More

    ವಿಕಾಸ್​ ದುಬೆಗೂ 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೂ ಇದೆ ಸಂಬಂಧ

    ನವದೆಹಲಿ: ಎರಡು ದಿನಗಳ ಹಿಂದೆ ಎನ್​ಕೌಂಟರ್​ನಲ್ಲಿ ಹತನಾದ ಕುಖ್ಯಾತ ಪಾತಕಿ ವಿಕಾಸ್​ ದುಬೆ ಮತ್ತು 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೂ ನಂಟು ಇದೆ. ಆದರೆ ಇದು ನೇರವಾದ ನಂಟಲ್ಲದಿದ್ದರೂ, ಬಾದರಾಯಣ ಸಂಬಂಧದಂಥ ನಂಟಾಗಿದೆ.

    ಅದು 1992ರ ಡಿಸೆಂಬರ್ 1. ಅಯೋಧ್ಯೆಯ ವಿವಾದಾತ್ಮಕ ಸ್ಥಳದಲ್ಲಿದ್ದ ಬಾಬರಿ ಮಸೀದಿ ಬಿದ್ದು ಹೋಗಲು ಸಾಕಷ್ಟು ದಿನಗಳ ಬಾಕಿ ಇದ್ದವು. ಆಗ ಮುಸ್ಲಿಂ ಬಾಹುಳ್ಯದ ಕಾನ್ಪುರದ ಭಿಕ್ರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಅಂದರೆ, ಮುಸ್ಲಿಮ್​ ಸಮುದಾಯದವರೊಬ್ಬರು ಸಾಕುತ್ತಿದ್ದ ಎರಡು ಕುರಿಗಳು ಮತ್ತೊಂದು ಕೋಮಿನನವರ ಜಮೀನಿಗೆ ಹೋಗಿ ಬೆಳೆಯನ್ನು ತಿಂದು ಅವಾಂತರ ಸೃಷ್ಟಿಸಿದ್ದವು. ಇದನ್ನು ಕಂಡ ಜಮೀನಿನ ಮಾಲೀಕ ಕುರಿಗಳನ್ನು ಹಿಡಿದು ಕಟ್ಟಿ ಹಾಕಿ, ಚೆನ್ನಾಗಿ ಹೊಡೆದು, ಬಿಟ್ಟು ಕಳುಹಿಸಿದ್ದರು.

    ಇದನ್ನೂ ಓದಿ: ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ: ವ್ಯರ್ಥವಾದ ಸಾರ್ವಜನಿಕರ ಪ್ರಯತ್ನ

    ವಿಷಯ ತಿಳಿದ ಕುರಿಗಳ ಮಾಲೀಕ ಶಿವ್ಲಿ ಪೊಲೀಸ್​ ಠಾಣೆಯಲ್ಲಿ ಜಮೀನಿನ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದರು. ಪಾತಕ ಲೋಕದಲ್ಲಿ ಅಂಬೆಗಾಲಿಡುತ್ತಿದ್ದ ಸ್ಥಳೀಯ ಗೂಂಡಾ ವಿಕಾಸ್​ ದುಬೆವರೆಗೆ ಈ ವಿಷಯ ಹೋಯಿತು. ತಕ್ಷಣವೇ ಆತ ತನ್ನ ಸಹಚರರ ಜತೆಗೂಡಿ ದೂರು ದಾಖಲಿಸಿದ್ದ ಮುಸ್ಲಿಮ್​ ಸಮುದಾಯದವರನ್ನು ಚೆನ್ನಾಗಿ ಥಳಿಸಿದ್ದ. ಆತನ ಮೇಲೆ ವಿಕಾಸ್​ ದುಬೆ ಮತ್ತು ಆತನ ಸಹಚರರು ಹೇಗೆ ಮುರುಕೊಂಡು ಬಿದ್ದಿದ್ದರು ಅಂದರೆ, ಗ್ರಾಮದಲ್ಲಿದ್ದ 70 ಮುಸ್ಲಿಂ ಕುಟುಂಬಗಳು ಏಕಾಏಕಿ ತಮ್ಮ ಮನೆ, ಆಸ್ತಿಗಳೆಲ್ಲವನ್ನೂ ಬಿಟ್ಟು ಗ್ರಾಮವನ್ನು ತೊರೆದಿದ್ದರು!

    ಅಂದು ದುಬೆ ಕೈಯಲ್ಲಿ ಪೆಟ್ಟು ತಿಂದಿದ್ದ ಹಾಗೂ ಈಗ 72 ವರ್ಷ ವಯಸ್ಸಾಗಿರುವ ವೃದ್ಧರೊಬ್ಬರು ಅಂದಿನ ಘಟನೆಯನ್ನು ನೆನಪು ಮಾಡಿಕೊಂಡು, ದುಬೆ ಆಗಿನ್ನೂ 25ರ ಯುವಕ. ಆತನ ಹೆದರಿಕೆಯಿಂದ ನಾವು ಊರನ್ನೇ ಬಿಟ್ಟಿದ್ದೆವು. ಆದರೆ, ಮನೆ ಹಾಗೂ ಜಮೀನು ಇದ್ದುದರಿಂದ ಮರಳಿದ್ದೆವು. ಅದನ್ನು ಮಾರಲು ಹೋದರೆ, ವಿಕಾಸ್​ ದುಬೆಯ ಭಯಕ್ಕೆ ಗ್ರಾಮಸ್ಥರು ಜಮೀನು ಮತ್ತು ಮನೆಯನ್ನು ಖರೀದಿಸಲು ಹಿಂದೇಟು ಹಾಕಿದ್ದರು ಎಂದು ವಿವರಿಸಿದ್ದಾರೆ.
    ಈಗಲೂ ಕೂಡ ಅವರ ಮನೆಯ ಸುತ್ತ ಇರುವ ಬಲವಾದ ಕಬ್ಬಿಣದ ದ್ವಾರಗಳನ್ನು ತೋರಿಸುತ್ತಾ, ಆತನ ಭಯದಿಂದಾಗಿಯೇ ನಾವು ಇಷ್ಟೆಲ್ಲ ಬಂದೋಬಸ್ತ್​ ಮಾಡಿಕೊಂಡು ಗ್ರಾಮದಲ್ಲಿ ವಾಸಿಸುತ್ತಿದ್ದೆವು ಎಂದು ಹೇಳಿದ್ದಾರೆ.

    ಊರಿಗೆ ವಾಪಸಾದ ಅಮ್ಮ-ಮಗ ಸ್ಮಶಾನದಲ್ಲಿ ಮಲಗಿದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts