More

    ಬಿಗ್​ಬಾಸ್​ ವಿನ್ನರ್​ಗೆ ಹಿಟ್​ಮ್ಯಾನ್​ ರೋಹಿತ್​ ಸರ್ಪ್ರೈಸ್​ ಗಿಫ್ಟ್​ ನೀಡಿದ್ದೇಕೆ? ಇಲ್ಲಿದೆ ಕುತೂಹಲಕಾರಿ ಸಂಗತಿ!

    ಹೈದರಾಬಾದ್​: ಟೀಮ್​ ಇಂಡಿಯಾದ ಆರಂಭಿಕ ಆಟಗಾರ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಅವರು ತೆಲುಗಿನ ನಾಲ್ಕನೇ ಆವೃತ್ತಿಯ ಬಿಗ್​ಬಾಸ್​ ವಿಜೇತ ಅಭಿಜಿತ್​ಗೆ ವಿಶೇಷ ಉಡುಗೊರೆಯೊಂದನ್ನು ಕಳುಹಿಸಿಕೊಟ್ಟಿದ್ದಾರೆ.

    ಉಡುಗೊರೆ ಮಾತ್ರವಲ್ಲದೆ ದೂರವಾಣಿ ಕರೆ ಮೂಲಕ ಉಭಯ ಕುಶಲೋಪರಿಯನ್ನು ವಿಚಾರಿಸಿದ್ದಾರೆ. ಅಂದಹಾಗೆ ಉಡುಗೊರೆಯನ್ನಾಗಿ ತಮ್ಮ ಹಸ್ತಾಕ್ಷರವುಳ್ಳ ಟೀಮ್​ ಇಂಡಿಯಾದ ಜರ್ಸಿಯನ್ನು ಅಭಿಜಿತ್​ಗೆ ರೋಹಿತ್​ ಕಳುಹಿಸಿಕೊಟ್ಟಿದ್ದಾರೆ. ಟ್ವಿಟರ್​ನಲ್ಲಿ ಫೋಟೋ ಶೇರ್​ ಮಾಡುವ ಮೂಲಕ ಈ ವಿಚಾರವನ್ನು ಅಭಿಜಿತ್​ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ, ಹನುಮ ವಿಹಾರಿ ಅವರಿಗೂ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಶುಭಕೋರಿ, ಆದಷ್ಟು ಬೇಗ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.

    ಇದನ್ನೂ ಓದಿರಿ: ಧಾರವಾಡದಲ್ಲಿ ಭೀಕರ ಅಪಘಾತ! 13ಕ್ಕೇರಿದ ಸಾವಿನ ಸಂಖ್ಯೆ, ಮಾಜಿ ಶಾಸಕರ ಸೊಸೆಯೂ ದುರ್ಮರಣ

    ತೆಲುಗು ಬಿಗ್​ಬಾಸ್ ಸೀಸನ್​ ಬಗ್ಗೆ ಮಾತನಾಡುವಾಗ ವಿಹಾರಿ, ವಿಜೇತ ಅಭಿಜಿತ್​ ಬಗ್ಗೆ ರೋಹಿತ್​ ಜತೆ ಚರ್ಚಿಸಿದ್ದಾರೆ. ಅಲ್ಲದೆ, ಅಭಿಜಿತ್​, ರೋಹಿತ್​ ಶರ್ಮಾರ ದೊಡ್ಡ ಅಭಿಮಾನಿ ಎಂತಲು ಹೇಳಿದ್ದಾರೆ. ತಕ್ಷಣ ಅಭಿಜಿತ್​ಗೆ ಕರೆ ಮಾಡಿದ ರೋಹಿತ್​, ಅಭಿಜಿತ್​ಗೆ ಸರ್ಪ್ರೈಸ್​ ನೀಡಿದ್ದಾರೆ.

    ಕೇವಲ ಮಾತನಾಡದೇ ಅಭಿಜಿತ್​ಗೆ ರೋಹಿತ್​ ತಮ್ಮ ಹಸ್ತಾಕ್ಷರವುಳ್ಳ ಟೀಮ್​ ಇಂಡಿಯಾ ಜರ್ಸಿ ಸಹ ಗಿಫ್ಟ್​ ನೀಡಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿರಿ: ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

    PHOTO GALLERY| ಪ್ರಶಾಂತ್- ಪ್ರಭಾಸ್ ‘ಸಲಾರ್​’ ಚಿತ್ರದ ಮುಹೂರ್ತದ ಫೋಟೋಗಳು ಇಲ್ಲಿವೆ…

    VIDEO| ಕಣ್ಣು ಮಿಟುಕಿಸುವಷ್ಟರಲ್ಲಿ ಕೊಚ್ಚಿ ಹೋದ ಯುವತಿ: ಸೆಲ್ಫಿ ದುರಂತದ ಭಯಾನಕ ವಿಡಿಯೋ ವೈರಲ್​!

    ಪೊಲೀಸ್​ ಠಾಣೆ ಮೆಟ್ಟಿಲೇರಿದ ಕಾಗೋಡು ತಿಮ್ಮಪ್ಪರ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts