More

    ಸ್ವಾಮೀಜಿಗಳ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ; ಪ್ರಭುಲಿಂಗಪ್ಪ

    ರಾಣೆಬೆನ್ನೂರ: ಸಿದ್ಧಗಂಗ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿಯವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಎಲ್ಲರೂ ಮಾದರಿ ವ್ಯಕ್ತಿಗಳಾಗಿ ಜೀವನ ಮಾಡಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಹೇಳಿದರು.
    ನಗರದ ಲಯನ್ಸ್ ಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಿದ್ಧಗಂಗ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿಯವರ ಗುರುಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಸಿದ್ಧೇಶ್ವರ ಸ್ವಾಮೀಜಿಯವರು 19ನೇ ವಯಸ್ಸಿನಲ್ಲಿ ಸಿದ್ದಾಂತ ಶಿಖಾಮಣಿ ಎಂಬ ಗ್ರಂಥ ರಚಿಸಿದರು. ಇದರ ಜತೆಗೆ 20ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದಿದ್ದಾರೆ. ನಾಡಿನ ತುಂಬ ತಮ್ಮ ಪ್ರವಚನ ನೀಡಿ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.
    ಎಂ.ಎಸ್. ಅರಕೇರಿ ಅಧ್ಯಕ್ಷತೆ ವಹಿಸಿದ್ದರು.
    ಪ್ರಮುಖರಾದ ಟಿ. ವೀರಣ್ಣ, ಕಿರಣಕುಮಾರ ಅಂತರವಳ್ಳಿ, ಗುತ್ತೆಪ್ಪ ಹಳೇಮನಿ, ಎಲ್.ಜಿ. ಶೆಟ್ಟರ, ಟಿ.ಸಿ. ಪಾಟೀಲ, ಟಿ.ಕೆ.ಎಂ. ಬಸವರಾಜಯ್ಯ, ಅಶೋಕ ಹೊಟ್ಟಿಗೌಡ್ರ, ಮಹೇಶ ಅಡಿವೆಪ್ಪನವರ, ಅಶೋಕ ಗಂಗನಗೌಡ್ರ, ಜಟ್ಟೆಪ್ಪ ಕರೇಗೌಡ್ರ, ಬಸವರಾಜ ಬಡಿಗೇರ, ಡಾ. ಸಂಜಯ ನಾಯಕ, ಶಿವಪ್ಪ ಗುರಿಕಾರ, ಅಮೋಘ ಬದಾಮಿ, ಸಂದೀಪ ಹಲಗೇರಿ, ಕೊಟ್ರೇಶಪ್ಪ ಎಮ್ಮಿ ಮತ್ತಿತರರು ಉಪಸ್ಥಿತರಿದ್ದರು.
    ಆರ್.ವಿ. ಸೂರಗೊಂಡ ಸ್ವಾಗತಿಸಿದರು. ಎಂ.ಎಚ್. ಪಾಟೀಲ ನಿರೂಪಿಸಿದರು. ಜಿ.ಎಂ. ಬಿದರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts