More

    ಭೀಮಾತೀರದಲ್ಲಿ ಆರ್​​ಎಸ್​​ಎಸ್​ ಸರಸಂಘಚಾಲಕರ ಸಂಚಲನ; ರಾನಡೆ ಆಶ್ರಮದಲ್ಲಿ ಮೋಹನ್ ಭಾಗವತ್ ವಾಸ್ತವ್ಯ

    ವಿಜಯಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಅವರ ಭೀಮಾತೀರದ ಭೇಟಿ ತೀವ್ರ ಸಂಚಲನ ಮೂಡಿಸಿದೆ. ಇಂಡಿ ತಾಲೂಕಿನ ನಿಂಬಾಳದ ಗುರುದೇವ ರಾನಡೆ ಆಶ್ರಮಕ್ಕೆ ಭಾಗವತ್ ಅವರು ಭೇಟಿ ನೀಡಿದ್ದು, ಕುತೂಹಲ ಕೆರಳಿಸಿದೆ.

    ಇಂಚಗೇರಿ ಮಠದ ಭಕ್ತ ಪರಂಪರೆಯವರಾದ ಮೋಹನ್ ಭಾಗವತ್ ಪ್ರತಿ ವರ್ಷ ಗುರುದೇವ ರಾನಡೆ ಆಶ್ರಮಕ್ಕೆ ಭೇಟಿ ನೀಡುವುದು ವಾಡಿಕೆ. ಅದರಂತೆ ಈ ಸಲ ಜೂ.25ರ ಬೆಳಗ್ಗೆ 11ಕ್ಕೆ ಬಂದು ಇಲ್ಲಿ ತಂಗಿದ್ದ ಭಾಗವತ್, ಜೂ. 26ರ ಸಂಜೆ 4.45ಕ್ಕೆ ನಿರ್ಗಮಿಸಿದ್ದಾರೆ.

    ಭಾಗವತ್ ಅವರೊಂದಿಗೆ ಇತ್ತೀಚೆಗೆ ಪ್ರಕಾಶ ಜಾವಡೇಕರ ಅವರು ಸಹ ಭೇಟಿ ನೀಡುತ್ತಿದ್ದು, ಪ್ರಸಕ್ತ ಭೇಟಿಯಲ್ಲಿ ಅವರೂ ಭಾಗವತ್ ಜತೆಗಿದ್ದರು. ಇಲ್ಲಿಗೆ ಬಂದು ಧ್ಯಾನ ಮಾಡುವುದು ಸಂಪ್ರದಾಯವಾಗಿದೆ.

    ಇದನ್ನೂ ಓದಿ: ಎರಡನೇ ಮಗುವೂ ಹೆಣ್ಣಾಯ್ತೆಂದು ಮೊದಲ ಮಗಳನ್ನು ಕೊಲ್ಲಲು ಯತ್ನಿಸಿದ ತಂದೆ!

    ಇದೊಂದು ಖಾಸಗಿ ಕಾರ್ಯಕ್ರಮವಾದ್ದರಿಂದ ಭೇಟಿ ವಿಷಯ ರಹಸ್ಯವಾಗಿ ಇಡಲಾಗಿತ್ತಲ್ಲದೇ ಯಾರನ್ನೂ ಆಶ್ರಮಕ್ಕೆ ಭೇಟಿ ಕೊಡಲು ಅವಕಾಶ ಕಲ್ಪಿಸಿರಲಿಲ್ಲ. ರಾಜಕೀಯ ಪಕ್ಷಗಳ ಪ್ರಮುಖರು, ಮಾಧ್ಯಮ ಪ್ರತಿನಿಧಿಗಳು ಮಾತ್ರವಲ್ಲದೆ ಸಾರ್ವಜನಿಕರಿಗೂ ನಿಷಿದ್ಧವಿತ್ತು. ಸಂಘದ ಕೆಲವು ಪ್ರಮುಖರು ಮಾತ್ರ ಭಾಗವತ್ ಅವರನ್ನು ಭೇಟಿ ಮಾಡಿ ಪರಿಚಯಿಸಿಕೊಂಡರು.

    ಭೀಮಾತೀರದಲ್ಲಿ ಆರ್​​ಎಸ್​​ಎಸ್​ ಸರಸಂಘಚಾಲಕರ ಸಂಚಲನ; ರಾನಡೆ ಆಶ್ರಮದಲ್ಲಿ ಮೋಹನ್ ಭಾಗವತ್ ವಾಸ್ತವ್ಯ

    ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…

    ಟೆಸ್ಟ್​ ಡ್ರೈವ್ ವೇಳೆ ಮೂರನೇ ಮಹಡಿಯಿಂದ ಬಿದ್ದ ಕಾರು; ಇಬ್ಬರು ಸ್ಥಳದಲ್ಲೇ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts