More

    ಮುಸ್ಲಿಂ ಮೀಸಲಾತಿ ರದ್ದತಿ ಖಂಡನಾರ್ಹ

    ಸಿಂಧನೂರ: ಅಂಬೇಡ್ಕರ್ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದ್ದು, ಅವರು ನೀಡಿದ ಶ್ರೇಷ್ಟ ಸಂವಿಧಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಟಿಯುಸಿಐ ರಾಜ್ಯ ಅಧ್ಯಕ್ಷ ಮಾನ್ಸಯ್ಯ ಹೇಳಿದರು.

    ನಗರದ ತಾಪಂ ಆವರಣದಲ್ಲಿ ದಲಿತ, ಅಲ್ಪಸಂಖ್ಯಾತರ ಶೋಷಿತ ಸಮುದಾಯಗಳ ಒಕ್ಕೂಟದಿಂದ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 132 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಒಳಮಿಸಲಾತಿ ಚುನಾವಣೆಯ ತಂತ್ರ

    ಒಳಮಿಸಲಾತಿ ಚುನಾವಣೆಯ ತಂತ್ರವಾಗಿದ್ದು, ಜಾರಿಗೆ ಆಗುವುದು ಅಷ್ಟು ಸುಲಭದ ಮಾತಲ್ಲ. ಲೋಕಸಭೆ ಹಾಗೂ ಸಂವಿಧಾನದ ಪೀಠದಿಂದ ಅನುಮೋದನೆ ಆಗಬೇಕು. ಕೇವಲ ಶೇ.3 ಇರುವ ವರ್ಗಕ್ಕೆ ಶೇ.10 ಮೀಸಲಾತಿ ಜಾರಿಗೆ ಮಾಡಿರುವುದು ನ್ಯಾಯ ಸಮ್ಮತವಲ್ಲ. ಅಲ್ಲದೆ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ರದ್ದುಪಡಿಸಿರುವುದು ಖಂಡನಾರ್ಹ ಸಂಗತಿ. ಅಂಬೇಡ್ಕರ್ ಆಶಯಗಳಿಗೆ ಧಕ್ಕೆ ತರುವ ಕೆಲಸವಾಗಬಾರದು ಎಂದರು.

    ಸಾಹಿತಿ ಪಿರ್‌ಬಾಷಾ, ಉಪನ್ಯಾಸಕ ಶಂಕರ್ ವಾಲೇಕಾರ್, ಮಹಿಳಾ ಸಂಘಟನೆ ತಾಲೂಕು ಅಧ್ಯಕ್ಷೆ ವಿರುಪಮ್ಮ ಮಾತನಾಡಿದರು. ಒಕ್ಕೂಟದ ಸಂಚಾಲಕ ಎಂ. ಗಂಗಾಧರ, ಡಿ.ಹೆಚ್.ಕಂಬಳಿ, ಮಾಬುಸಾಬ್ ಬೆಳ್ಳಟ್ಟಿ,ನಾರಾಯಣ ಬೆಳಗುರ್ಕಿ,ರಾಮಣ್ಣ ಗೋನವಾರ, ಕೆ.ಮರಿಯಪ್ಪ ಸುಕಾಲಪೇಟೆ,ಆರ್.ಹುಚ್ಚರೆಡ್ಡಿ, ಆದೇಶ ನಗನೂರು ,ನಿರುಪಾದಿ ಸಾಸಲಮರಿ ಇತರರಿದ್ದರು.

    ಇದನ್ನೂ ಓದಿ: ಜಗಳೂರಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಒತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts