More

    ಮುನಿರತ್ನ ವಿರುದ್ಧ ಕಣಕ್ಕಿಳಿಯಲು ಕೈ ನಾಯಕರ ಹಿಂದೇಟು: ಡಿ.ಕೆ. ರವಿ ಪತ್ನಿಗೆ ಒಲಿಯುತ್ತಾ ಅದೃಷ್ಟ?

    ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳು ಉಪಚುನಾವಣೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ಪಕ್ಷಗಳ ನಾಯಕರು ತೊಡಗಿಕೊಂಡಿದ್ದಾರೆ.

    ಆಡಳಿತಾ ರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್​ ಪಾಲಿಗೆ ಉಪಚುನಾವಣೆ ಮುಂದಿನ ರಾಜಕೀಯದ ಭವಿಷ್ಯದ ಪರೀಕ್ಷೆಯಾಗಿದ್ದು, ಮೂರು ಪಕ್ಷಗಳು ಚುನಾವಣೆ ಗೆಲುವಿಗೆ ತಂತ್ರಗಳನ್ನು ಎಣೆಯುತ್ತಿದ್ದಾರೆ.

    ರಾಜ್ಯ ಬಿಜೆಪಿ ಕಮಿಟಿಯು ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಕ್ಕೆ ಮುನಿರತ್ನ ಮತ್ತು ಮುನಿರಾಜುಗೌಡ ಹೆಸರು ಶಿಫಾರಸು ಮಾಡಿದೆ. ಆದರೆ, ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಪತನದ ಭಾಗವಾಗಿದ್ದ ಮುನಿರತ್ನಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗಿದೆ.

    ಇದನ್ನೂ ಓದಿ: ಕರೊನಾ ನಿಯಮ, ನಿಷೇಧಾಜ್ಞೆ ಉಲ್ಲಂಘಿಸಿ ದೌಡು- ಎಫ್​ಐಆರ್​ ಸುಳಿಗೆ ರಾಹುಲ್​, ಪ್ರಿಯಾಂಕಾ

    ಇನ್ನು ಕಾಂಗ್ರೆಸ್​ಗೆ ಶಕ್ತಿಯುವ ಅಭ್ಯರ್ಥಿಯ ಕೊರತೆ ಇದೆ. ಇತ್ತ ಡಿ.ಕೆ. ರವಿ ಮಾವ ಹಾಗೂ ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್​ ಎರಡು ಪಕ್ಷದ ನಾಯಕರ ಜತೆ ಮಾತುಕತೆ ನಡೆಸುತ್ತಿದ್ದು, ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ.

    ಡಿ.ಕೆ. ರವಿ ಪತ್ನಿ ಹಾಗೂ ಹನುಮಂತರಾಯಪ್ಪ ಮಗಳು ಕುಸುಮಾರನ್ನು ಕಾಂಗ್ರೆಸ್​ ಅಭ್ಯರ್ಥಿ ಮಾಡುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಒಲವಿದೆ ಎನ್ನಲಾಗಿದ್ದು, ಮುನಿರತ್ನ ವಿರುದ್ಧ ಮಹಿಳೆಯನ್ನು ಕಣಕ್ಕೆ ಇಳಿಸುವ ತಂತ್ರ ಎಣೆಯುತ್ತಿದ್ದಾರೆಂಬ ವಿಚಾರ ತಿಳಿದುಬಂದಿದೆ.

    ಬಿಜೆಪಿಯಿಂದ ಮುನಿರತ್ನ ಅಭ್ಯರ್ಥಿಯಾದ್ರೆ, ಕಣಕ್ಕೆ ಇಳಿಯಲು ಮಾಗಡಿ ಬಾಲಕೃಷ್ಣ ಹಿಂದೇಟು ಹಾಕಿದ್ದಾರೆ. ಇತ್ತ ರಕ್ಷಾ ರಾಮಯ್ಯ ಪರ ಪರಮೇಶ್ವರ್ ಬ್ಯಾಟ್​ ಬೀಸಿದ್ದು, ಮುನಿರತ್ನ ವಿರುದ್ಧ ಸ್ಪರ್ಧೆ ಮಾಡಲು ಬಹುತೇಕ ಕೈ ಆಕಾಂಕ್ಷಿಗಳು ಹಿಂದೇಟು ಹಾಕುತ್ತಿದ್ದಾರೆ. ಮುನಿರತ್ನ ಆದ್ರೆ ಹಣದ ತೊಂದರೆ ಆಗಲಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹೇಳಿದ್ದಾರೆನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

    ಟಿಕ್​ಟಾಕ್​ ಸ್ಟಾರ್​ ಲೈವ್​ ಶೋ ನಡುವೆಯೇ ಮನೆಗೆ ನುಗ್ಗಿದ ಮಾಜಿ ಪತಿಯಿಂದ ನಡೆಯಿತು ಭೀಕರ ಕೃತ್ಯ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts