More

    SRHvsMI, IPL 2024: ಧೋನಿ, ವಿರಾಟ್​ ಬಳಿಕ ಈ ದಾಖಲೆ ಬರೆಯಲಿದ್ದಾರೆ ‘ಹಿಟ್ ಮ್ಯಾನ್’!

    ಹೈದರಾಬಾದ್​: ಐಪಿಎಲ್​ 2024ರ ಆವೃತ್ತಿಯ 8ನೇ ಪಂದ್ಯ ಪ್ಯಾಟ್​ ಕುಮಿನ್ಸ್​ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಹಾರ್ದಿಕ್​ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಹೈದರಾಬಾದ್​ನಲ್ಲಿ ಇಂದು ಭಾರೀ ಹಣಾಹಣಿ ನಡೆಯಲಿದೆ. ಎರಡು ತಂಡಗಳ ನಡುವೆ ಗೆಲುವಿನ ಪೈಪೋಟಿ ಬಲು ಜೋರಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಮುಂಬೈ ಗೆಲುವಿನ ಜತೆಗೆ ದೊಡ್ಡ ಆಶಯವೊಂದು ಹೆಚ್ಚಿದೆ.

    ಇದನ್ನೂ ಓದಿ: ವಿದ್ಯಾರ್ಥಿಗಳು ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿ:ಸಿಇಒ ಬಿ.ಆರ್. ಪೂರ್ಣಿಮಾ ಕರೆ

    ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋತ ಮುಂಬೈ ಇಂಡಿಯನ್ಸ್ ಈ ಬಾರಿ ಆದ್ರೂ ತನ್ನ ಮೊದಲು ಗೆಲುವು ದಾಖಲಿಸಬೇಕು ಎಂದು ಅಭಿಮಾನಿಗಳು ಆಶಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ, ಎಂಐ ತಂಡದ ಮಾಜಿ ಕ್ಯಾಪ್ಟನ್​, ಹಿಟ್ ಮ್ಯಾನ್ ರೋಹಿತ್ ಶರ್ಮಾ. ಇಂದಿನ ಪಂದ್ಯದಲ್ಲಿ ರೋಹಿತ್ ಹೊಸ ಅಧ್ಯಾಯ ಬರೆಯಲಿದ್ದು, ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದು ಈ ಮೈಲಿಗಲ್ಲನ್ನು ಸಾಧಿಸಲು ಸಜ್ಜಾಗಿದ್ದಾರೆ.

    ಐಪಿಎಲ್ ಸೀಸನ್ ಆರಂಭಗೊಳ್ಳುತ್ತಿದ್ದಂತೆ ಜಿಟಿ ವಿರುದ್ಧದ ಮೊದಲ ಪಂದ್ಯದಲ್ಲಿ ಆಕರ್ಷಕವಾಗಿ ಓಪನಿಂಗ್ ಕೊಟ್ಟ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ, ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ನೀಡಿದ 169 ರನ್ ಚೇಸ್‌ನಲ್ಲಿ 29 ಎಸೆತಗಳಲ್ಲಿ 43 ರನ್ ಗಳಿಸಿ, ಎಲ್ಲರ ಪ್ರೀತಿ-ಅಭಿಮಾನಕ್ಕೆ ಪಾತ್ರರಾದರು. ಆದರೆ ಗೆಲ್ಲುವಲ್ಲಿ ಎಡವಿದ ಎಂಐ, 6 ರನ್​ಗಳಿಂದ ಹೀನಾಯ ಸೋಲನ್ನು ಅನುಭವಿಸಿತು.

    ಇದನ್ನೂ ಓದಿ: ಬೆಂಗಳೂರಿನ ವಿವೇಕಾನಂದ ಶಾಲೆಯಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

    ಇಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಎದುರಿಸಲಿರುವ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಪರವಾಗಿ ಆಡಲಿರುವ 200ನೇ ಪಂದ್ಯ ಇದಾಗಲಿದೆ. ಈ ಮೂಲಕ ಹೊಸ ಮೈಲಿಗಲ್ಲನ್ನು ತಲುಪಲಿದ್ದಾರೆ. ಕ್ಯಾಪ್ಟನ್ ಆಗಿ ಇಲ್ಲಿಯವರೆಗೆ ಅದ್ಬುತ ಪ್ರದರ್ಶನ ನೀಡಿರುವ ಹಿಟ್​ ಮ್ಯಾನ್​ ಈ ಪಂದ್ಯದ ಮೂಲಕ 200ನೇ ಪಂದ್ಯ ಆಡಲಿದ್ದು, ಈ ವಿಶೇಷ ದಾಖಲೆಯನ್ನು ವಿರಾಟ್ ಕೊಹ್ಲಿ ಮತ್ತು ಎಂ.ಎಸ್. ಧೋನಿ ಬಳಿಕ ದಾಖಲಿಸಲಿರುವ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ,(ಏಜೆನ್ಸೀಸ್). 

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts