More

    ಎಂ.ಎಸ್​. ಧೋನಿ ಹಿಂದಿಕ್ಕಿದ ವಿರಾಟ್​ ಕೊಹ್ಲಿ: ಕೊಹ್ಲಿಗೆ ಸರಿಸಮಾನಾಗಿ ನಿಂತ ರೋಹಿತ್​ ಶರ್ಮ!

    ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಗೆಲುವು ದಾಖಲಿಸಿ 2-1 ಅಂತರದಿಂದ ಸರಣಿ ಜಯಿಸಿದೆ.

    ಕೊನೆಯ ಪಂದ್ಯದಲ್ಲಿ ರೋಹಿತ್​ ಶರ್ಮ(119) ಅವರ ಆರಂಭಿಕ ಬುನಾದಿ ಮತ್ತು ವಿರಾಟ್​ ಕೊಹ್ಲಿ(89)ಯ ನಾಯಕತ್ವದ ಜವಾಬ್ದಾರಿಯುತ ಆಟದಿಂದಾಗಿ ಟೀಮ್​ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ. ಇದೇ ಪಂದ್ಯದಲ್ಲಿ ಕೊಹ್ಲಿ ಮತ್ತು ರೋಹಿತ್​ ವಿನೂತನ ದಾಖಲೆಯನ್ನು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಏಕದಿನ ಮಾದರಿ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ಹಿಟ್​ ಮ್ಯಾನ್​ ರೋಹಿತ್​ ಶರ್ಮ!

    ನಾಯಕನಾಗಿ ಧೋನಿ ಹಿಂದಿಕ್ಕಿದ ಕೊಹ್ಲಿ
    ತಂಡದ ನಾಯಕನಾಗಿ ವೇಗವಾಗಿ 5000 ರನ್ ದಾಖಲಿಸಿದ ಆಟಗಾರನೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅಲ್ಲದೆ, ಮಾಜಿ ನಾಯಕ ಎಂ.ಎಸ್​. ಧೋನಿಯವರನ್ನು ಹಿಂದಿಕ್ಕಿದ್ದಾರೆ. 5000 ರನ್​ ಮಾಡಲು ಧೋನಿ 127 ಇನ್ನಿಂಗ್ಸ್​ ತೆಗೆದುಕೊಂಡಿದ್ದರು. ಆದರೆ, ಕೊಹ್ಲಿ 82 ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದಾರೆ. 131 ಇನ್ನಿಂಗ್ಸ್​ನಿಂದ 5000 ರನ್​ ಗಳಿಸಿರುವ ಆಸೀಸ್​ ಮಾಜಿ ನಾಯಕ ರಿಕಿ ಪಾಂಟಿಂಗ್​ ಮೂರನೇ ಸ್ಥಾನದಲ್ಲಿದ್ದಾರೆ. ​

    ಕೊಹ್ಲಿಗೆ ಸರಿಸಮಾನವಾಗಿ ನಿಂತ ರೋಹಿತ್​
    ಇಂದಿನ ಪಂದ್ಯದಲ್ಲಿ ರೋಹಿತ್​ 119 ರನ್​ ಬಾರಿಸುವ ಮೂಲಕ 29ನೇ ಏಕದಿನ ಶತಕ ಸಿಡಿಸಿದರು. ಹೀಗಾಗಿ ಆಸೀಸ್​ ವಿರುದ್ಧ 8 ಶತಕವನ್ನು ಬಾರಿಸಿರುವ ಕೊಹ್ಲಿ ದಾಖಲೆಯನ್ನು ರೋಹಿತ್ ಸರಿಗಟ್ಟಿದ್ದಾರೆ. ಆದರೆ, ಈ ಪಟ್ಟಿಯಲ್ಲಿ 9 ಶತಕಗಳೊಂದಿಗೆ ಕ್ರಿಕೆಟ್​ ದಿಗ್ಗಜ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts