More

    ವೆಂಕಯ್ಯ ನಾಯ್ಡು ನಂತರ ಆರ್​ಎಸ್​ಎಸ್​ ಮುಖ್ಯಸ್ಥರ ಟ್ವಿಟ್ಟರ್​ ಖಾತೆಯ ನೀಲಿ ಬ್ಯಾಡ್ಜ್​ ಮಾಯ!

    ನವದೆಹಲಿ: ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್​ ಖಾತೆಯ ನೀಲಿ ಬ್ಯಾಡ್ಜ್​ ಮಾಯವಾಗಿ ಮತ್ತೆ ಸೇರ್ಪಡೆಯಾದ ಸುದ್ದಿ ಇಂದು ಬೆಳಗ್ಗೆಯಿಂದ ಎಲ್ಲೆಡೆ ಓಡಾಡುತ್ತಿದೆ. ಅದಕ್ಕೆ ಟ್ವಿಟ್ಟರ್​ ಸ್ಪಷ್ಟನೆಯನ್ನೂ ನೀಡಿದ್ದಾಗಿ. ಇದೀಗ ದೇಶದ ಮತ್ತೋರ್ವ ಗಣ್ಯರಾದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರ ಟ್ವಿಟ್ಟರ್​ ಖಾತೆಯ ನೀಲಿ ಬ್ಯಾಡ್ಜ್​ ಕೂಡ ಕಾಣೆಯಾಗಿದೆ.

    ಯಾವುದೇ ಗಣ್ಯರ ಟ್ವಿಟ್ಟರ್​ ಖಾತೆಯನ್ನು ಅಧಿಕೃತವೆಂದು ಗುರುತಿಸಲು ನೀಲಿ ಬ್ಯಾಡ್ಜ್​ ನೀಡಲಾಗುತ್ತದೆ. ಅದರಂತೆ ಮೋಹನ್​ ಭಾಗವತ್​ ಅವರ ಟ್ವಿಟ್ಟರ್​ ಖಾತೆಗೂ ನೀಲಿ ಬ್ಯಾಡ್ಜ್​ ನೀಡಲಾಗಿತ್ತು. ಆದರೆ 2019ರಲ್ಲಿ ಟ್ವಿಟ್ಟರ್​ ಸೇರಿದ ಮೋಹನ್​ ಭಾಗವತ್​ ಇದುವರೆಗೂ ಒಂದೇ ಒಂದು ಟ್ವೀಟ್​ನ್ನಾಗಲೀ ಅಥವಾ ಒಂದೇ ರಿಟ್ವೀಟ್​ ಆಗಲಿ ಮಾಡಿಲ್ಲ. ಯಾವ ಟ್ವೀಟ್​ಗಳಿಗೂ ಲೈಕ್​ ಕೂಡ ಕೊಟ್ಟಿಲ್ಲ. ಬ್ಲೂ ಬ್ಯಾಡ್ಜ್​ ಇರುವ ಈ ಖಾತೆ ಸಕ್ರಿಯವಾಗಿಲ್ಲದಿರುವುದನ್ನು ಗಮನಿಸಿರುವ ಟ್ವಿಟ್ಟರ್​ ಅವರ ಬ್ಲೂ ಬ್ಯಾಡ್ಜ್​ ಅನ್ನು ತೆಗೆದುಹಾಕಿದೆ. ಮೋಹನ್​ ಭಾಗವತ್​ ಅವರು ಟ್ವಿಟ್ಟರ್​ನಲ್ಲಿ 2.11ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದು, ಅವರು ಕೇವಲ ಆರ್​ಎಸ್​​ಎಸ್​ ಖಾತೆಯನ್ನು ಹಿಂಬಾಲಿಸುತ್ತಿದ್ದಾರೆ.

    ಶನಿವಾರ ಬೆಳಗ್ಗೆಯೇ ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್​ ಖಾತೆಯ ಬ್ಲ್ಯೂ ಟಿಕ್​ ತೆಗೆದು ಮತ್ತೆ ಕೊಡಲಾಗಿತ್ತು. ತೆಗೆದುಹಾಕಿದ್ದಕ್ಕೆ ಕಾರಣ ನೀಡಿದ್ದ ಟ್ವಿಟರ್​, ವೆಂಕಯ್ಯ ನಾಯ್ಡು ಅವರ ಟ್ವಿಟರ್​ ಖಾತೆ ಬಹಳ ದಿನಗಳಿಂದ ನಿಷ್ಕ್ರಿಯಗೊಂಡಿದ್ದರಿಂದ ಅದನ್ನು ತೆಗೆಯಲಾಯಿತೇ ಹೊರತು ಬೇರೆ ಉದ್ದೇಶವಿಲ್ಲ ಎಂದು ಹೇಳುವ ಮೂಲಕ ಮತ್ತೆ ಬ್ಲೂ ಟಿಕ್​​ ಮಾರ್ಕ್​ ಅನ್ನು ಮರುಸ್ಥಾಪಿಸಿತ್ತು. (ಏಜೆನ್ಸೀಸ್)

    ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟರ್​ ಖಾತೆಯ ಬ್ಲೂ ಟಿಕ್​ ತೆಗೆದು ಮರುಸ್ಥಾಪನೆ: ಟ್ವಿಟರ್ ಕೊಟ್ಟ ಕಾರಣ ಹೀಗಿದೆ…​

    ಮಗನ ಕಷ್ಟ ನೋಡಲಾಗುತ್ತಿಲ್ಲ, ದಯಾಮರಣ ಕೊಡಿ ಎಂದು ಅರ್ಜಿ ಸಲ್ಲಿಸಿದ ಎರಡೇ ಗಂಟೆಗಳಲ್ಲಿ ಮಡಿಲಲ್ಲೇ ಪ್ರಾಣ ಬಿಟ್ಟ ಮಗ

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts