More

    8 ಕೋಟಿ ರೂಪಾಯಿ ಚಿನ್ನ ಕಳ್ಳಸಾಗಣೆಗೆ ಸ್ವಪ್ನಾ ಗ್ಯಾಂಗ್ ಪಡೆದ ಕಮಿಷನ್ ಎಷ್ಟು?

    ಕೊಚ್ಚಿ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಮತ್ತು ಸರಿತ್​ ಅವರು ಇದುವರೆಗೆ ಸಾಗಿಸಿದ ಚಿನ್ನದ ಪ್ರಮಾಣ ನೋಡಿದರೆ ಎಲ್ಲರ ಹುಬ್ಬೇರದೇ ಇರದು. ಡಿಪ್ಲೋಮ್ಯಾಟಿಕ್ ಆಗಿ ಚಿನ್ನ ಕಳ್ಳಸಾಗಣೆ ಮಾಡಿದಾಗ ಅವರಿಗೆ ಸಿಕ್ಕ ಆದಾಯವೆಷ್ಟು? ಸಹಜ ಕುತೂಹಲದ ಪ್ರಶ್ನೆ ಇದು.. ತನಿಖೆ ವೇಳೆ ಜುವೆಲ್ಲರಿ ಮಾಲೀಕರೊಬ್ಬರು ಕಮಿಷನ್ ವಿಚಾರ ಬಾಯ್ಬಿಟ್ಟಿದ್ದಾರೆ!

    ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿರುವ ಮಲಪ್ಪುರಂನ ಎಸ್​ಎಸ್​ ಜುವೆಲ್ಲರಿ ಮಾಲೀಕ ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿ ಹಲವಾರು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇದರಂತೆ, ಕಳ್ಳಸಾಗಣೆ ಮೂಲಕ ಚಿನ್ನ ತಂದು ಕೊಡುತ್ತಿದ್ದ ಸ್ವಪ್ನಾ ಸುರೇಶ್ ಮತ್ತು ಸರಿತ್ ಅವರಿಗೆ ಸಿಗುತ್ತಿದ್ದ ಕಮಿಷನ್ ಪ್ರಮಾಣವೂ ಬಹಿರಂಗವಾಗಿದೆ.

    ಇದನ್ನೂ ಓದಿ: ಜೂನ್ ಒಂದೇ ತಿಂಗಳಲ್ಲಿ 70 ಕಿಲೋ ಚಿನ್ನ ಕಳ್ಳಸಾಗಣೆ- ಇದು ಕೇರಳದ “ಬಂಗಾರಿ” ಗ್ಯಾಂಗ್​ನ ಕಥೆ

    ದುಬೈನಿಂದ ಕೇರಳಕ್ಕೆ ಚಿನ್ನ ಕಳ್ಳಸಾಗಣೆ ಮಾಡಿ ಜುವೆಲ್ಲರಿಯವರಿಗೆ ಪೊರೈಸಲಾಗುತ್ತದೆ. ಮಲಪ್ಪುರಂ ಎಸ್​ಎಸ್​ ಜುವೆಲ್ಲರಿಗೆ ಸ್ವಪ್ನಾ ಮತ್ತು ಗ್ಯಾಂಗ್​ನವರು 8 ಕೋಟಿ ರೂಪಾಯಿ ಮೌಲ್ಯದ ಚಿನ್ನ ತಲುಪಿಸಿದ್ದಾರೆ. ಎಂಟು ಕೋಟಿ ರೂಪಾಯಿಯನ್ನು ರಮೀಝ್​, ಜಲಾಲ್​, ಹಮಜತ್​ ಅಲಿ ಮತ್ತು ಸಂದೀಪ್ ಒದಗಿಸಿದ್ದರು. ಈ ಚಿನ್ನವನ್ನು ಜುವೆಲ್ಲರಿಗೆ ತಲುಪಿಸಿದ ಬಳಿಕ ಸ್ವಪ್ನಾ ಮತ್ತು ಸರಿತ್​ಗೆ 7 ಲಕ್ಷ ರೂಪಾಯಿಯನ್ನು ಕಮಿಷನ್ ರೂಪದಲ್ಲಿ ನೀಡಲಾಗಿತ್ತು!.

    ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!

    ಹಣ ಹೊಂದಿಸಿಕೊಟ್ಟವರ ಪೈಕಿ ಜಲಾಲ್ ಎಂಬಾತನಿಗೆ ಜುವೆಲ್ಲರಿಗಳ ಸಂಪರ್ಕವಿದೆ. ಈ ರೀತಿ ಹಣ ಹೂಡಿದವರನ್ನೂ ಬಂಧಿಸಿದ್ದಾಋಎ. ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ‘ಬಂಗಾರಿ’ಯ ಅರಬ್​ ಲಿಂಕ್​- ಕಳ್ಳಸಾಗಣೆ ಚಿನ್ನ ಯುಎಇ ಕಾನ್ಸುಲೇಟ್​ಗೆ 12 ಸಲ ತರಲಾಗಿತ್ತಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts