More

    ಲಾಕ್‌ಡೌನ್‌ನಲ್ಲಿ ಲಯ ಕಳೆದುಕೊಂಡರೇ ರೊನಾಲ್ಡೋ?

    ರೋಮ್: ಕರೊನಾ ಹಾವಳಿಯಿಂದ ಲಾಕ್‌ಡೌನ್ ಘೋಷಣೆಯಾದ ಬೆನ್ನಲ್ಲೇ ವಿಶ್ವದೆಲ್ಲೆಡೆ ಫುಟ್‌ಬಾಲ್ ಲೀಗ್‌ಗಳೆಲ್ಲ ಸ್ಥಗಿತಗೊಂಡಿದ್ದವು. ಆದರೆ ಈಗ ಯುರೋಪ್‌ನಲ್ಲಿ ನಿಧಾನವಾಗಿ ಒಂದೊಂದೇ ಫುಟ್‌ಬಾಲ್ ಲೀಗ್‌ಗಳು ಪುನರಾರಂಭಗೊಳ್ಳುತ್ತಿವೆ. ಇಟಲಿಯಲ್ಲೂ ಕ್ಲಬ್ ಫುಟ್‌ಬಾಲ್ ಟೂರ್ನಿಗಳು ಮತ್ತೆ ಆರಂಭಗೊಂಡಿವೆ. ಆದರೆ ಜುವೆಂಟಸ್ ತಂಡದ ಸ್ಟಾರ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಅವರ ಆಟದಲ್ಲಿ ಮಾತ್ರ ಹಿಂದಿನ ಮ್ಯಾಜಿಕ್ ಕಾಣಿಸುತ್ತಿಲ್ಲ.

    ಇದನ್ನೂ ಓದಿ: ಸಚಿನ್ ತೆಂಡುಲ್ಕರ್ ನಾಯಕರಾಗಿ ಯಾಕೆ ಯಶಸ್ವಿಯಾಗಲಿಲ್ಲ? ಮದನ್ ಲಾಲ್ ಕೊಡ್ತಾರೆ ಕಾರಣ…

    ಮೂರು ತಿಂಗಳ ವಿಶ್ರಾಂತಿಯ ಬಳಿಕ ಮೈದಾನಕ್ಕೆ ಇಳಿದಿರುವ ಪೋರ್ಚುಗಲ್ ಸ್ಟ್ರೈಕರ್ ರೊನಾಲ್ಡೊ ಅವರ ಆಟ ಈಗ ಸಾಧಾರಣವೆನಿಸಿದೆ. ಲಾಕ್‌ಡೌನ್‌ಗೆ ಮುನ್ನ ಆಡಿದ್ದ 14 ಪಂದ್ಯಗಳಲ್ಲಿ ರೊನಾಲ್ಡೊ 19 ಗೋಲು ಸಿಡಿಸಿದ್ದರು. ಆದರೆ ಲಾಕ್‌ಡೌನ್ ಬಳಿಕ ಮರಳಿ ಕಣಕ್ಕಿಳಿದಿರುವ 35 ವರ್ಷದ ರೊನಾಲ್ಡೊ, ಆಡಿದ ಮೊದಲ 2 ಪಂದ್ಯಗಳಲ್ಲಿ ಒಂದೂ ಗೋಲು ಸಿಡಿಸಲಾಗದೆ ಪರದಾಡುತ್ತಿದ್ದಾರೆ.

    ಲಾಕ್‌ಡೌನ್‌ನಲ್ಲಿ ಲಯ ಕಳೆದುಕೊಂಡರೇ ರೊನಾಲ್ಡೋ?

    ಇದನ್ನೂ ಓದಿ: ಕೊಹ್ಲಿ, ಧೋನಿ, ರೋಹಿತ್ ಹುಡುಗಿಯರಾಗಿದ್ದರೆ ಹೇಗೆ ಕಾಣುತ್ತಿದ್ದರು ಗೊತ್ತೇ?

    ‘ರೊನಾಲ್ಡೊ ಅವರ ದೈಹಿಕ ಸ್ಥಿತಿ ಈಗ ಕೆಟ್ಟದಾಗಿಲ್ಲ. ಲಾಕ್‌ಡೌನ್ ಸಮಯದಲ್ಲಿ ಅವರು ಫಿಟ್ನೆಸ್‌ನತ್ತ ಹೆಚ್ಚಿನ ಕಾಳಜಿಯನ್ನೇ ವಹಿಸಿದ್ದಾರೆ. ಆದರೆ ಮೈದಾನದಲ್ಲಿ ಅವರ ಚಲನೆ ಹಿಂದಿನ ವೇಗದಲ್ಲಿಲ್ಲ. ಸುದೀರ್ಘ ಕಾಲದಿಂದ ಯಾವುದೇ ಪಂದ್ಯಗಳನ್ನು ಆಡದಿರುವುದರಿಂದ ಇದನ್ನು ಸಾಮಾನ್ಯ ಎಂದು ಭಾವಿಸಬಹುದು’ ಎಂದು ಜುವೆಂಟಸ್ ತಂಡದ ಕೋಚ್ ಮೌರಿಜಿಯೋ ಸರ‌್ರಿ ತಿಳಿಸಿದ್ದಾರೆ.

    ಇದನ್ನೂ ಓದಿ: ಭಾರತೀಯ ಕ್ರಿಕೆಟ್ ಚಿತ್ರಣವನ್ನೇ ಬದಲಾಯಿಸಿದ ಕಪಿಲ್ ದೇವ್ ಇನಿಂಗ್ಸ್‌ಗೆ 37 ವರ್ಷ

    ಕಳೆದ ಬುಧವಾರ ನಡೆದ ಇಟಾಲಿಯನ್ ಕಪ್ ಫುಟ್‌ಬಾಲ್ ಫೈನಲ್ ಪಂದ್ಯದಲ್ಲಿ ನಪೋಲಿ ತಂಡದ ವಿರುದ್ಧ ಜುವೆಂಟಸ್ ಗೋಲು ರಹಿತ ಡ್ರಾ ಸಾಧಿಸಿದ ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಕಂಡಿತ್ತು. ಪಂದ್ಯದಲ್ಲಿ ನೀರಸ ನಿರ್ವಹಣೆ ತೋರಿದ್ದ ರೊನಾಲ್ಡೊ, ಪೆನಾಲ್ಟಿ ಶೂಟೌಟ್‌ನಲ್ಲಿ ಕೊನೆಯ ಸ್ಪಾಟ್ ಕಿಕ್ ಮಾಡಬೇಕಾಗಿತ್ತು. ಆದರೆ ಅದಕ್ಕೆ ಮುನ್ನವೇ ಜುವೆಂಟಸ್ ತಂಡ 4-2ರಿಂದ ಸೋಲು ಕಂಡಿತ್ತು. ಕಳೆದ ವಾರ ಸೆಮಿಫೈನಲ್ ಪಂದ್ಯದಲ್ಲೂ ಎಸಿ ಮಿಲಾನ್ ವಿರುದ್ಧ ಮೊದಲ ಪೆನಾಲ್ಟಿಯಲ್ಲಿ ವಿಫಲರಾದ ಬಳಿಕ ರೊನಾಲ್ಡೊ, ಮೈದಾನದಲ್ಲಿ ಇದ್ದೂ ಇಲ್ಲದಂತಿದ್ದರು. ಮುಂಬರುವ ಸೆರ‌್ರಿ ಎ ಪಂದ್ಯಗಳಲ್ಲಾದರೂ ರೊನಾಲ್ಡೊ ಲಯ ಕಂಡುಕೊಳ್ಳುವರೇ ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

    ನತಾಶಾಗೆ ಹಾರ್ದಿಕ್ ಪಾಂಡ್ಯ ರೋಮ್ಯಾಂಟಿಕ್ ಗಿಫ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts