More

    ರಾಬರ್ಟ್ ಬೊಕ್ಕಸಕ್ಕೆ 66 ಕೋಟಿ ರೂ.!; 4 ದಿನದ ಗಳಿಕೆ ಲೆಕ್ಕ ಕೊಟ್ಟ ಚಿತ್ರತಂಡ

    ಬೆಂಗಳೂರು: ಒಂದು ಕಾಲಕ್ಕೆ ಚಿತ್ರತಂಡದವರು ತಮ್ಮ ಚಿತ್ರದ ಕಲೆಕ್ಷನ್ ಹೇಳುವುದಕ್ಕೆ ಸಂಕೋಚಪಡುತ್ತಿದ್ದರು. ಕಲೆಕ್ಷನ್ ಹೇಳಿಕೊಂಡು ಎಲ್ಲರ ಕಣ್ಣಿಗೆ ಗುರಿಯಾಗುವುದು ಯಾಕೆ ಎಂದು ಅಂಜುತ್ತಿದ್ದರು. ಆದರೆ, ಈಗ ಕಲೆಕ್ಷನ್ ಹೇಳುವುದು ಹೊಸ ಟ್ರೆಂಡ್ ಆಗಿದೆ. ಮೊದಲ ದಿನವೇ 10.05 ಕೋಟಿ ಕಲೆಕ್ಷನ್ ಆಗಿದೆ ಎಂದು ‘ಪೊಗರು’ ಚಿತ್ರತಂಡದವರು ಘೋಷಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು.

    ಈಗ ‘ರಾಬರ್ಟ್’ ಚಿತ್ರತಂಡದವರು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ‘ರಾಬರ್ಟ್’ ಚಿತ್ರ ಬಿಡುಗಡೆಯಾಗಿ ಐದು ದಿನಗಳಾಗಿವೆ. ಪ್ರತಿ ದಿನದ ಕಲೆಕ್ಷನ್ ಎಷ್ಟಾಗಿದೆ ಎಂದು ಅದರ ಮರುದಿನವೇ ಘೋಷಿಸಲಾಗುತ್ತಿದೆ. ಸದ್ಯಕ್ಕೆ ನಾಲ್ಕು ದಿನಗಳ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದ್ದು, ಚಿತ್ರವು 59.8 ಕೋಟಿ ಸಂಗ್ರಹಿಸಿದೆ ಎಂದು ಚಿತ್ರತಂಡ ಘೋಷಿಸಿದೆ. ಇದು ಬರೀ ಕರ್ನಾಟಕದ ಕಲೆಕ್ಷನ್ ವರದಿ ಮಾತ್ರ.

    ಆಂಧ್ರ ಮತ್ತು ತೆಲಂಗಾಣದಲ್ಲಿ 6.19 ಕೋಟಿ ಸಂಗ್ರಹವಾಗಿದ್ದು, ಒಟ್ಟಾರೆ ನಾಲ್ಕು ದಿನಗಳಲ್ಲಿ 65.99 ಕೋಟಿ ಸಂಗ್ರಹವಾಗಿದೆ ಎಂದು ಚಿತ್ರತಂಡವೇ ಅಂಕಿ-ಅಂಶಗಳ ಸಮೇತ ಬಿಡುಗಡೆ ಮಾಡಿದೆ. ಈ ಪೈಕಿ ಬೆಂಗಳೂರು-ಕೋಲಾರ-ತುಮಕೂರು ಮತ್ತು ದಕ್ಷಿಣ ಕನ್ನಡ ಪ್ರದೇಶಗಳಿಂದ 20 ಕೋಟಿ ಬಂದಿದೆಯಂತೆ. ಇನ್ನು, ಮಂಡ್ಯ-ಮೈಸೂರು-ಹಾಸನ-ಕೂರ್ಗ್ ಪ್ರದೇಶದಿಂದ 12 ಕೋಟಿ, ಚಿತ್ರದುರ್ಗ ಮತ್ತು ದಾವಣಗೆರೆಯಿಂದ ಒಂಬತ್ತು ಕೋಟಿ, ಹೈದರಾಬಾದ್ ಕರ್ನಾಟಕದಿಂದ ಎಂಟು ಕೋಟಿ ಮತ್ತು ಮುಂಬೈ ಕರ್ನಾಟಕದಿಂದ ಆರು ಕೋಟಿ ಸಂಗ್ರಹವಾಗಿದೆಯಂತೆ.

    ಜೊಮ್ಯಾಟೋ ವಿವಾದದ ಹಿತೇಶಾಗೆ ಎಫ್​ಐಆರ್​ ಶಾಕ್​​! ಚಪ್ಪಲಿ ಎಸೆದು ಪೇಚಿಗೆ ಸಿಲುಕಿದ ಇನ್​ಫ್ಲೂಯೆನ್ಸರ್​

    ಮತ್ತೆ ಲಾಕ್​ಡೌನ್​ ಆಗಬಾರದು ಎಂದರೆ ನಿಯಮ ಕಡ್ಡಾಯ ಪಾಲಿಸಿ; ಸದ್ಯಕ್ಕೆ ಒಂದು ವಾರ ಕಾದು ನೋಡುತ್ತೇವೆ ಎಂದರು ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts