More

    8 ಪೊಲೀಸರ ಹತ್ಯೆಗೈದ ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಯಾರು?

    ನವದೆಹಲಿ: ದೇಶದ ಗಮನಸೆಳೆದ ಉತ್ತರ ಪ್ರದೇಶದ ಕಾನ್ಪುರ ಸಮೀಪ ನಡೆದ ಎನ್​ಕೌಂಟರ್​ನಲ್ಲಿ ಎಂಟು ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ಯಾಂಗ್​​ಸ್ಟರ್ ವಿಕಾಸ್ ದುಬೆ ಯಾರು? ಆತನ ಹಿನ್ನೆಲೆ ಏನು? ಎಂಬಿತ್ಯಾದಿ ಸಹಜ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    ಉತ್ತರ ಪ್ರದೇಶದಲ್ಲಿ ಹಲವು ಹೈ ಪ್ರೊಫೈಲ್ ಹತ್ಯೆ ಪ್ರಕರಣಗಳಲ್ಲಿ ಬೇಕಾದ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಗ್ಯಾಂಗ್​​ಸ್ಟರ್ ವಿಕಾಸ್ ದುಬೆ. 2001ರಲ್ಲಿ ಬಿಜೆಪಿ ನಾಯಕ ಸಂತೋಷ್ ಶುಕ್ಲಾ ಹತ್ಯೆ ಪ್ರಕರಣದಲ್ಲಿ ಈತನ ಹೆಸರು ಮುಂಚೂಣಿಗೆ ಬಂತು. ಈ ಸಂಬಂಧ ಶಿವ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹತ್ಯೆ ನಡೆದ ಸಂದರ್ಭದಲ್ಲಿ ಶುಕ್ಲಾ ಬಿಜೆಪಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದರು.

    ಇದನ್ನೂ ಓದಿ: ಪಶ್ಚಿಮ ವಿಭಾಗದಲ್ಲಿ ಹತ್ತು ಠಾಣೆಗಳು ಸೀಲ್​ಡೌನ್

    ಆದಾಗ್ಯೂ, ಈ ಕೊಲೆ ಪ್ರಕರಣದಲ್ಲಿ ಗ್ಯಾಂಗ್​​ಸ್ಟರ್ ದುಬೆಯ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ನಿರ್ದೋಷಿ ಎಂದು ಸೆಷೆನ್ಸ್ ಕೋರ್ಟ್​ ಘೋಷಿಸಿತ್ತು. ಈತ ಬಿಕ್ರು ಗ್ರಾಮದ ನಿವಾಸಿ. ಹಲವಾರು ರಾಬರಿ, ಕಿಡ್ನಾಪ್​ ಮತ್ತು ಹತ್ಯೆ ಪ್ರಕರಣಗಳ ಆರೋಪಿ. ದುಬೆ 2000ನೇ ಇಸವಿಯಲ್ಲಿ ಸಿದ್ಧೇಶ್ವರ ಪಾಂಡೆ ಎಂಬ ತಾರಾಚಾಂದ್ ಇಂಟರ್ ಕಾಲೇಜಿನ ಅಸಿಸ್ಟೆಂಟ್ ಮ್ಯಾನೇಜರ್​/ಪ್ರಿನ್ಸಿಪಾಲ್ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿದ್ದ.

    ಇದನ್ನೂ ಓದಿ: ನ್ಯಾಯಾಲಯಗಳ ರಜೆ ಆ.7ರವರೆಗೆ ವಿಸ್ತರಣೆ

    ಸ್ಥಳೀಯ ನಿವಾಸಿಯೊಬ್ಬರು ದುಬೆ ವಿರುದ್ಧ ಕೊಲೆಯತ್ನದ ದೂರು ದಾಖಲಿಸಿದ ಕಾರಣ ಗುರುವಾರ ರಾತ್ರಿ ಆತನನ್ನು ಬಂಧಿಸುವುದಕ್ಕಾಗಿ ಪೊಲೀಸರು ತೆರಳಿದ್ದರು. ಇದೇ ವೇಳೆ ದುಬೆ ಬೆಂಬಲಿಗರು ನಡೆಸಿದ ದಾಳಿಗೆ ಪೊಲೀಸರು ಬಲಿಯಾಗಿದ್ದಾರೆ. ಹತ್ಯೆ ಪ್ರಕರಣದ ವಿವರಕ್ಕೆ ಈ ವರದಿ ಓದಿ:

    ಕಾನ್ಪುರದಲ್ಲಿ ಡಿವೈಎಸ್​ಪಿ ಸೇರಿ 8 ಪೊಲೀಸರು ಹುತಾತ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts