿ ಸಾಕಷ್ಟು ಆಸ್ತಿ ಸಂಪಾದಿಸಿದ್ದ ಆರೋಪವಿದೆ.

    ಇದನ್ನೂ ಓದಿ: 8 ಪೊಲೀಸರ ಹತ್ಯೆಗೈದ ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಯಾರು?

    ಶಿವರಾಜ್​ಪುರದಿಂದ ನಗರ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದ. ಆ ಸಂದರ್ಭದಲ್ಲಿ ದುಬೆ ಜೈಲಿನಲ್ಲೇ ಇದ್ದ. ಬಿಎಸ್​ಪಿಯ ಹಿರಿಯ ನಾಯಕರೊಬ್ಬರಿಗೂ ಬಹಳ ಆಪ್ತನಾಗಿ ಕಾಣಿಸಿಕೊಂಡಿದ್ದ. ಇದೂ ಅಲ್ಲದೆ, 1990ರ ದಶಕದಲ್ಲಿ ಜನತಾ ದಳದಲ್ಲಿದ್ದ ಅಂದಿನ ಶಾಸಕ ಹರಿಕಿಶನ್ ಶ್ರೀವಾಸ್ತವ ಅವರ ಆಪ್ತನಾಗಿದ್ದ. ಶ್ರೀವಾಸ್ತವ ನಂತರದಲ್ಲಿ ಬಿಎಸ್​ಪಿ ಸೇರಿದ್ದರು. ಈ ಅವಧಿಯಲ್ಲಿ ಶ್ರೀವಾಸ್ತವ ಅವರ ಪ್ರತಿಸ್ಪರ್ಧಿ ಸಂತೋಷ್ ಶುಕ್ಲಾರನ್ನು ದುಬೆ ಪೊಲೀಸ್ ಠಾಣೆಯಲ್ಲೇ ಹತ್ಯೆಗೈದಿದ್ದ.

    ಸೋದರ ಸಂಬಂಧಿ ಅನುರಾಗ್ ಹತ್ಯೆಗೆ ಮಾಟಿ ಜೈಲಿನಲ್ಲಿದ್ದುಕೊಂಡೇ 2018ರಲ್ಲಿ ಸ್ಕೆಚ್ ರೂಪಿಸಿದ್ದ. ಇದನ್ನು ಅನುರಾಗ್​ ಪತ್ನಿ ಆರೋಪಿಸಿದ್ದು, ದೂರಿನಲ್ಲಿ ವಿಕಾಸ್​ ದುಬೆ ಮತ್ತು ನಾಲ್ವರ ಹೆಸರನ್ನು ಅವರು ಪ್ರಸ್ತಾಪಿಸಿದ್ದರು. 2000ನೇ ಇಸವಿಯಲ್ಲಿ ರಾಮಬಾಬು ಯಾದವ್ ಎಂಬಾತನ ಹತ್ಯೆಗೂ ಸ್ಕೆಚ್ ಹಾಕಿ ಯಶಸ್ವಿಯಾಗಿದ್ದ. 2004ರಲ್ಲಿ ಕೇಬಲ್ ಟಿವಿ ಮಾಲೀಕ ದಿನೇಶ್ ದುಬೆ ಎಂಬಾತನನ್ನೂ ಹತ್ಯೆ ಮಾಡಿದ್ದ. (ಏಜೆನ್ಸೀಸ್)

    ಕಾನ್ಪುರದಲ್ಲಿ ಡಿವೈಎಸ್​ಪಿ ಸೇರಿ 8 ಪೊಲೀಸರು ಹುತಾತ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts