More

    ಆತ್ಮಹತ್ಯೆಗೆ ಮುಂದಾಗಿದ್ದರು ರಾಬಿನ್ ಉತ್ತಪ್ಪ!

    ನವದೆಹಲಿ: ಕ್ರೀಡಾ ವೃತ್ತಿಜೀವನದಲ್ಲಿ ಪ್ರತಿಯೊಬ್ಬರಿಗೂ ಏಳು ಬೀಳು ಇರುವುದು ಸಾಮಾನ್ಯದ ಸಂಗತಿ. ಭಾರತದಲ್ಲಿ ಕ್ರಿಕೆಟಿಗರು ಯಾವ ಸೆಲೆಬ್ರಿಟಿಗಳಿಗೇನು ಕಮ್ಮಿಯಿಲ್ಲ. ಅಂಥ ಆಟಗಾರರಿಗೆ ಕ್ರಿಕೆಟ್ ಜೀವವಾಗಿರುತ್ತದೆ. ಕ್ರಿಕೆಟ್ ಅನ್ನು ಧರ್ಮದಂತೆ ಪ್ರೀತಿಸುವ ಭಾರತದಲ್ಲಿ ಫಾರ್ಮ್ ಇದ್ದರಷ್ಟೇ ಕ್ರಿಕೆಟಿಗರಿಗೆ ಬೆಲೆ. ಇಲ್ಲವಾದರೆ ಆತನ ಕಷ್ಟ ಹೇಳತೀರದು. ಭಾರತ ತಂಡದಲ್ಲಿ ಮಿಂಚಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಯಾತನೆಯನ್ನು ಬಿಚ್ಚಿಟ್ಟಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದರಂತೆ ರಾಬಿನ್. ನನ್ನ ಜೀವನದಲ್ಲಿ ಕ್ರಿಕೆಟ್ ಇಲ್ಲದಿದ್ದರೆ ಮನೆಯ ಬಾಲ್ಕನಿಯಿಂದ ಜಿಗಿಯುತ್ತಿದ್ದೆ ಅನಿಸುತ್ತಿದೆ ಎಂದಿದ್ದಾರೆ.

    ಇದನ್ನೂ ಓದಿ: ಈ ಬಾರಿಯ ಐಪಿಎಲ್​ ಹೊರದೇಶದಲ್ಲಿ ಆಯೋಜನೆ ಸಾಧ್ಯತೆ

    ಆತ್ಮಹತ್ಯೆಗೆ ಮುಂದಾಗಿದ್ದರು ರಾಬಿನ್ ಉತ್ತಪ್ಪ!2006ರಲ್ಲಿ ಇಂಗ್ಲೆಂಡ್ ವಿರುದ್ಧ ಕನ್ನಡಿಗ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ರಾಬಿನ್ ಉತ್ತಪ್ಪ, ಮೊದಲ ಪಂದ್ಯದಲ್ಲಿಯೇ 86 ರನ್ ಸಿಡಿಸಿ ಮಿಂಚಿದ್ದರು. ಬಳಿಕ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ನಲೂ ಗಮನಾರ್ಹ ನಿರ್ವಹಣೆ ತೋರಿದ್ದ ರಾಬಿನ್, ವಿಶ್ವ ಚಾಂಪಿಯನ್ ತಂಡದ ಸದಸ್ಯರಾಗಿರುವುದು ಈಗ ಇತಿಹಾಸ. ಆ ಬಳಿಕ ರಾಬಿನ್ ಉತ್ತಪ್ಪ ತಮ್ಮ ಲಯ ಉಳಿಸಿಕೊಳ್ಳಲು ವಿಲರಾದರು. 2009-2011ರ ವೇಳೆ, ಪ್ರತಿದಿನ ನಾನು ನನ್ನನ್ನು ಅವಲೋಕಿಸಿಕೊಳ್ಳುತ್ತಿದೆ. ಅವುಗಳು ಕ್ರಿಕೆಟ್ ಕುರಿತು ಯೋಚಿಸದ ಸನ್ನಿವೇಶಗಳಾಗಿದ್ದವು, ನನ್ನ ಮನಸ್ಸಿಗೆ ಅತ್ಯಂತ ದೂರದ ವಿಷಯಗಳಾಗಿದ್ದವು ಎಂದು 34 ವರ್ಷದ ರಾಬಿನ್ ಉತ್ತಪ್ಪ ಹೇಳಿಕೊಂಡಿದ್ದಾರೆ. ರಾಯಲ್ ರಾಜಸ್ಥಾನ ಫೌಂಡೇಷನ್ ವತಿಯಿಂದ ‘ಮನಸ್ಸು, ದೇಹ, ಆತ್ಮ’ ಕುರಿತು ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಉತ್ತಪ್ಪ ಹೇಳಿಕೊಂಡರು.

    ಇದನ್ನೂ ಓದಿ: ಭಾರತೀಯ ಕ್ರಿಕೆಟ್​ನಲ್ಲೂ ವರ್ಣಭೇದ!: ದೊಡ್ಡ ಗಣೇಶ್, ಮುಕುಂದ್​ಗೆ ಇನ್ನೂ ಕಾಡುತ್ತಿದೆ ನೆನಪು

    ಆತ್ಮಹತ್ಯೆಗೆ ಮುಂದಾಗಿದ್ದರು ರಾಬಿನ್ ಉತ್ತಪ್ಪ!ಈ ದಿನ ನಾನು ಹೇಗೆ ಬದುಕುವುದು, ನಾಳೆ ಬಗ್ಗೆ ಏನೋ, ನನ್ನ ಜೀವ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂದು ಸಾಕಷ್ಟು ಬಾರಿ ಯೋಚಿಸುತ್ತಿದ್ದೆ. ಇಂಥ ನಕಾರಾತ್ಮಕ ಆಲೋಚನೆಗಳನ್ನು ಕ್ರಿಕೆಟ್ ದೂರವಿಟ್ಟಿತು. ಆದರೆ, ಪಂದ್ಯವಿಲ್ಲದ ವೇಳೆ ದಿನಗಳೆಯುವುದು ಅಷ್ಟೇ ಕಷ್ಟಕರವಾಗುತ್ತಿತ್ತು ಎಂದು ಉತ್ತಪ್ಪ ಹೇಳಿದ್ದಾರೆ. ಎಷ್ಟೋ ಸಲ, ಒಂದು, ಎರಡು, ಮೂರು ಎಂದು ಎಣಿಸಿ ಬಾಲ್ಕನಿಯಿಂದ ಹಾರಬೇಕೆಂದು ಯೋಚಿಸಿದ್ದೆ, ಆದರೆ, ಕ್ರಿಕೆಟ್ ಅದರಿಂದ ದೂರ ಉಳಿಸಿತು ಎಂದು ಹೇಳಿದ್ದಾರೆ.

    ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ರಾಬಿನ್ ಉತ್ತಪ್ಪ ರಾಷ್ಟ್ರೀಯ ತಂಡದ ಪರ 46 ಏಕದಿನ, 13 ಟಿ20 ಪಂದ್ಯಗಳನ್ನಾಡಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್‌ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡೆ ಎಂದು ವಿಷಾದಿಸಿದ್ದರು. ಸದ್ಯ ಮುಂದೂಡಲ್ಪಟ್ಟಿರುವ 2020ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 3 ಕೋಟಿಗೆ ಸೇಲಾಗಿದ್ದರು. 2013-14 ಹಾಗೂ 2014-15ರಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ ಕರ್ನಾಟಕ ತಂಡದ ಸದಸ್ಯರಾಗಿದ್ದರು.

    ಬದಲಾದ ಉದಯ … ಕಿರುತೆರೆಗೆ ಬಂದ ರಮೇಶ್​, ಪ್ರಿಯಾಂಕಾ, ಅಜೇಯ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts