More

    ಜುಲೈ 01ರಿಂದ ‘ಆರ್​ಆರ್​ಆರ್​’ ಚಿತ್ರೀಕರಣ ಶುರು

    ಹೈದರಾಬಾದ್​: ದೇಶಾದ್ಯಂತ ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ, ಬೇರೆಬೇರೆ ಭಾಷೆಗಳಲ್ಲಿ ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ. ಈಗಾಗಲೇ ಮುಂಬೈನಲ್ಲಿ ಕೆಲವು ಹಿಂದಿ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಿದೆ. ಈಗ ಟಾಲಿವುಡ್​ನಲ್ಲೂ ಚಿತ್ರೀಕರಣ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ.

    ಇದನ್ನೂ ಓದಿ: ಅಮರಿಕಾಗೆ ಹೋಗಲು ವಿಶೇಷ ಅನುಮತಿ ಪಡೆದ ರಜನಿಕಾಂತ್​

    ಮೊದಲ ಹಂತವಾಗಿ ನಿತಿನ್​ ಮತ್ತು ತಮನ್ನಾ ಭಾಟಿಯಾ ನಿರ್ದೇಶನದ ‘ಮೇಸ್ಟ್ರೋ’ ಚಿತ್ರದ ಚಿತ್ರೀಕರಣ ಹೈದರಾಬಾದ್​ನಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಕೆಲವೇ ಮಂದಿಯನ್ನು ಇಟ್ಟುಕೊಂಡು ಚಿತ್ರೀಕರಣ ಪ್ರಾರಂಭಿಸಲಾಗಿದೆ. ಸದ್ಯದಲ್ಲೇ ಸಮಂತಾಮ ನಾಗಚೈತನ್ಯ ಮತ್ತು ರವಿತೇಜ ಅಭಿನಯದ ಹೊಸ ಚಿತ್ರಗಳ ಚಿತ್ರೀಕರಣ ಸಹ ಪ್ರಾರಂಭವಾಗಲಿದೆಯಂತೆ.

    ಇನ್ನು, ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದ ಚಿತ್ರೀಕರಣ ಸಹ ಜುಲೈ 01ರಂದು ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಜ್ಯೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ತೇಜ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ಕಳೆದ ವರ್ಷ ಲಾಕ್​​ಡೌನ್​ನಿಂದ ಹಲವು ತಿಂಗಳುಗಳ ಬ್ರೇಕ್​ ನೀಡಲಾಗಿತ್ತು. ಲಾಕ್​ಡೌನ್​ ಮುಗಿದ ನಂತರ ಮತ್ತೆ ಚಿತ್ರೀಕರಣ ಪ್ರಾರಂಭಿಸಲಾಗಿತ್ತು.

    ಇದನ್ನೂ ಓದಿ: ಅಲ್ಲು ಅರ್ಜುನ್​ ಅಭಿನಯದ ‘ಪುಷ್ಪಾ’, 10 ‘ಕೆಜಿಎಫ್​’ಗಳಿಗೆ ಸಮವಂತೆ …

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಮುಗಿದು, ಬಿಡುಗಡೆಗೆ ಅಣಿಯಾಗಿರಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದು, ಬಹುಶಃ 2022ರ ಸಂಕ್ರಾಂತಿ ಸಮಯದಲ್ಲಿ ಚಿತ್ರ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ. ಅದಕ್ಕೂ ಮುನ್ನ, ಬಾಕಿ ಇರುವ ಚಿತ್ರೀಕರಣವನ್ನು ಜುಲೈ 1ರಿಂದ ಪ್ರಾರಂಭಿಸಿ, ಆದಷ್ಟು ಬೇಗ ಮುಗಿಸುವುದಕ್ಕೆ ರಾಜಮೌಳಿ ಸ್ಕೆಚ್​ ಹಾಕಿದ್ದಾರೆನ್ನಲಾಗಿದೆ.

    ಇದು ಯಾವುದೋ ಪ್ರತಿಮೆಯಲ್ಲ; ಮಣ್ಣು ಮೆತ್ತುಕೊಂಡಿರುವ ಈ ನಟಿ ಯಾರೆಂದು ಗುರುತಿಸಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts